ಐವರ ಅಸ್ಥಿಪಂಜರ ಕೇಸ್, ಸಾವಿನ ರಹಸ್ಯ ಬಯಲು,fsl ವರದಿ ರಿಲೀಸ್

 

ಚಿತ್ರದುರ್ಗ: ಚಿತ್ರದುರ್ಗ ನಗರವನ್ನೆ ಒಂದೇ ಮನೆಯಲ್ಲಿ ಐವರ  ಅಸ್ಥಿಪಂಜರ ಕೇಸ್ ನ FSL ವರದಿ ಹೊರ ಬಂದಿದ್ದು ನಿವೃತ್ತ ಇಇ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಲೀಲ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣ, ನರೇಂದ್ರ ಅವರು ನಿದ್ರೆ ಮಾತ್ರೆ ಸೇವನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ವೈದ್ಯರ ವರದಿಯಲ್ಲಿ ಉಲ್ಲೇಖವಾಗಿದೆ.
ನಗರದ ಚಳ್ಳಕೆರೆ ವೃತ್ತದ ಹಳೆಯ ಬೆಂಗಳೂರು ರಸ್ತೆ ನಿವ ಜಗನ್ನಾಥರೆಡ್ಡಿ ಮನೆಯಲ್ಲಿ ಕುಟುಂಬದ ಐವರ ಮೃತದೇಹಗಳ ಅಸ್ತಿಪಂಜರ ಪತ್ತೆಯಾಗಿತ್ತು. ಮೃತಪಟ್ಟ ದೇಹಗಳು 4-5 ವರ್ಷಗಳ ಬಳಿಕ ಸಿಕ್ಕಿದ್ದವು, ಪೋಲಿಸರು ಈ ಮೃತದೇಹಗಳನ್ನು  ಮರಣೋತ್ತರ ಪರೀಕ್ಷೆ ಮಾಡಿ ವರದಿ ನೀಡಲು  FSL ವರ್ಗಾಯಿಸಲಾಗಿತ್ತು.
ಈಗ FSL ವರದಿ ಹೊರ ಬಂದಿದ್ದು ಬಹುತೇಕ ಐವರ ಮೃತದೇಹಗಳಲ್ಲಿ ನಿದ್ದೆ ಮಾತ್ರೆಯ ಅಂಶ ಪತ್ತೆಯಾಗಿದ್ದು, FSL ವರದಿಯಲ್ಲಿ ನಿದ್ದೆಮಾತ್ರೆ ಸೇವಿಸಿ ಸಾವು ಎಂದು ಉಲ್ಲೇಖ ಮಾಡಲಾಗಿದ್ದು  ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟದ್ದನ್ನ ಅಲ್ಲಗಳೆಯುವಂತಿಲ್ಲ ಎಂದು ವೈದ್ಯರ ವರದಿಯಲ್ಲಿದೆ, ಜಗನ್ನಾಥರೆಡ್ಡಿ ಕುಟುಂಬ ಬಹುತೇಕ ಸಾಮೂಹಿಕ ಆತ್ಮಹತ್ಯೆಯಾ ..? ಎಂಬ ಶಂಕೆ ವ್ಯಕ್ತವಾಗಿದ್ದು ಈ ರಿಪೋರ್ಟ್ ಪ್ರಕರಣದ ತನಿಖಾಧಿಕಾರಿ ಕೈ ಸೇರಿದೆ ಎಂದು ತಿಳಿದಿದೆ.
ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು  ಇಂದು ಸಂಜೆ  ಈ ವಿಚಾರವಾಗಿ ಸುದ್ದಿ ಗೋಷ್ಠಿ ನಡೆಸಿರುವ ಎಸ್ಪಿ ಇನ್ನೂ ಪ್ರಕರಣದ ಸಮಗ್ರ ತನಿಖೆಗಾಗಿ ಮನೆಯ ವಿವಿಧ ವಸ್ತುಗಳನ್ನು ಜಾಲಾಡಿದ್ದ ತಜ್ಞರ ತಂಡಕ್ಕೆ ಮನೆಯ ಎರಡು ಪಾತ್ರೆಗಳಲ್ಲಿ ಸೈನೆಡ್ ಐರನ್ ಅಂಶ ಇರುವುದು ಖಚಿತವಾಗಿದೆ.
ಆದರೆ, ಈ ಐದು ಜನ ಸೈನೆಡ್ ಸೇವಿಸಿದ್ದರೆ ಎನ್ನುವುದಕ್ಕೆ ಸೂಕ್ತ ದಾಖಲೆ ಅಥವಾ ಪರೀಕ್ಷೆ ವೇಳೆ ರಾಸಾಯನಿಕಗಳು ಪತ್ತೆಯಾಗಿಲ್ಲ.
ಐದು ಜನರು 2019 ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಅದರಂತೆ ಎಫ್‍ಎಸ್‍ಎಲ್ ವರದಿಯಲ್ಲೂ ಸಿಕ್ಕಿರುವ ಅಸ್ತಿಪಂಜರಗಳ ಆಧಾರದಲ್ಲಿ ಐದು ಜನ ಮೃತಪಟ್ಟು ನಾಲ್ಕೂವರೆಯಿಂದ ಐದು ವರ್ಷಗಳ ಹಿಂದೆ ಮೃತಪಟ್ಟಿರಬಹುದು ಎಂದು ದಾಖಲಿಸಲಾಗಿದೆ.
[t4b-ticker]

You May Also Like

More From Author

+ There are no comments

Add yours