ಬಿ.ಎನ್.ಚಂದ್ರಪ್ಪ ಪರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಶಾಸಕ ಬಿ.ಜಿ.ಗೋವಿಂದಪ್ಪ

 

ಹೊಸದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಿ.ಎನ್.ಚಂದ್ರಪ್ಪನವರ ಪರವಾಗಿ ಶಾಸಕ ಬಿ.ಜಿ.ಗೋವಿಂದಪ್ಪ ತಾಲೂಕಿನ ಹೆಗ್ಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಕ್ಷೇತ್ರ ಕಡವಿಗೆರೆಯ ಮಾವಿನಕಣಿವೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು.

ಈ ಸಂಧರ್ಬದಲ್ಲಿ ಹೆಗ್ಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡವಿಗೆರೆ, ವೆಂಗಳಾಪುರ, ಓಬಳಾಪುರ ತಾಂಡ್ಯ, ಓಬಳಾಪುರ, ಹೆಗ್ಗೆರೆ, ಸೊಪ್ಪಿನಗುಡ್ಲು, ದಳವಾಯಿಕಟ್ಟೆ ಮತ್ತು ಗಿರಿಮಲ್ಲಯ್ಯನಪಾಳ್ಯ ಗ್ರಾಮಗಳಲ್ಲಿ ಈ ದೇಶದ ಭವಿಷ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತನೀಡಬೇಕೆಂದು ಮನವಿ ಮಾಡಿದರು..

ಈ ಸಂಧರ್ಬದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲೋಕೇಶಪ್ಪ, ಪದ್ಮನಾಭ್, ಪ್ರಚಾರ ಸಮಿತಿ ಅಧ್ಯಕ್ಷಆರ್.ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷÀ ಹೆಚ್.ಟಿ.ಬಸವರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕೆ ಶ್ರೀಮತಿ ದೀಪಿಕಾ ಸತೀಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್, ತಾಲೂಕು ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಬಿ.ಅಶ್ರುಫ್‌ವುಲ್ಲಾ
ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಹಾಗೂ ಸ್ಥಳೀಯ ಮುಖಂಡರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours