ಡಾ.ಬಿ.ಅರ್.ಅಂಬೇಡ್ಕರ್‌ ಆದರ್ಶ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಿ.

 

ಚಳ್ಳಕೆರೆ (challakere) ದೇಶಕ್ಕೆ ಸಂವಿಧಾನ ನೀಡುವ ಮೂಲಕ ದಲಿತ ಸಮುದಾಯಗಳ ಅಭ್ಯುದಯಕ್ಕೆ ಮುನ್ನುಡಿ ಬರೆದ ಡಾ.ಬಿ.ಆರ್.ಅಂಬೇಡ್ಕರ್‌ರವರ ಕಾರ್ಯ ಪ್ರತಿಯೊಬ್ಬರೂ ನೆನೆಯಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಯ್ಯ ತಿಳಿಸಿದರು.

ಅವರು, ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಹಮ್ಮಿಕೊಂಡಿದ್ದ ಕೋರೆಂಗಾವ್ ವಿಜಯೋತ್ಸವ ಮತ್ತು ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ಉದ್ಘಾಟನಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕಷ್ಟದ ಸಮಯದಲ್ಲೂ ಉನ್ನತ್ತ ಶಿಕ್ಷಣ ಕಲಿತು ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ಬರೆದ ಮಹಾನೀಯರು ಎಂದರು.
ಯುವ ಮುಖಂಡ ಟಿ.ಶಿವಮೂರ್ತಿ ಮಾತನಾಡಿ, ದಲಿತ ಸಮುದಾಯ ಶಿಕ್ಷಣ ಪಡೆಯುವತ್ತ ಮುಂದಾಗಬೇಕಿದೆ. ಸಮಾಜದ ಏಳಿಗೆ ಶಿಕ್ಷಣವೊಂದೇ ದಾರಿಯಾಗಿದ್ದು, ಪ್ರತಿಮನೆಯಲ್ಲೂ ಉನ್ನತ್ತ ಶಿಕ್ಷಣ ಪಡೆದ ಯುವಕ, ಯುವತಿರು ಹುಟ್ಟಿಕೊಂಡಾಗ ಮಾತ್ರ ಉತ್ತಮ ದಾರಿಯಲ್ಲಿ ನಡೆಯಲು ಸಾಧ್ಯವೆಂದರು.

ಇದನ್ನೂ ಓದಿ: ಆಟೋ ಚಾಲಕರಿಗೆ ಸಿಕ್ತಿಲ್ಲ ಸಿಎನ್‌ಜಿ, ಬಂಕ್ ವಿರುದ್ದ ಆಟೋ ಚಾಲಕರು ಪ್ರತಿಭಟನೆ

ಗ್ರಾಮದ ಮುಖಂಡರಾದ ಸಣ್ಣನಾಗಣ್ಣ, ತಿಪ್ಪೇಸ್ವಾಮಿ, ಸಂಘದ ಕಾರ್ಯದರ್ಶಿ ಎಚ್.ಶ್ರೀಧರ್, ಖಜಾಂಚಿ ಡಿ.ರಾಜು, ಡಿ.ವಿಜಯಕುಮಾರ್, ತಿಪ್ಪೇಸ್ವಾಮಿ, ಯು.ಲಿಂಗರಾಜು, ಮಲ್ಲಿಕಾರ್ಜುನಯ್ಯ, ಟಿ.ಮಂಜುನಾಥ, ಪುಟ್ಟಣ್ಣ, ತಿಪ್ಪೇಸ್ವಾಮಿ, ರುದ್ರಮುನಿ, ರಮೇಶ್, ಮನೋಜ್, ಮೈಲಾರಿ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

55Comments

Add yours

+ Leave a Comment