ಕೋಟೆನಾಡಿನಲ್ಲಿ ಜೀ ಕನ್ನಡ ವಾಹಿನಿಯ ಜೀ ಗಣೇಶೋತ್ಸವ

 

*ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಭರ್ಜರಿ ಬ್ಯಾಚುಲರ್ಸ್ ಮಹಾಸಂಗಮ.

ಚಿತ್ರದುರ್ಗ:ವೀಕ್ಷಕರಿದ್ದಲ್ಲಿಗೆ ವಾಹಿನಿ ಬರೋದು ಹೊಸತೇನಲ್ಲ,ಆದ್ರೆ ಯಾವಾಗಲು ಹೊಸತನಕ್ಕೆ ಹಾತೊರೆಯುತ್ತ,ತನ್ನ ವೀಕ್ಷಕರಿಗೆ ಹೊಸ ಬಗೆಯ ಕಾರ್ಯಕ್ರಮದ ಮೂಲಕ ಮನೋರಂಜನೆ ನೀಡುತ್ತ ಬಂದಿರುವ ಜೀ ಕನ್ನಡ ವಾಹಿನಿಯು ಸದಾ ವೀಕ್ಷಕರ ನಾಡಿಮಿಡಿತವನ್ನ ಅರಿತು ಕಾರ್ಯಕ್ರಮವನ್ನು ರೂಪಿಸುತ್ತಾ ಬರುತ್ತಿದೆ.

ಮಾಹಿತಿಗೆ ಓದಿ: ತೋಟಗಾರಿಕೆ ಇಲಾಖೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಇದೀಗ ಈ ನಿಟ್ಟಿನಲ್ಲಿ ತನ್ನ ಜನಪ್ರೀಯ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಭರ್ಜರಿ ಬ್ಯಾಚುಲರ್ಸ್ ಶೋನ ಕಲಾವಿದರೊಂದಿಗೆ ಇದೀಗ ಕೋಟೆ ನಾಡಿನ ಜನರನ್ನ ಮನೋರಂಜಿಸಲು ಸಿದ್ದವಾಗಿದೆ.

ಓದಿ:ರೈತರ ಪಾಲಿಗೆ ಶಾಪವಾದ ಕಾಂಗ್ರೆಸ್ ಸರ್ಕಾರ

ಈಗ ಎಲ್ಲೆ ನೋಡಿದರು ಹಬ್ಬಗಳ ಸಂಭ್ರಮ,ಅದರಲ್ಲು ಗಣೇಶ ಚತುರ್ಥಿ ಬಂತು ಅಂದ್ರೆ ಮನೆಯಲ್ಲಿ,ಬೀದಿಗಳಲ್ಲಿ,ಊರಲ್ಲಿ ಒಂದು ತರಹದ ಸಂಭ್ರಮ ಮನೆ ಮಾಡುತ್ತದೆ,ಗಲ್ಲಿಗಲ್ಲಿಗಳಲ್ಲಿ ಕೂರಿಸೋ ಗಣಪನಿಗೆ ಪೂಜೆ ಜೊತೆ ಹಾಡು,ನೃತ್ಯ,ನಗೆಹಬ್ಬ ಕಾರ್ಯಕ್ರಮಗಳು ನಮ್ಮನ್ನ ಮನೋರಂಜಿಸುತ್ತದೆ, ಈ ನಿಟ್ಟಿನಲ್ಲಿ ಆ ಎಲ್ಲಾ ಮನೋರಂಜನೆಯನ್ನ ಒಂದೆ ಕಡೆ ಕೊಡೋಕೆ ಜೀ ಕನ್ನಡ ನಿರ್ಧರಿಸಿದ್ದು ,ತನ್ನ ವಾಹಿನಿಯ ಬಹು ಜನಪ್ರಿಯ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಭರ್ಜರಿ ಬ್ಯಾಚುಲರ್ಸ್ ತಂಡ ಚಿತ್ರದುರ್ಗದಲ್ಲಿ ಜೀ ಗಣೇಶೋತ್ಸವ ಕಾಯರ್ಕ್ರಮದ ಮೂಲಕ ಅಲ್ಲಿನ ಅಭಿಮಾನಿಗಳನ್ನ ಮನೋರಂಜಿಸಲು ಸಿದ್ದತೆ ನಡೆಸಿದೆ.
ಈ ಎಲ್ಲಾ ವಿಶೇಷತೆಯನ್ನ ನೀವು ನೋಡಬೇಕು ಅಂದ್ರೆ ಈ ಮಹಾಸಂಗಮ ಕಾರ್ಯಕ್ರಮಕ್ಕೆ ನಿಮ್ಮ ಪ್ಯಾಮಿಲಿ ಸಮೇತ ಬರಲೇಬೇಕು ,ಕಾರ್ಯಕ್ರಮದಲ್ಲಿ ಭಾಗವಹಿಸುವ ವೀಕ್ಷಕರಲ್ಲಿ ಅದೃಷ್ಟಶಾಲಿ ೧೦೧ ವೀಕ್ಷಕರಿಗೆ ಅತ್ಯಾಕರ್ಷಕ ಬಹುಮಾನ ಸಿಗಲಿದ್ದು ಈ ಕಾರ್ಯಕ್ರಮ ಇದೇ ಶನಿವಾರ ದಿನಾಂಕ ೯.೯.೨೦೨೩ರಂದು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ದಲ್ಲಿ ಸಂಜೆ ೫ ಗಂಟೆಗೆ ನಡೆಯಲ್ಲಿದ್ದು ಸೀಮಿತ ಆಸನಗಳ ವ್ಯವಸ್ಥೆಯಿರುವ ಕಾರಣ ಮೊದಲು ಬಂದವರಿಗೆ ಮೊದಲ ಆದ್ಯತೆ.

 

[t4b-ticker]

You May Also Like

More From Author

+ There are no comments

Add yours