ವಸತಿ ರಹಿತರಿಗೆ ಶೀಘ್ರ ವಸತಿ ಭಾಗ್ಯಕ್ಕೆ ಶಾಸಕ ತಿಪ್ಪಾರೆಡ್ಡಿ ಸಿದ್ದತೆ.

 

 

 

ಚಿತ್ರದುರ್ಗ: ವಸತಿ ರಹಿತ ಬಡವರಿಗೆ ಶೀಘ್ರವಗಿ ವಸತಿ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ “ಆಶ್ರಯ ಮನೆ” ಯೋಜನೆಯ ಸಭೆಯಲ್ಲಿ ಮಾತನಾಡಿ ನಗರದಲ್ಲಿ ಬಡವರನ್ನು ಗುರುತಿಸಿ ವಸತಿ ರಹಿತರಿಗೆ ವಸತಿ ನೀಡುವ ಕೆಲಸ ನಡೆಯುತ್ತಿದೆ. ನಗರದಲ್ಲಿ ವಸತಿಯದೆ ನಗರ ಆಶ್ರಯದ್ದು ದೊಡ್ಡ ಸಮಸ್ಯೆಯಾಗಿದೆ. ಸರ್ವರಿಗೂ ಸೂರು ಯೋಜನೆಯಲ್ಲಿ ಅರ್ಜಿ ಆಹ್ವಾನಿಸಿದ್ದು 14 ಸಾವಿರ ಅರ್ಜಿ ಹಾಕಿದ್ದರು. ಆದರೆ ಅದರಲ್ಲಿ 5 ರಿಂದ 6 ಸಾವಿರ ಬೋಗಸ್ ಅರ್ಜಿ ಸಿಕ್ಕಿದೆ. ಮೇಗಳಹಳ್ಳಿ ಬಳಿಯಲ್ಲಿ G+2 ಮಾದರಿಯಲ್ಲಿ 1001 ಮನೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಜನರಿಗೆ ಮನೆಯ ಅವಶ್ಯಕತೆ ಎಷ್ಟಿದೆ ಅಂದರೆ ಮನೆ ಮುಂಗಡವಾಗಿ ವಂತಿಕೆ ಹಣವನ್ನು ಕಟ್ಟುತ್ತೇವೆ . ಹಣವನ್ನು ಕಟ್ಟಲು ಬ್ಯಾಂಕ್ ಅಕೌಂಟ್ ಮಾಹಿತಿ ಕೇಳುತ್ತಿದ್ದು ಜನರಿಗೆ ಮನೆಯ ಅವಶ್ಯಕತೆ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ ಎಂದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು, ವಿಧವೆಯರಿಗೆ ಜೊತೆಗೆ ವಿಶೇಷವಾಗಿ ಮಂಗಳಮುಖಿ ಸಹ ಮನೆ ನೀಡಲು ಪ್ರಯತ್ನಿಸುತ್ತಿದ್ದೇನೆ. ಪ್ರಸ್ತತ 300 ಜನರನ್ನು ಪಟ್ಟಿ ಮಾಡಿದ್ದೇವೆ.ಉಳಿದಿರುವ ಕಡು ಬಡವರಿಗೆ ಮನೆ ನೀಡಲು ಎಲ್ಲಾ ರೀತಿಯ ಮಾಹಿತಿ ಪಡೆಯುತ್ತಿದ್ದೇನೆ. ನಗರದ ಸುತ್ತಮುತ್ತಲಿಲೂ ಸರ್ಕಾರಿ ಜಮೀನು ಇರುವುದು ತುಂಬಾ ವಿರಳವಾಗಿದೆ. ಆದರು ಸಹ ತಹಶಿಲ್ದಾರ ಜೊತೆ ಚರ್ಚೆ ನಡೆಸಿ ಹಲವು ಪ್ರಯತ್ನಗಳ ನಂತರ ಮದಕರಿಪುರ ಪಕ್ಕದಲ್ಲಿ 12 ಎಕರೆ ಜಮೀನು ಸಿಕ್ಕಿದ್ದು ಅದರಲ್ಲಿ 8.,5 ಎಕರೆ ನಗರ ಆಶ್ರಯಕ್ಕೆ ತೆಗೆದುಕೊಂಡು ನಂತರ 3.5 ಎಕರೆ ಮದಕರಿಪುರ ಗ್ರಾಮ ವ್ಯಾಪ್ತಿಗೆ ನೀಡಲಾಗಿದೆ. ನಗರಸಭೆ ಅವರು ಮದಕರಿಪುರ ಬಳಿಯ ಜಮೀನನ್ನು ತನ್ನ ಇಲಾಖೆಗೆ ತೆಗೆದುಕೊಂಡಿದ್ದಾರೆ. ಎಂ.ಕೆ.ಹಟ್ಟಿ ಬಳಿ 80 ಎಕರೆ ಸರ್ಕಾರಿ ಜಮೀನು ಇದೆ. ಅದು ಅರಣ್ಯ ಇಲಾಖೆ ಮತ್ತು ಖಾಸಗಿವರಿಗೆ 30-40 ಎಕರೆ ಖರೀದಿ ಮಾಡಿದ್ದಾರೆ ಎಂಬುದು ಮಾಹಿತಿ ಇದೆ. ಇದರ ಬಗ್ಗೆ ಮಾಹಿತಿ ಪಡೆದು ತಹಶಿಲ್ದಾರ , ಅರಣ್ಯ ಇಲಾಖೆ , ಪಂಚಾಯಿತಿ ಜೊತೆ ಸಭೆ ನಡೆಸಿ ಉಳಿದಿರುವ ಜಮೀನನ್ನು ನಗರ ಆಶ್ರಯಕ್ಕೆ ಮತ್ತು ಎಂ.ಕೆ.ಹಟ್ಟಿ ಪಂಚಾಯಿತಿ ಗ್ರಾಮದ ವಸಹಿ ರಹಿತರಿಗೆ ಬಳಸಲಾಗುವುದರು. ಜಿ.ಆರ್.ಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ 20 ಎಕರೆ ಜಮೀನು ಸಿಕ್ಕಿದೆ. ಇದರಲ್ಲಿ 10 ಎಕರೆ ನಗರಕ್ಕೆ ಮತ್ತು 10 ಎಕರೆ ಜೆ.ಆರ್.ಹಳ್ಳಿ ಪಂಚಾತಿಯಿಗೆ ಗ್ರಾಮ ವ್ಯಾಪ್ತಿಗೆ ನೀಡಲಾಗುವುದು. ಒಟ್ಟಿನಲ್ಲಿ ಅದಷ್ಟು ವೇಗವಾಗಿ ಸರ್ಕಾರದ ವಸತಿ ಸಚಿವರ ಮತ್ತು ಮುಖ್ಯಮಂತ್ರಿ ಜೊತೆಯಲ್ಲಿ ಮಾತನಾಡಿ  ವಸತಿ ಸಮಸ್ಯೆಗೆ ಹೆಚ್ಚಿನ ಹಣ ತರುತ್ತೇನೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷ ತಿಪ್ಪಮ್ಮ, ನಗರಸಭೆ ಸದಸ್ಯ ವೆಂಕಟೇಶ್, ನಗರಸಭೆ ಪೌರಯುಕ್ತ ಹನುಮಂತರಾಜು, ತಹಶಿಲ್ದಾರ ವೆಂಕಟೇಶ್, ಉಪ ವಿಭಾಗಧಿಕಾರಿ ನಾಗರಾಜ್ ಇದ್ದರು.

[t4b-ticker]

You May Also Like

More From Author

+ There are no comments

Add yours