ಈರುಳ್ಳಿ ಬೆಲೆ ಕುಸಿತ ಜೊತೆಗೆ ಕೊಳೆ ರೋಗಕ್ಕೆ‌ ರೈತ ಕಂಗಾಲು, ತಿಪ್ಪೆಗೆ ಸುರಿದು ಈರುಳ್ಳಿ ಎಷ್ಟು ಚೀಲ?

 

ಚಳ್ಳಕೆರೆ:  ಈರುಳ್ಳಿ ಬೆಳೆಗೆ ಬೆಲೆ ಕಡಿಮೆ, ಕೊಳೆ ರೋಗದ ಬಾಧೆಯಿಂದ ರೈತ ಬೇಸತ್ತು ತಾನು ಬೆಳೆದ ಬೆಳೆಯನ್ನು ಕಸದ ತಿಪ್ಪೆಗೆ ಸುರಿದ ಘಟನೆ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದಲ್ಲಿ‌ನಡೆದಿದೆ.
ರೈತ ಶಿವರಾಜ ತನ್ನ 4ಎಕರೆ ಜಮೀನಿಗೆ ಸುಮಾರು 2 ಲಕ್ಷ ಖರ್ಚು ಮಾಡಿ ಕಳೆದ ಜನವರಿಯಲ್ಲಿ  ಬಿತ್ತನೆ ಮಾಡಿದ್ದ‌ ಬೆಳೆ‌ ಸುಮಾರು 400 ಚೀಲ ಕೈಸೇರಿತು. ಆದರೆ ಬೆಲೆಯು ಕಡಿಮೆ ಇದರ ಜೊತೆಗೆ   ಸುಮಾರು 70 ಚೀಲ ಕೊಳೆ ರೋಗಕ್ಕೆ ತುತ್ತಾಗಿವೆ. ಇರುವ ಬೆಳೆಯನ್ನು ಉಳಿಸಿಕೊಳ್ಳು ರೈತ ಪರಿತಪಿಸುತ್ತಿದ್ದಾನೆ. ಹಾಕಿದ ಬಂಡವಾಳವೂ ಸಿಗದೆ, ಇತ್ತ ಬೆಳೆಯು ಉಳಿಯದೆ ಮಾಡಿದ ಸಾಲವನ್ನು ತೀರಿಸಲಾಗದೆ ಚಿಂತೆಗೀಡಾಗಿದ್ದಾನೆ. ಮಾರುಕಟ್ಟೆಯಲ್ಲಿ ಚೀಲಕ್ಕೆ 250-300ರೂ ಕೇಳುತ್ತಿದ್ದಾರೆ. ಸುಮಾರು 80 ಕೆ.ಜಿ ನಾನೇ 4ರೂ ನಂತೆ ಮಾರಾಟಮಾಡಿದರೂ ಹಾಕಿದ ಶ್ರಮಕ್ಕೂ ಫಲ ಸಿಗದಾಗಿದೆ ಎಂದು ತನ್ನ ಅಳಲು ತೋಡಿಕೊಳ್ಳುತ್ತಾನೆ.

[t4b-ticker]

You May Also Like

More From Author

+ There are no comments

Add yours