ಮಾಧ್ಯಮಗಳು ಮತ್ತು ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು: ವಾಲ್ಮೀಕಿ ಶ್ರೀ ಪ್ರಸನ್ನಾನಂದಸ್ವಾಮಿ

 

ಭರಮಸಾಗರ.ಪತ್ರಿಕಾ ದಿನಾಚರಣೆ.

ಮಾಧ್ಯಮಗಳು ವ್ಯಕ್ತಿಯ ಚಾರಿತ್ರಿಕ ವಧೆ ಮಾಡಬಾರದು
ವಾಲ್ಮೀಕಿ ಗುರುಪೀಠದ
-ರಾಜನಹಳ್ಳಿ ವಾಲ್ಮೀಕಿ ಶ್ರೀ ಪ್ರಸನ್ನನಾಂದಪುರಿ ಮಹಾಸ್ವಾಮಿಜಿಗಳು ಹೇಳಿದರು

ಭರಮಸಾಗರದ ಪ್ರವಾಸಿ ಮಂದಿರದಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಭರಮಸಾಗರ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು

ಕೆಲವೊಮ್ಮೆ ವ್ಯಕ್ತಿಯ ವ್ಯಕ್ತಿತ್ವ ಹರಣ ಮಾಡಲು ಮತ್ತು ತೆಜೋವಧೆಗೆ ಪತ್ರಕರ್ತರು ನಿಂತರೆ ಸಮಾಜದಲ್ಲಿ ಅಸಹಕಾರ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದರು.

ಸಂಕಷ್ಟದ ಸಂದರ್ಭದಲ್ಲಿ ಮಾಧ್ಯಮಗಳು ಮತ್ತು ಪತ್ರಕರ್ತರು ಧ್ವನಿಯಿಲ್ಲದವರ ಪರನಿಲ್ಲಬೇಕಾಗುತ್ತದೆ.ಆಗ ನಿಜಕ್ಕೂ ಪತ್ರಕರ್ತರ ಮಹತ್ವ ಹೆಚ್ಚುತ್ತದೆ ಎಂದು ಹೇಳಿದರು.

ಕೊರೋನಾ ಸಾಂಕ್ರಾಮಿಕ ರೋಗವು ಸಮಾಜದ ನೆಮ್ಮದಿಯನ್ನು ಹಾಳು ಮಾಡಿದೆ ಅದರ ಜೊತೆಗೆ ಮಾಧ್ಯಮಗಳು ಸಹ ಜನರಲ್ಲಿ ಭಯ.ಭೀತಿ ವಾತಾವರಣ ನಿರ್ಮಾಣ ಮಾಡಿದರೆ ಜನರು ನೆಮ್ಮದಿಯನ್ನು ಕಂಡುಕೊಳ್ಳುವುದು ಹೇಗೆ ಎಂದು ವಾಲ್ಮೀಕಿ ಶ್ರೀ ಗಳು ಪ್ರಶ್ನಿಸಿದರು.

ಸಮಾಜದ ಶಾಂತಿ.ನೆಮ್ಮದಿ.ಸೌಹಾರ್ದತೆಗೆ ಮೀಡಿಯಾಗಳು ಕೆಲಸಮಾಡುವುದು ಅನಿವಾರ್ಯವಾಗಿದೆ ಎಂದರು.

ಕೊರೋನಾ ವೃೆರಸ್ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸಬೇಕು ವಿನ: ಭಯ ಉಂಟುಮಾಡದಿರಲು ಸಲಹೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕರಾದ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಪತ್ರಕರ್ತರು ಹಾಗೂ ದೃಶ್ಯ ಮಾಧ್ಯಮಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.

ಪತ್ರಕರ್ತರು ಸಂಕಷ್ಟದಲ್ಲಿರುವ ಜನರಪರ ನಿಂತು ಕೆಲಸ ಮಾಡಬೇಕು.ತಳಸಮುದಾಯಗಳನ್ನು.ಮಹಿಳೆಯರನ್ನು.ಮಕ್ಕಳನ್ನು ಗಂಭೀರವಾಗಿ ಪರಿಗಣಿಸಬೇಕು ಸಾಮಾಜಿಕ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಹೆಚ್ .ಲಕ್ಷ್ಮಣ್ ಅವರು ಮಾತನಾಡಿ ಪತ್ರಕರ್ತರು ವೃತ್ತಿ ಬದುಕನ್ನು ಅರ್ಥಪೂರ್ಣವಾಗಿ ಮುನ್ನಡೆಸಬೇಕು ತಾವು ಕರ್ತವ್ಯ ನಿರ್ವಹಿಸುವ ಪತ್ರಿಕೆಗಳಿಂದ ಪತ್ರಿವರ್ಷ ದಾಖಲಾತಿಗಳನ್ನು ಪಡೆದುಕೊಳ್ಳಲು ಮನವಿ ಮಾಡಿದರು.

ಭರಮಸಾಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪತ್ರಕರ್ತರರಾದ ಪದ್ಮನಾಭರಾವ್.ನಿರಂಜನಮೂರ್ತಿ.ಶಿವಪ್ರಸಾದ್.ಕರಿಬಸಪ್ಪ.ರಾಜು.ಓಂಕಾರಪ್ಪ.ಮಂಜಣ್ಣ.ತಿಪ್ಪೇಸ್ವಾಮಿ.ತಿಪ್ಪೇಸ್ವಾಮಿ ಮುಂತಾದವರು ಹಾಜರಿದ್ದರು .

[t4b-ticker]

You May Also Like

More From Author

+ There are no comments

Add yours