ಆಟೋ-ರಾಯಲ್ ಎನ್ ಫೀಲ್ಡ್ ಬೈಕ್ ನಡುವೆ ಅಪಘಾತ ಸ್ಥಳದಲೇ ಎರಡು ಸಾವು

 

News19kannada desk
ಚಿತ್ರದುರ್ಗ : (chitradurga) ಚಿತ್ರದುರ್ಗ ತಾಲೂಕಿನ ಚಳ್ಳಕೆರೆ ರಸ್ತೆಯ ದಂಡಿನಕುರುಬರಹಟ್ಟಿ ಬಳಿಯ ಹೊಸಕಲ್ಲಹಳ್ಳಿ ಬಳಿಯಲ್ಲಿ ಆಟೋ ಮತ್ತು ರಾಯಲ್ ಎನ್ ಫೀಲ್ಡ್ (Royal Enfilade) ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಗಂಡನ ಮನೆಯಲ್ಲಿ ವರದಕ್ಷಣೆ ಕಿರುಕುಳ ಮಹಿಳೆ ಆತ್ಮಹತ್ಯೆ

ರಾಯಲ್ ಎನ್ ಫೀಲ್ಡ್ ಬೈಕಿನಲ್ಲಿದ್ದ ಬೆಂಗಳೂರು ಮೂಲದ ಶಿಲ್ಪ (30), ಹಾಗೂ ಆಟೋದಲ್ಲಿದ್ದ ಚಿತ್ರದುರ್ಗ ಮೂಲದ ಬರ್ಕತ್ (35) ಸ್ಥಳದಲ್ಲಿಯೇ ಮೃತಪಟ್ಟವರು.

ಚಳ್ಳಕೆರೆಯಿಂದ ತಮ್ಮ ಮಗನನ್ನು ಕಾರಿನಲ್ಲಿ ಕಳಿಸಿ ಗಂಡ ಹೆಂಡತಿ ಬೈಕನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಶಿಲ್ಪ ಪತಿ ರಾಘವೇಂದ್ರ. ಆಟೋದಲ್ಲಿ ಚಳ್ಳಕೆರೆಗೆ ಬರುತ್ತಿದ್ದ ಬರ್ಕತ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

 

ಅಪಘಾತದಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು ಗಂಭಿರ ಸ್ಥಿತಿಯಲ್ಲಿದ್ದಾರೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕೈದು ಕಡೆ ಹೆಚ್ಚು ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನಾ ಸ್ಥಳಕ್ಕೆ ಚಿತ್ರದುರ್ಗ ವ್ಯಾಪ್ತಿಯ ಗ್ರಾಮಾಂತರ ಠಾಣೆ ಸಿಪಿಐ‌ ಮುದ್ದುರಾಜ್ ಭೇಟಿ ನೀಡಿ‌ಮಾಹಿತಿ ಪಡೆಯುತ್ತಿದ್ದಾರೆ.

 

ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ ದೃಢ

[t4b-ticker]

You May Also Like

More From Author

+ There are no comments

Add yours