ರೈತರ ಪಾಲಿಗೆ ಶಾಪವಾದ ಕಾಂಗ್ರೆಸ್ ಸರ್ಕಾರ

 

ಚಳ್ಳಕೆರೆ:  ರಾಜ್ಯದಲ್ಲಿ ಬಹುಮತದಿಂದ ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರ ಕೇವಲ ನೂರು ದಿನದಲ್ಲೇ ರೈತ ಸಮುದಾಯವನ್ನು ಬೀದಿಗೆ ತಳ್ಳುವ ಮೂಲಕ ರೈತರ ವಿರೋಧಿ ಸರ್ಕಾರವಾಗಿ ಪರಿವರ್ತನೆಯಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ ಆರೋಪಿಸಿದರು.

ಓದಿ:ಉಪ ನಿರ್ದೇಶಕರ ಹುದ್ದೆ: ಅರ್ಜಿ ಆಹ್ವಾನ

ತಾಲ್ಲೂಕು ಕಚೇರಿ ಮುಂದೆ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟಿಸಿ ಮನವಿ ಅರ್ಪಿಸುವ ಸಂದರ್ಭದಲ್ಲಿ ಮಾತನಾಡಿದರು.

ಕಳೆದ ಅವಧಿಯ ಬಿಜೆಪಿ ಸರ್ಕಾರದ ನೇತೃತ್ವದ ವಹಿಸಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು. ರೈತರಿಗೆ ವರವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಿಸಾನ್ ಸಮ್ಮಾನ ಯೋಜನೆ, ರೈತ ವಿದ್ಯಾನಿಧಿ, ಭೂಸಿರಿ, ಶ್ರಮ ಶಕ್ತಿ, ಎಪಿಎಂಸಿ ಕಾಯ್ದೆ, ಕೃಷಿಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ ಹೀಗೆ ಹಲವಾರು ಕಾರ್ಯಕ್ರಮ ರೂಪಿಸಿ ರೈತರ ನೆರವಿಗೆ ಬಂದಿದ್ದರು. ಆದರೆ, ಆಡಳಿತಕ್ಕೆ ಬಂದ ಕಾಂಗ್ರೆಸ್‌ಸರ್ಕಾರ ಬಿಜೆಪಿಯ ಎಲ್ಲಾ ರೈತಪರ ಯೋಜನೆಗಳನ್ನು ರದ್ದು ಪಡಿಸುವ ಮೂಲಕ ರೈತರ ಬದುಕನ್ನು ಬೀದಿಗೆ ತಳ್ಳಿದೆ ಎಂದರು.

ಓದಿ: ಬಸ್ ಹರಿದು ಶಾಲೆ ವಿದ್ಯಾರ್ಥಿ ಸಾವು

ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ನವೀನ್ ಮಾತನಾಡಿ, ಪ್ರಸ್ತುತ ಮುಂಗಾರು ಮಳೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಎಲ್ಲಿಯೂ ಬೆಳೆಯಾಗಿಲ್ಲ. ಲಕ್ಷಾಂತರ ಹೆಕ್ಟೇರ್ ಪ್ರದೇಶದ ಶೇಂಗಾ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಯಾವುದೇ ಕೃಷಿ ಭೂಮಿಯಲ್ಲಿ ಶೇಂಗ ಬೆಳೆ ಕಾಣಸಿಗದು. ಎಲ್ಲೆಲ್ಲೂ ಹಾಹಾಕಾರ ತಲೆದೋರಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತರು ಸರ್ಕಾರದ ಕಡೆ ಎದುರು ನೋಡಿತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಬರಗಾಲ ಪರಿಸ್ಥಿತಿಯನ್ನು ಗಂಭಿರವಾಗಿ ಪರಿಗಣಿಸಿಲ್ಲ.

ಓದಿ: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ದಿನೇಶ್‌ರೆಡ್ಡಿ, ಯುವ ಮೋರ್ಚಾ ಮಾಜಿ ಅಧ್ಯಕ್ಷರಾದ ಟಿ.ಮಂಜುನಾಥ, ಈಶ್ವರನಾಯಕ, ಮುಂಖಡರಾದ ಜೆ.ಕೆ.ತಿಪ್ಪೇಶ್, ಆರ್.ಡಿ.ಮಂಜುನಾಥ, ಹೊಸಮನೆ ಮನೋಜ್, ಜಗದಾಂಭ, ಶಾಂತಮ್ಮ, ತಿಪ್ಪೇಸ್ವಾಮಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours