ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಗಳ ಪ್ರವೇಶಕ್ಕೆ ಆಯ್ಕೆ ಪರೀಕ್ಷೆ

 

ಚಿತ್ರದುರ್ಗ :ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2024-25 ನೇ ಸಾಲಿಗಾಗಿ ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಗಳಿಗೆ ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಪ್ರಥಮ ಹಂತದ ಆಯ್ಕೆ ಹಾಗೂ ಚಿತ್ರದುರ್ಗದ ಜಿಲ್ಲಾ ಕ್ರೀಡಾ ಶಾಲೆಗೆ ಕ್ರೀಡಾ ಪಟುಗಳ ದೈಹಿಕ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇದರ ಅಂಗವಾಗಿ ಆಯಾ ತಾಲ್ಲೂಕು ಮಟ್ಟದಲ್ಲಿ ಪ್ರತಿಭಾವಂತ ಬಾಲಕ ಬಾಲಕಿಯರಿಗಾಗಿ ದೈಹಿಕ ಪರೀಕ್ಷೆಯನ್ನು ಏರ್ಪಡಿಸಲಾಗಿದ್ದು, ವಿವರ ಇಂತಿದೆ.  ಮೊಳಕಾಲ್ಮೂರಿನಲ್ಲಿ ಜ. 03 ರಂದು ಸರ್ಕಾರಿ ಪ.ಪೂ. ಕಾಲೇಜು ಮೈದಾನ, ಚಳ್ಳಕೆರೆಯಲ್ಲಿ ಜ. 04 ರಂದು ತಾಲ್ಲೂಕು ಕ್ರೀಡಾಂಗಣ.  ಹೊಳಲ್ಕೆರೆಯಲ್ಲಿ ಜ. 05 ರಂದು ತಾಲ್ಲೂಕು ಕ್ರೀಡಾಂಗಣ.  ಚಿತ್ರದುರ್ಗದಲ್ಲಿ ಜ. 06 ರಂದು ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ.  ಹೊಸದುರ್ಗದಲ್ಲಿ ಜ. 09 ರಂದು ತಾಲ್ಲೂಕು ಕ್ರೀಡಾಂಗಣ.  ಹಿರಿಯೂರಿನಲ್ಲಿ ಜ. 09 ರಂದು ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಮಟ್ಟದ ಆಯ್ಕೆ ಪ್ರಕ್ರಿಯೆ ನಿಗದಿತ ದಿನದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಜಿಲ್ಲಾ ಮಟ್ಟದ ಆಯ್ಕೆಯನ್ನು ಜ. 11 ರಿಂದ 13 ರವರೆಗೆ ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆಸಲಾಗುವುದು.
ಕಿರಿಯರ ವಿಭಾಗದಲ್ಲಿ ಆಯ್ಕೆಯಾಗಲು ಬಾಲಕ-ಬಾಲಕಿಯರು 2024 ರ ಜೂನ್ 01 ಕ್ಕೆ 14 ವರ್ಷ ಮೀರಿರಬಾರದು ಹಾಗೂ 8ನೇ ತರಗತಿಗೆ ಸೇರಲು ಅರ್ಹತೆ ಪಡೆದಿರಬೇಕು.  ಹಿರಿಯರ ವಿಭಾಗದಲ್ಲಿ ಆಯ್ಕೆಯಾಗಲು ಯುವಕ, ಯುವತಿಯರು 2024 ರ ಜೂನ್ 01 ಕ್ಕೆ 18 ವರ್ಷ ಮೀರಿರಬಾರದು ಹಾಗೂ ಪ್ರಥಮ ಪಿಯುಸಿ ಗೆ ಸೇರಲು ಅರ್ಹತೆ ಪಡೆದಿರಬೇಕು.  ಚಿತ್ರದುರ್ಗ ಜಿಲ್ಲಾ ಕ್ರೀಡಾಶಾಲೆಗೆ ಸೇರಲು ಬಾಲಕ-ಬಾಲಕಿಯರು 2024 ರ ಜೂನ್ 01 ಕ್ಕೆ 10 ವರ್ಷ ಮತ್ತು 11 ವರ್ಷ ಮೀರದ ಬಾಲಕ ಬಾಲಕಿಯರು ಆಯ್ಕೆಯಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ: ಆಟೋ-ರಾಯಲ್ ಎನ್ ಫೀಲ್ಡ್ ಬೈಕ್ ನಡುವೆ ಅಪಘಾತ ಸ್ಥಳದಲೇ ಎರಡು ಸಾವು

ಹೆಚ್ಚಿನ ಮಾಹಿತಿಗಾಗಿ ಮಹಮ್ಮದ್ ಮುಹೀಬುಲ್ಲಾ, ವಾಲಿಬಾಲ್ ತರಬೇತುದಾರರು, ಚಿತ್ರದುರ್ಗ ಮೊ: 9611673475 ಅಥವಾ ತಿಪ್ಪಣ್ಣ ಎಸ್ ಮಾಳಿ, ಅಥ್ಲೆಟಿಕ್ಸ್ ತರಬೇತುದಾರರು ಚಿತ್ರದುರ್ಗ ಮೊ: 9380889647 ಇವರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours