ತೋಟಗಾರಿಕೆ ವಿದ್ಯಾರ್ಥಿಗಳಿಂದ ಅಣಬೆ ಬೇಸಾಯ ತರಬೇತಿ, ಮಾರುಕಟ್ಟೆ ಮಾಗೋಪಾಯಗಳ ತರಬೇತಿ

 

ಚಿತ್ರದುರ್ಗ:ಚಿತ್ರದುರ್ಗ ತಾಲ್ಲೂಕಿನ ಗೊಡಬನಹಾಳ್ ಗ್ರಾಮದಲ್ಲಿ ಮಂಗಳವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ  ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಹಿರಿಯೂರಿನ ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದದ ಅಡಿಯಲ್ಲಿ ಅಣಬೆ ಬೇಸಾಯ ಹಾಗೂ ಮಾರುಕಟ್ಟೆ ಮಾಗೋಪಾಯಗಳ ಕುರಿತು ತರಬೇತಿ ನಡೆಯಿತು.
ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಡಿ ಶಶಿಕಲಾ ಬಾಯಿ ಅವರು ಅಣಬೆ ಬೇಸಾಯದ ಕ್ರಮಗಳು ಹಾಗೂ ಬೆಳೆದ ಅಣಬೆಗೆ ಮಾರುಕಟ್ಟೆಯ ಮಾರ್ಗೋಪಾಯಗಳ ಬಗ್ಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ನಂತರ ಬೆಳೆದ ಅಣಬೆಯಿಂದ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಕಟಾವು ಮಾಡಿದ ಅಣಬೆ ಬಗ್ಗೆ ಸಂಸ್ಕರಣೆ, ಶೇಖರಣೆ ಹಾಗೂ ಮೌಲ್ಯವರ್ಧನೆ ಹೀಗೆ ವಿವಿಧ ಹಂತಗಳಲ್ಲಿ ಮನೆಯಲ್ಲಿಯೇ ಶೇಖರಣೆ ಮಾಡುವ ವಿಧಾನ ತಿಳಿಸಿಕೊಟ್ಟರು.
ಹಲವು ವರ್ಷಗಳಿಂದ ಅಣಬೆ ಬೇಸಾಯ ಮಾಡುತ್ತಿರುವ ರೈತರು ಹಾಗೂ ರೈತ ಮಹಿಳೆಯರು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿ ಇದರ ಸದುಪಯೋಗ ಪಡೆದುಕೊಂಡರು. ಅಣಬೆ ಬೆಳೆಗಾರರಿಗೆ ಹಾಗೂ ಅಣಬೆ ಉದ್ಯಮಿದಾರರೊಂದಿಗೆ ಬೈ ಬ್ಯಾಕ್ ಅಥವಾ ಕಾಂಟ್ರಾಕ್ಟ್ ಫಾಮಿರ್ಂಗ್ ಮೂಲಕ ಅಣಬೆ ಖರೀದಿಸುವುದಾಗಿ ತಿಳಿಸಿದರು.
ಅಣಬೆ ಉದ್ದಿಮೆದಾರ ಪ್ರಜ್ವಲ್ ಕೃಷ್ಣ ಅವರು ಮದರ್ ಎಂಟರ್‍ಪ್ರೈಸಸ್ ಸಂಸ್ಥೆ ವತಿಯಿಂದ ರಾಜ್ಯಾದ್ಯಂತ ಅಣಬೆ ಹಾಗೂ ಅಣಬೆ ಪುಡಿಯನ್ನು ಕಾಂಟ್ರಾಕ್ಟ್ ಫಾರ್ಮಿಂಗ್ ಮೂಲಕ ಖರೀದಿಸಲಾಗುವುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯೂರು ತೋಟಗಾರಿಕಾ ಮಹಾವಿದ್ಯಾಲಯದ ಕೃಷಿ ತಾಂತ್ರಿಕತೆ ಸಹಾಯಕ ಪ್ರಾಧ್ಯಾಪಕ ರಾಜಶೇಖರ ಡಿ ಬಾರ್ಕೆರ ತರಬೇತಿ ನೀಡಿದರು. ಅಣಬೆ ಬೆಳೆಗಾರರಾದ ರೇಣುಕಾ ತುಮಕೂರು ಅವರು ಅಣಬೆ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯೂರು ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶೃತಿ ಪಿ.ಗೋಂಡಿ, ಗೊಡಬನಹಾಳ್ ಗ್ರಾಮದ ಮುಂಂಡರಾದ ಅಶೋಕ್, ಮಲ್ಲೇಶ್, ಪ್ರಸನ್ನಕುಮಾರ್ ಸೇರಿದಂತೆ ಗ್ರಾಮದ ರೈತರು, ರೈತ ಮಹಿಳೆಯರು ಇದ್ದರು.
[t4b-ticker]

You May Also Like

More From Author

+ There are no comments

Add yours