ಗುರುವನ್ನು ಪೂಜಿಸಿ ಗೌರವಿಸಿ ಭಕ್ತಿ ಸಮರ್ಪಿಸುವುದು ಭಾರತೀಯ ಪರಂಪರೆ.

 

ಶ್ರೀ ಬೃಹನ್ಮಠ ಪ್ರೌಢಶಾಲೆಯಲ್ಲಿ 1994 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಗುರುಮಠಕಲ್ ಮಠ, ಶ್ರೀ ಮಹಾಂತ ದೇವರು ನಿಪ್ಪಾಣಿ ಮಠ ಇವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜನರಿಗೆ ವಿದ್ಯೆ ಮತ್ತು ಜ್ಞಾನದ ಬೆಳಕನ್ನು ನೀಡಿ ಮನಸ್ಸನ್ನು ಶುದ್ದಗೊಳಿಸಿ ಉತ್ತಮ ಮಾರ್ಗ ತೋರುವ ಗುರುಗಳನ್ನು ಶ್ರದ್ದಾ ಭಕ್ತಿಯಿಂದ ಗೌರವಿಸುವ ದಿನವಾದ ಇಂದು ಶಿಷ್ಯರೆಲ್ಲಾ ಸೇರಿ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಿ ಭಕ್ತಿ ಸಮರ್ಪಿಸುವುದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ. ನಮಗೆಲ್ಲರಿಗೂ ವಿದ್ಯೆ ಕಲಿಸಿದ ಗುರುಗಳಿಗೆ ಅವರ ಶಿಷ್ಯರೆಲ್ಲರೂ ಒಟ್ಟಾಗಿ ಸೇರಿ ಗೌರವಪೂರ್ವಕವಾಗಿ ಭಕ್ತಿಪೂರ್ವಕ ಗುರುವಂದನೆ ಸಲ್ಲಿಸುತ್ತಿದ್ದೇವೆ ಎಂದು ಹಳೆಯ ವಿದ್ಯಾರ್ಥಿಯಾದ ಮಹೇಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಗುರುವಿನ ಸ್ಥಾನ ದೊಡ್ಡದು ಗುರುವಿನ ಗುಲಾಮನಾಗುವತನಕ ಮುಕುತಿ ದೊರೆಯದಣ್ಣ ಎಂದು ನಾವೆಲ್ಲರೂ ಆಸಕ್ತಿಯಿಂದ ಶ್ರದ್ಧೆಯಿಂದ ಗುರುಗಳ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಗುರುಮಠಕಲ್ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಶ್ರೀ ಮಹಾಂತ ಸ್ವಾಮೀಜಿ ಅವರು ಮಾತನಾಡಿ ತಮ್ಮ ಹಾಗೂ ಗುರುಗಳ ಸಂಬಂಧ ತಾಯಿ ಮಕ್ಕಳ ಪ್ರೀತಿ ಅದು ಅಪರೂಪದ ಭಾಂಧವ್ಯ ಎಂದರು.

ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶ್ರೀ ಎಂಸಿ ಮುರುಗೇಂದ್ರಯ್ಯ, ಶ್ರೀಮತಿ ಸೌಭಾಗ್ಯಮ್ಮ, ಶ್ರೀ ಶರಣಪ್ಪ, ಶ್ರೀ ಬಸವರಾಜಪ್ಪ ಗಡ್ಡಪ್ಪನವರ್, ಶ್ರೀ ಮುರುಗೇಂದ್ರಪ್ಪ, ಶ್ರೀಮತಿ ಸಾವಿತ್ರಿ, ಶ್ರೀಮತಿ ಜಯಮ್ಮ,ಶ್ರೀ ರಂಗಪ್ಪ,ಶ್ರೀ ಬಸವರಾಜಪ್ಪ ಇವರನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೃಹನ್ಮಠ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಷಡಕ್ಷರಪ್ಪನವರು, ಬಸವತತ್ವ ಮಹಾವಿದ್ಯಾಲಯದ ಗುರುಲಿಂಗಯ್ಯನವರು ಹಾಗೂ ಬೃಹನ್ಮಠ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಆಶಾರಾಣಿ ಅವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸವಿ ನೆನಪಿಗಾಗಿ ಶಾಲೆಗೆ ಕೊಡುಗೆಯಾಗಿ ಗಾಡ್ರೇಜ್ ಬೀರು ಹಾಗೂ ದೊಡ್ಡ ಗಡಿಯಾರವನ್ನು ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಲತಾ, ರಾಘವೇಂದ್ರ, ನಯಾಜ್, ಗೀತಾ ,ಗಂಗಮ್ಮ, ಚೈತ್ರ, ಪುಷ್ಪ ,ವಾಸು ,ಅರುಣ, ರಾಜಶೇಖರ್ ಕರಿ ಸಿದ್ದೇಶ್ ಮುಂತಾದವರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours