ಡೆಂಗಿ ಜ್ವರ ನಿಯಂತ್ರಣ ಎಲ್ಲರ ಜವಾಬ್ದಾರಿ.

 

ಹಿರಿಯೂರು: ಹಿರಿಯೂರು ತಾಲೂಕಿನ ವಾಣಿವಿಲಾಸಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ದಿಂದ ಕುರುಬರಹಳ್ಳಿಯಲ್ಲಿ ಡೆಂಗೆ ವಿರೋಧಿ ಮಾಸಾಚರಣೆ ನಡೆಸಲಾಯಿತು. ಮನೆಯ ಸುತ್ತಮುತ್ತಲಿನ ಸ್ವಚ್ಛತೆಗೆ ಆದ್ಯತೆ ಕೊಡಿ ಎಂದು ಹಿರಿಯ ಆರೋಗ್ಯ ಸಹಾಯಕ ಕುಮಾರ್ ತಿಳಿಸಿದರು.

ಈಡಿಸ್ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಡೆಂಗಿ ಜ್ವರ ಬರಬಹುದು ಎಂದು ತಿಳಿಸಿದರು. ಮನೆಯ ಹಿಂದೆ ಮುಂದೆ ತೊಟ್ಟಿ ಡ್ರಮ್ ಮತ್ತು ಬ್ಯಾರೆಲ್ ಗಳನ್ನು ವಾರಕ್ಕೊಮ್ಮೆ ತೊಳೆದು ಸ್ವಚ್ಛವಾಗಿಡಬೇಕು ಎಂದರು.

ಪಿಡಿಓ ಅನ್ಸಿರ ಬಾನು ಮಾತನಾಡಿ ತಪ್ಪದೆ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಕಡ್ಡಾಯವಾಗಿ ಸೊಳ್ಳೆ ಪರದೆಯನ್ನು ಬಳಸಬೇಕು ಎಂದರು ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೀಣಾ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆ ಹಾಗೂ ಗ್ರಾಮಸ್ಥರು ಇದ್ದರು.

[t4b-ticker]

You May Also Like

More From Author

+ There are no comments

Add yours