ಮದಕರಿನಾಯಕನ ಇತಿಹಾಸ ದೇಶದ ಉದ್ದಗಲಕ್ಕೂ ತಿಳಿಯಬೇಕು: ವಾಲ್ಮೀಕಿ ಶ್ರೀ ಪ್ರಸನ್ನಾನಂದ ಮಹಾಸ್ವಾಮಿ

 

ಚಿತ್ರದುರ್ಗ: ಮದಕರಿನಾಯಕ ಒಂದು ಜನಾಂಗಕ್ಕೆ ಸೀಮಿತವಾಗದೆ ನಾಡನ್ನು ಕಟ್ಟುವ ಕೆಲಸ ಮಾಡಿದ್ದಾನೆ ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿ ಹೇಳಿದರು.

ನಗರದ ಮಹಾರಾಣಿ ಕಾಲೇಜಿನಲ್ಲಿ ರಾಜವೀರ ಮದಕರಿ ನಾಯಕ ಥೀಮ್ ಪಾರ್ಕ್ ವಿಚಾರವಾಗಿ ಕರೆದಿದ್ದ ಪೂರ್ವ ಸಭೆಯಲ್ಲಿ ಮಾತನಾಡಿದರು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವಂತಹ ಮದಕರಿನಾಯಕ ಥೀಮ್ ಪಾರ್ಕ್ ಬಗ್ಗೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್ ಷಾ ಅವರು ದುರ್ಗದ ಸಂಸ್ಕ್ರಾತಿಕ ಇತಿಹಾಸಕಾರ ರಾಜ್ಯ ದೊರೆ ಮದಕರಿನಾಯಕ ಅವರ ಥೀಮ್ ಪಾರ್ಕ್ ಮಾಡುವ ಭರವಸೆ ನೀಡಿದ್ದರು. ಆದರೆ ಅದು ಇದುವರೆಗೂ ಮುನ್ನೆಲೆಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮದಕರಿನಾಯಕನ ಇತಿಹಾಸ ಮುಂದಿನ ಪೀಳಿಗೆಗೆ 77 ಪಾಳೆಗಾರರ ಇತಿಹಾಸ ಮತ್ತು ಒಂದು ಪ್ರತ್ಯೇಕ ಲಾಂಚನಗಳು ಇವೆ ಅವನ್ನು ಥೀಮ್ ಪಾರ್ಕ್ ನಲ್ಲಿ ಇರಬೇಕು. ಡಿಜಿಟೆಲ್ ಲೇಸರ್ ಶೋ ಮೂಲಕ ಮದಕರಿನಾಯಕನ ಇತಿಹಾಸ ತೋರಿಸಬೇಕು. 100 ಎಕರೆ ಜಾಗದಲ್ಲಿ ಇದು ನಿರ್ಮಾಣವಾಗಬೇಕು. ಇತಿಹಾಸ ಪರಂಪರೆ ಮರು ಕಳಿಸಬೇಕು. ಕರ್ನಾಟಕ ಅನೇಕ ಕಡೆ ಇಂತಹ ಥೀಮ್ ಪಾರ್ಕ್ ಮಾದರಿ ನೋಡಿ ರಾಜ್ಯದಲ್ಲಿ ಇದನ್ನು ರಾಷ್ಟದ ಜನ ಗಮನ ಸೆಳೆಯುವಂತೆ ಮಾಡೋಣ ಎಂದರು. ಪೂರಕವಾಗಿ ಅಧ್ಯಯನ ಕೇಂದ್ರ, ಪ್ರವಾಸಿ ತಾಣದ ರೀತಿಯಲ್ಲಿ ಕನಸಿನ ಪಾರ್ಕ್ ನಿರ್ಮಾಣವಾಗಬೇಕು.

ಸಂಸದ ನಾರಾಯಣಸ್ವಾಮಿ ಮಾತನಾಡಿ ಮದಕರಿನಾಯಕ ಬ್ರಿಟಿಷ್ ವಿರುದ್ಧ ಯಾವ ರೀತಿ ಹೋರಟ ಮತ್ತು ಆಡಳಿತ ಶೈಲಿ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂಬ ಆಶಯದಲ್ಲಿ ಎಲ್ಲಾ ಸಮಾಜದ ಅಭಿಪ್ರಾಯವಾಗಿದೆ. ನಮ್ಮ ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್ ಷಾ ಸ್ವಾಮೀಜಿ ಪತ್ರಕ್ಕೆ ಉತ್ತರ ನೀಡಿ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಸಮುದಾಯದ ಯುವಕರು ಅಧ್ಯಯನ ಮಾಡಿ ವರದಿ ಸಲ್ಲಿಸುದರೆ ಉತ್ತಮವಾಗಿದೆ. ಹೋರಟ ಸಮಿತಿಗಿಂತ ಅಧ್ಯಯಕ ಸಮಿತಿ ಸಾಕು ಎಂಬುದು ನನ್ನ ಅಭಿಪ್ರಾಯ ಎಂದರು. ಕೋಟೆಯಲ್ಲಿ ದೀಪಗಳನ್ನು ಹಾಕಲು ಅಧಿಕಾರಿಳಿಗೆ ತಿಳಿಸಿ ಅವರಿಗೆ ಕೆಲಸ ಮಾಡದಿದ್ದರೆ ಮನೆ ಕಳುಹಿಸುತ್ತೇನೆ ಎಂದು ಸಹ ವಾರ್ನ್ ಮಾಡಿದ್ದೇನೆ. ಶಾಸಕರು ಮತ್ತು ಸಂಸದರು ಎಲ್ಲಾರೂ ಪ್ರವಾಸಿತಾಣ ಮಾಡಲು ಮನವಿ ಮಾಡಿದ್ದೇವೆ. ಮೊದಲು ಕೋಟೆ ಸಂರಕ್ಷಣೆ ಮಾಡಬೇಕು. ದೇಶದ ಜನರು ಕೋಟೆ ನೋಡುವಂತೆ ಮಾಡಬೇಕು. ಕೋಟೆ ಒಳಗೆ ಕಾಂಕ್ರೀಟ್ ಕಟ್ಟಡ ಕಟ್ಟಬಾರದು, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ನೀರಿನ ವ್ಯವಸ್ಥೆ ಮಾಡಬೇಕುಪ್ಲಾನ್ ಮಾಡಿ ಕಳುಸಿ ಎಂದಿದ್ದೇನೆ. ಚಂದ್ರವಳ್ಳಿ ಹತ್ತಿರ 50 ಎಕರೆ ಜಾಗ ವಶಪಡಿಸಿಕೊಂಡವರಿಂದ ಬಿಡಿಸಿಕೊಂಡಿದ್ದೇನೆ. ಆ ಜಾಗ ಎಲ್ಲಾರೂ ಒಪ್ಪಿಸಿದರೆ ಅಲ್ಲಿ ಮದಕರಿ ನಾಯಕ ಥೀಮ್ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ. 7.5.% ಮೀಸಲಾತಿ ಕುರಿತು ಸರ್ಕಾರ ಮಟ್ಟದಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದ್ದೇನೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದೇನೆ.

ಅಖಿಲ ಕರ್ನಾಟಕ ವಾಲ್ಮೀಕಿ ಮಹಾ ಸಭಾ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ಸಂಘಟನೆ ಮೂಲಕ ಜನಾಂಗದ ಅಭಿವೃದ್ಧಿ ಸಾಧ್ಯ ಎಂದರು.ಅಕ್ಕಬುಕ್ಕರು, ಏಕಲವ್ಯ, ಕನಕದಾಸ ಎಲ್ಲಾ ನಮ್ಮ ಜನಾಂಗದವರು. ಪಕ್ಷ ಭೇದ ಮರೆತು ನಾಯಕ ಜನಾಂಗ ಒಗ್ಗಟ್ಟನ್ನು ಪ್ರದರ್ಶಿಸುವ ಕಾಲ ಬಂದಿದ್ದು ಇನ್ನಾದರು ಒಂದಾಗಬೇಕು ಎಂದು ಮನವಿ ಮಾಡಿದರು.

ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ಮದಕರಿನಾಯಕ ಥೀಮ್ ಪಾರ್ಕ್ ಮಾಡಲು ಸಭೆ ಕರೆದಿರುವುದು ಉತ್ತಮ ಬೆಳವಣಿಗೆಯಾಗಿದೆ. ಥೀಮ್ ಪಾರ್ಕ್ ಅದಷ್ಟು ಶೀಫ್ರವಾಗಿ ಮದಕರಿನಾಯಕ ಥೀಮ್ ಪಾರ್ಕ್ ಮಾಡಿಸಲು ಕ್ರಮ ವಹಿಸಬೇಕು ಒರತು ಹತ್ತಾರು ವರ್ಷಗಳ ಕಾಲ ಥೀಮ್ ಪಾರ್ಕ್ ಎಳೆದುಕೊಂಡು ಹೋಗಬಾರದು ಎಂದರು. ಎಲ್ಲಾರೂ ಸಹ ಪಕ್ಷತೀತವಾಗಿ ಸಮಾಜದ ಕೆಲಸ ಹಂಚಿಕೊಂಡು ಕಾರ್ಯನಿರ್ವಹಿಸುವ ಮೂಲಕ ಸಮಾಜ ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕು ಎಂದು ಹೇಳಿದರು. ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ವೀರೇಂದ್ರ ಸಿಂಹ, ಲಿಂಗನಾಯಕನಹಳ್ಳಿ ತಿಪ್ಪೇಸ್ವಾಮಿ, ಮಹಂತೇಶ್ ನಾಯಕ, ಪ್ರೋ. ಗುಡ್ಡದೇಶ್ವರಪ್ಪ, ಹನುಮಂತಪ್ಪ, ಮಂಜುನಾಥ್, ರಾಮದಾಸ್, ಸೋಮೇಂದ್ರ, ವಕೀಲ ಅಶೋಕ್, ರವಿ, ತಿಪ್ಪೇಸ್ವಾಮಿ, ಬೋರಣ್ಣ, ಇದ್ದರು.

[t4b-ticker]

You May Also Like

More From Author

1 Comment

Add yours

+ Leave a Comment