ಮದಕರಿ ನಾಯಕ ಸಿನಿಮಾ ದರ್ಶನ್ ಕೈ ಬಿಡ್ತಾರಾ?

 

ಮದಕರಿ ನಾಯಕ ಸಿನಿಮಾ ದರ್ಶನ್ ಕೈ ಬಿಡ್ತಾರಾ?
ಸೆಟ್ ಏರಿದ ಸಿನಿಮಾ ಬ್ರೇಕ್ ಆಗಿದ್ದು ಯಾಕೆ?
ಮದಕರಿ ಸಿನಿಮಾ ಯಾಕೆ ತಡ ಆಗ್ತಿದೆ?

ವಿಶೇಷ ವರದಿ:ಬಿ. ನಾಗರಾಜ್ ಭಾರತೀಯ

ಸಿನಿಮಾ :ಹತ್ತು ದಿನ ಶೂಟಿಂಗ್ ಮಾಡಿ ನಂತರ ಡಿ ಬಾಸ್ ಹೇಳಿದ್ದೇನು?
ಮದಕರಿ ನಾಯಕ ಚಿತ್ರದುರ್ಗದ ದುರ್ಗದ ಹುಲಿ ಅಂತಾನೇ ಕರೆಸಿಕೊಳ್ಳುವ ಅತ್ಯಂತ ಪ್ರಚಂಡ ಅರಸ ಮದಕರಿ ನಾಯಕ..! ಕರ್ನಾಟಕದ ಮೂಲೆ ಮೂಲೆಗೂ ಗೊತ್ತಿರುವ ಹೆಸರು ಮದಕರಿ ನಾಯಕರು..! ಮದಕರಿ ಎಂದರೆ ಶೌರ್ಯ ಪರಾಕ್ರಮ ದಿಟ್ಟ ಹೋರಾಟ ರಾಜನೀತಿಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ..! ರಾಜವೀರ ಮದಕರಿ ನಾಯಕರ ಪಾತ್ರವನ್ನು ಕನ್ನಡದ ಕೆಲ ಮೇರು ನಟರು ಈಗಾಗಲೇ ಅಭಿನಯಿಸಿದ್ದಾರೆ ಅದರಲ್ಲಿ ಪ್ರಮುಖವಾಗಿ ವಿಷ್ಣುವರ್ಧನ್ ಅವರು ಅಂಬರೀಶ್ ಮತ್ತು ಸಾಯಿ ಕುಮಾರ್ ಅವರು ಅತ್ಯಂತ ಅಮೋಘ ಮತ್ತು ಅದ್ಬುತವಾಗಿ ಮದಕರಿ ನಾಯಕರ ಪಾತ್ರವನ್ನು ಅಭಿನಯಿಸಿದ್ದಾರೆ..!

ಮೇರು ನಟರ ಅಭಿನಯದ ನಂತರ ಕನ್ನಡದ ಮೇರು ನಟ ಆಗಿರುವ ದರ್ಶನ್ ಅವರು ಕೂಡ ಮತ್ತೊಂದು ಅಂತಕ್ಕೆ ಮದಕರಿ ನಾಯಕರ ಪಾತ್ರವನ್ನು ತೆಗೆದುಕೊಂಡು ಹೋಗಬೇಕೆಂಬ ಬಹಳ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ..!

ಸುದೀಪ್ ಮತ್ತು ದರ್ಶನ್ ನಡುವೆ ಮದಕರಿ ಸಿನಿಮಾ ವಿವಾದ

ಸುದೀಪ್ ಮತ್ತು ದರ್ಶನ್ ಇಬ್ಬರ ಮಧ್ಯೆ ಮದಕರಿ ನಾಯಕ ಸಿನಿಮಾ ವಿವಾದ ಕೂಡ ಆಗಿತ್ತು ನಂತರ ಅದನ್ನು ದರ್ಶನ್ ಅವರೇ ಮಾಡಲಿ ಅಂತ ಸುದೀಪ್ ಸುಮ್ಮನೆ ಆಗಿದ್ದರು ನಂತರ ದರ್ಶನ್ ಅವರು ಮದಕರಿ ನಾಯಕನಿಗಾಗಿ ಹಲವು ತಯಾರಿಗಳನ್ನು ಆರಂಭಿಸಿದರು ಮುಖ್ಯವಾಗಿ ಚಿತ್ರದುರ್ಗಕ್ಕೆ ಬಂದಿದ್ದ ನಟ ದರ್ಶನ್ ಮದಕರಿ ನಾಯಕರಿಗೆ ಗೌರವವನ್ನು ಸಮರ್ಪಿಸಿ ಚಿತ್ರದ ಕಥೆಯ ಪೂರ್ವ ತಯಾರಿಗೆ ಗಮನಕೊಟ್ಟಿದ್ದರು‌.!

ಇದನ್ನೂ ಓದಿ:ಆಟೋ-ರಾಯಲ್ ಎನ್ ಫೀಲ್ಡ್ ಬೈಕ್ ನಡುವೆ ಅಪಘಾತ ಸ್ಥಳದಲೇ ಎರಡು ಸಾವು

ಹಲವು ದಿನಗಳ ತಯಾರಿಯ ಬಳಿಕ ಮದಕರಿ ನಾಯಕರ ಸಿನಿಮಾದ ಶೂಟಿಂಗ್ ಮಾಡಲು ನಿರ್ಧರಿಸಿ ಸೆಟ್ಟನ್ನ ರೆಡಿ ಮಾಡಿಕೊಂಡಿದ್ದರು.!

ಸೆಟ್ ಕೂಡ ಸಜ್ಜಾಗಿ ಹತ್ತು ದಿನಗಳ ಕಾಲ ಶೂಟಿಂಗ್ ಆಯ್ತು ಆದರೆ ಸಿನಿಮಾ ಅಂದುಕೊಂಡಷ್ಟು ಮಟ್ಟಿಗೆ ಸಾಗುತ್ತಿದೆ ಎಂಬ ತೃಪ್ತಿ ನಟ ದರ್ಶನ್ ಅವರಿಗೆ ಇರಲಿಲ್ಲವಂತೆ..!

ಬಹಳ ಅಪೇಕ್ಷೆ ಇರುವ ಪಾತ್ರ ಮದಕರಿ ನಾಯಕ ರದ್ದಾಗಿದ್ದರಿಂದ ಮದಕರಿ ನಾಯಕರ ಅಭಿಮಾನಿಗಳು ನಾಡಿನ ಜನತೆಯ ಅಪೇಕ್ಷೆಯನ್ನು ಗಮನಿಸಿರುವ ದರ್ಶನ್ ಅವರು ಚಿತ್ರಕ್ಕೆ ಸರಿಯಾದ ದಿಕ್ಕು ಕೊಡಲೇಬೇಕೆಂದು ಶಪಥ ಮಾಡಿದಂತಿದ್ದಾರೆ..!

ಸಿನಿಮಾ‌ ಹೆಸರಿಗೆ ತಕರಾರು

ಈ ಹಿಂದೆ ಈ ಚಿತ್ರದ ಶೀರ್ಷಿಕೆ ರಾಕ್ಲೈನ್ ವೆಂಕಟೇಶ್ ಅವರು ಗಂಡುಗಲಿ ಮದಕರಿ ನಾಯಕ ಎಂದು ಇಟ್ಟಿದ್ದರು ಆ ಹೆಸರಿನ ಬಗ್ಗೆ ತಕರಾರು ತೆಗೆದಿದ್ದ ಮದಕರಿ ಅಭಿಮಾನಿಗಳು ಅದು ರಾಜವೀರ ಮದಕರಿ ನಾಯಕ ಎಂಬ ಹೆಸರು ಆಗಬೇಕೆಂದು ಬಲವಾಗಿ ಆಗ್ರಹಿಸಿದ್ದರು.

ಅಭಿಮಾನಿಗಳ ಬಲವಾದ ಆಗ್ರಹಕ್ಕೆ ಮಣಿದ ರಾಕ್ಲೈನ್ ವೆಂಕಟೇಶ್ ತಮ್ಮ ಚಿತ್ರದ ಹೆಸರನ್ನ ಗಂಡುಗಲಿ ಮದಕರಿ ನಾಯಕ ಎಂಬುದನ್ನು ರಾಜವೀರ ಮದಕರಿ ನಾಯಕ ಎಂದು ಬದಲಾಯಿಸಿದ್ದರು..!

ಇನ್ನು ಮದಕರಿ ನಾಯಕ ಅವರ ಇತಿಹಾಸಕ್ಕೆ ಸಂಬಂಧಿಸಿದಂತೆ ತರಾಸು ಅವರು ಬರೆದ ದುರ್ಗಾಸ್ತಮಾನ ಎಂ ಎಸ್ ಪುಟ್ಟಣ್ಣ ಅವರು ಬರೆದ ಚಿತ್ರದುರ್ಗದ ಪಾಳೆಗಾರರು ಹಾಗೆ ಲಕ್ಷ್ಮಣ್ ತೆಲಗಾವಿ ಅವರು ಬರೆದಿರುವ ಹಲವು ಸಂಶೋಧನಾತ್ಮಕ ಅಂಶಗಳು ಬ್ರಿಟಿಷ್ ಗೆಜಿಟಿಯರ್ ಶಾಸನಗಳು ಬಕಇರುಗಳು ಹೀಗೆ ಸಾಲು ಸಾಲು ಇತಿಹಾಸದ ಸಮಗ್ರ ವಿಚಾರಗಳಿದೆ..!

ಇದನ್ನೂ ಓದಿ: ಜಲಜೀವನ್ ಮಿಷನ್ ಮೂಲಕ ಶುದ್ದ ಕುಡಿಯುವ ನೀರು:ಎಂ.ಚಂದ್ರಪ್ಪ

ಇದೆಲ್ಲವನ್ನು ಒಟ್ಟು ಸೇರಿಸಿಕೊಂಡು ಅಭಿಮಾನಿಗಳಿಗೆ ಎಲ್ಲೂ ಕೂಡ ಬೇಸರವಾಗದಂತೆ ಅವರ ಅಪೇಕ್ಷೆಗೆ ತಕ್ಕಂತೆ ಮದಕರಿ ನಾಯಕ ರನ್ನ ಬೆಳ್ಳಿ ಪರದೆ ಮೇಲೆ ತರಬೇಕೆಂಬ ಬಲವಾದ ಇಚ್ಛೆಯನ್ನು ದರ್ಶನ್ ಅವರು ಹೊಂದಿದ್ದಾರೆ..!

ಈ ಹಿಂದೆ ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ದರ್ಶನವರು ಯಶಸ್ವಿಯಾಗಿ ಸಂಗೊಳ್ಳಿ ರಾಯಣ್ಣ ಅನ್ನುವಂತ ದೊಡ್ಡ ಸಿನಿಮಾವನ್ನ ಹಿಟ್ ಸಿನಿಮವಾಗಿ ಮಾಡಿದ್ದರು ಹಾಗೆ ನಂತರದಲ್ಲಿ ಕುರುಕ್ಷೇತ್ರ ಸಿನಿಮಾದಲ್ಲೂ ಕೂಡ ದೊಡ್ಡ ಪಾತ್ರವನ್ನು ಅಭಿನಯಿಸಿ ಚಿತ್ರಕ್ಕೆ ಯಶಸ್ಸು ತಂದು ಕೊಟ್ಟಿದ್ದರು..!

ಈಗ ಎಲ್ಲಾ ವಿಚಾರಗಳಿಗಿಂತ ಬಹಳ ಮಹತ್ವದ ವಿಚಾರ ಎಂದರೆ ದರ್ಶನ್ ಅವರಿಗೆ ಮದಕರಿ ನಾಯಕ ಸಿನಿಮಾ..!

ಮದಕರಿ ನಾಯಕರ ಕಥೆಯಲ್ಲಿ ಸ್ವಲ್ಪವೂ ಎಡವ ಬಾರದು, ಸ್ವಲ್ಪವೂ ಕೂಡ ರಾಜಿ ಆಗಬಾರದು ಎಂಬ ಗಟ್ಟಿಯಾದ ನಿಲುವಿಗೆ ದರ್ಶನ್ ಕಟ್ಟು ಬಿದ್ದಿದ್ದಾರೆ..!

ರಾಜವೀರ ಮದಕರಿ ನಾಯಕ ಒಂದು ಪ್ರಬಲ ಸಮುದಾಯದ ದೇವರಾಗಿ ಆರಾಧಿಸಲ್ಪಡುತ್ತಾರೆ ಅಂತಹ ಮಹಾತ್ಮನ ಬಗ್ಗೆ ಸಿನಿಮಾ ತೆಗಿಯಬೇಕಾದರೆ ಬಹಳಷ್ಟು ತಯಾರಿ ಇರಬೇಕಾಗುತ್ತದೆ ಹೀಗಾಗಿ ಸಿನಿಮಾ ಚಿತ್ರೀಕರಣವನ್ನು ನಿಲ್ಲಿಸುವಂತೆ ನಾನೇ ಸೂಚಿಸಿದೆ ಎಂದು ಇತ್ತೀಚೆಗೆ ಕಾಟೇರ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ವಿವರಿಸಿದ್ದಾರೆ..!

ಹತ್ತು ದಿನದಲ್ಲಿ ಸ್ಥಗಿತಗೊಂಡ ಚಿತ್ರೀಕರಣ

ಮದಕರಿ ಚತ್ರ ಸೆಟ್ಟೇರಿದ ಹತ್ತು ದಿನಗಳ ಚಿತ್ರೀಕರಣದಲ್ಲಿ ಸಿನಿಮಾ ನಮ್ಮ ಹಿಡಿತಕ್ಕೆ ಸಿಗಲಿಲ್ಲ ಹಾಗಾಗಿ ಕಾಟಾಚಾರಕ್ಕೆ ಸಿನಿಮಾ ಮಾಡಿ ಜನರು ಮತ್ತು ಅಭಿಮಾನಿಗಳಿಂದ ಬೈಸಿಕೊಳ್ಳುವುದಕ್ಕಿಂತ ಇನ್ನಷ್ಟು ತಯಾರಿ ಮಾಡಿಕೊಂಡು ಸಿನಿಮಾವನ್ನು ಮುಂದುವರಿಸೋಣ ಎಂಬ ಅಭಿಪ್ರಾಯಕ್ಕೆ ದರ್ಶನ್ ಬಂದಂತಿದೆ..!

ಇದನ್ನೂ ಓದಿ: ಗಂಡನ ಮನೆಯಲ್ಲಿ ವರದಕ್ಷಣೆ ಕಿರುಕುಳ ಮಹಿಳೆ ಆತ್ಮಹತ್ಯೆ

ಸ್ನೇಹಿತರೆ ಬಹುನಿರೀಕ್ಷಿತ ಮದಕರಿ ನಾಯಕ ಸಿನಿಮಾ ಗೆ ಡಿ ಬಾಸ್ ಸತ್ಯ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ..!
ಅದರ ಬಗ್ಗೆ ಕಾರಣಗಳನ್ನ ದರ್ಶನ್ ವೀಕ್ಷಕರು ಮುಂದೆ ಬಿಚ್ಚಿಟ್ಟಿದ್ದಾರೆ..! ಅಷ್ಟಕ್ಕೂ ದರ್ಶನವರು ಮದಕರಿ ಸಿನಿಮಾಗೆ ಬ್ರೇಕ್ ನೀಡಲು ಪ್ರಮುಖ ಕಾರಣಗಳು ಇವು..!

[t4b-ticker]

You May Also Like

More From Author

+ There are no comments

Add yours