ಪೊಗರು ಚಿತ್ರದ ಬಿಡುಗಡೆಗೆ ಡೆಟ್ ಫಿಕ್ಸ್

 

ಪೊಗರು ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ.

ಹೌದು, ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಫೆ.19ಕ್ಕೆ ತೆರೆಕಾಣುತ್ತಿದೆ. ಸ್ವತಃ ಧ್ರುವ ಸರ್ಜಾ ಈ ವಿಚಾರವನ್ನು ಘೋಷಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಅಂತೆ-ಕಂತೆಗಳಿಗೆ ತೆರೆಬಿದ್ದಿದೆ.

ಆರಂಭದಲ್ಲಿ ಜನವರಿ ಕೊನೆಯ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂಬ ಸುದ್ದಿ ಕೇಳಿ ಬಂದಿತ್ತಾದರೂ, ಆ ನಂತರ ಅದು ಫೆಬ್ರವರಿ ಮೊದಲ ವಾರ ಎಂದು ಕೇಳಿಬಂತು. ಇದರಿಂದ ಬೇರೆ ಚಿತ್ರ ತಂಡಗಳಿಗೆ ತಮ್ಮ ಸಿನಿಮಾ ಬಿಡುಗಡೆ ಪ್ಲಾನ್‌ ಮಾಡಿಕೊಳ್ಳುವುದು ಕಷ್ಟವಾಗಿತ್ತು.
ಏಕೆಂದರೆ ಸದ್ಯ ಪೊಗರು ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸ್ಟಾರ್‌ ಸಿನಿಮಾ. ಅದಕ್ಕಿಂತ ಹೆಚ್ಚಾಗಿ ಹೆಚ್ಚು ಮಾಸ್‌ ಫ್ಯಾನ್ಸ್‌ ಫಾಲೋವರ್ ಹೊಂದಿರುವ ಧ್ರುವ, ಬರೋಬ್ಬರಿ ಮೂರೂವರೆ ವರ್ಷಗಳ ಬಳಿಕ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ.

ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ತೆರೆಕಂಡಿರೋದು 2017 ಸೆಪ್ಟೆಂಬರ್‌ನಲ್ಲಿ. ಆ ನಂತರ ಅವರು ನಾಯಕರಾಗಿರುವ ಯಾವುದೇ ಚಿತ್ರ ತೆರೆಗೆ ಬಂದಿಲ್ಲ. ಹಾಗಾಗಿ, ಪೊಗರು ಮೇಲೆ ನಿರೀಕ್ಷೆ ಹೆಚ್ಚೇ ಇದೆ. ಜೊತೆಗೆ ಚಿತ್ರದ ಖರಾಬು ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ.
ಡದ ಜೊತೆಗೆ ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours