ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

 

ಹಿರಿಯೂರು: ಕೋಮು ಗಲಭೆ ಸೃಷ್ಠಿಸುವ ಹಿನ್ನಲೆಯಲ್ಲಿ  ಶಾಸಕರ, ಪೋಲಿಸರ, ಪತ್ರಕರ್ತರ ಮೇಲೆ ದಾಳಿ ಮಾಡಿರುವುದನ್ನು ಖಂಡಿಸಿ ಮತ್ತು ಶಾಸಕರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು  ಭೋವಿ ಸಮಾಜದ ವತಿಯಿಂದ  ತಹಶಿಲ್ದಾರ ಅವರಿಗೆ  ಮನವಿ ಸಲ್ಲಿಸಿದರು.  

ಬೆಂಗಳೂರಿನ ಪುಲಕೇಶಿ ನಗರದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಭೋವಿ ಸಮಾಜದ ಹಿರಿಯ ಮುಖಂಡರು ಶಾಸಕರಾದ ಅಖಂಡ ಶ್ರೀನಿವಾಸ್ ಮೂರ್ತಿ ನಿವಾಸದ ಮೇಲೆ ದಾಳಿ ಮಾಡಿ ಸುಟ್ಟಿರುವುದನ್ನು ಮತ್ತು ಅಧಿಕಾರಿಗಳಿಗೆ ಸ್ಥಳಕ್ಕೆ ಹೋಗದಂತೆ ಹಾಗೂ ಪತ್ರಕರ್ತರ ಮೇಲೆ ಸುದ್ದಿ ಮಾಡದಂತೆ ದಾಳಿಮಾಡಿರುವುದು ಖಂಡನೀಯ ಎಂದರು‌. ಹಾಗೂ ಶಾಸಕರ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು ಕೂಡಲೇ ತಪ್ಪು ಮಾಡಿರುವವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ಭೋವಿ ಸಮಾಜದ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಭೂತ ಭೋವಿ, ತಿಪ್ಪೇಸ್ವಾಮಿ, ಬಾಲು, ರಂಗಸ್ವಾಮಿ, ರಾಜು, ತಿಮ್ಮರಾಜು, ಕೃಷ್ಣಮೂರ್ತಿ, ತಿಮ್ಮರಾಜು ಇದ್ದರು.

[t4b-ticker]

You May Also Like

More From Author

+ There are no comments

Add yours