ಫೆಬ್ರವರಿ 13 ರಿಂದ ಹಿರಿಯೂರು ತೇರು ಮಲ್ಲೇಶ್ವರ ಜಾತ್ರೆ ಆರಂಭ

 

ಹಿರಿಯೂರು : ನಗರದ ಸುಪ್ರಸಿದ್ಧ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ದೇವರ ಬ್ರಹ್ಮರಥೋತ್ಸವ ಫೆಬ್ರವರಿ 24ರ ಶನಿವಾರ ನಡೆಯಲಿದೆ ಎಂದು ತಹಶೀಲ್ದಾರ್ ರಾಜೇಶ್ ಕುಮಾರ್ ಹೇಳಿದರು.

ಇಲ್ಲಿನ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿಯೂ ರಥೋತ್ಸವವನ್ನು ಭಕ್ತಿ ಭಾವದಿಂದ ಹಾಗೂ ವಿಜೃಂಭಣೆಯಿಂದ ನಡೆಸಲಾಗುವುದು ಇದಕ್ಕೆ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಹಾಗೂ ಕೈವಾಡಸ್ಥರು ಮತ್ತು ಸಮಸ್ತ ಭಕ್ತಾದಿಗಳು ಸಹಕಾರ ನೀಡಬೇಕು ಎಂದು ಕೋರಿದರು. ಫೆಬ್ರವರಿ 13 ರಂದು ಕಂಕಣ ಕಲ್ಯಾಣೋತ್ಸವದೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿವೆ.

ಪ್ರತಿದಿನ ಸಂಜೆ ದೇವರ ಉತ್ಸವಗಳು ನಡೆಯಲಿವೆ 23ರ ಶುಕ್ರವಾರ ಸಂಜೆ ದೊಡ್ಡ ಉತ್ಸವ ನಡೆಯಲಿದ್ದು 24 ರಂದು ಮಧ್ಯಾಹ್ನ ಶ್ರೀ ತೇರುಮಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಸಂಜೆ ಶ್ರೀ ಚಂದ್ರಮೌಳೇಶ್ವರ ಮತ್ತು ಶ್ರೀ ಉಮಾಮಹೇಶ್ವರ ದೇವರ ರಥೋತ್ಸವ ನಡೆಯಲಿದೆ ಎಂದರು.

ಇದನ್ನೂ ಓದಿ:SSLC ಮತ್ತು PUC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಪೂರ್ವಭಾವಿ ಸಭೆಯಲ್ಲಿ ಪೌರಯುಕ್ತರಾದ ಮಹಾಂತೇಶ್, ಪ್ರಸನ್ನ ಕುಮಾರ್ ಜೋಯಿಸ್, ವಿಶ್ವನಾಥಾಚಾರ್ಯ, ನಾಗರಾಜ ಆಚಾರ್ಯ ಮಲ್ಲೇಶ್ ಆಚಾರ್ಯ ಡಾ .ವೀರಣ್ಣ ಬೀರೇನಹಳ್ಳಿ ವೀರಕರಿಯಣ್ಣ ದೇವಸ್ಥಾನದ ಮುಖ್ಯಸ್ಥರಾದ ವೀರಪ್ಪ ವೀರಕರಿಯಣ್ಣ ನಗರಸಭೆ ಮಾಜಿ ಅಧ್ಯಕ್ಷರಾದ ಶಿವರಂಜನಿ ಯಾದವ್ ಆರೋಗ್ಯಧಿಕಾರಿ ಸಂಧ್ಯಾ ಪೊಲೀಸ್ ಇಲಾಖೆ ಎ.ಎಸ್.ಐ.ರಾಘವ ರೆಡ್ಡಿ ಆಡಳಿತಾಧಿಕಾರಿ ಸ್ವಾಮಿ, ವಿಎ ಮಯವರ್ಮ ಬಸವರಾಜ್ ಬೆಸ್ಕಾಂ ಅಧಿಕಾರಿ ರವಿಕುಮಾರ್, ಕೊಟ್ರೇಶ್, ತಾಲೂಕು ಆರೋಗ್ಯ ಅಧಿಕಾರಿ ಟಿ ವೆಂಕಟೇಶ್, ಮುಖಂಡರಾದ ಜಿ.ಎಲ್ ಮೂರ್ತಿ, ವಿ ಎಚ್ ರಾಜು, ಸತ್ಯನಾರಾಯಣ ಮೂರ್ತಿ, ಭೋಜಣ್ಣ, ಜಗದೀಶ್ ಭಂಡಾರಿ ಮಲ್ಲೇಶ್, ದಿವು ಶಂಕರ್, ಶಿವಶಂಕರ್ ಮಠದ್, ಕರ್ಣಕುಮಾರ್, ಪ್ರದೀಪ್ ಮಂಜುನಾಥ್ ಜಯಣ್ಣ ವಿ ಸಿದ್ದೇಶ್ ಎಂ ರವೀಂದ್ರನಾಥ್ ಎಂ ಪಿ ರಾಜು ಎಂ ಕೃಷ್ಣ, ಮಹಾಂತೇಶ್ ಸುರೇಶ್ ಹೆಚ್ ಆರ್ ವಿಜಯ್ ಕುಮಾರ್ ಕೆ.ಆರ್ ರಘು ಅನೇಕ ಮುಖಂಡರು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು

[t4b-ticker]

You May Also Like

More From Author

+ There are no comments

Add yours