ತೋಟಗಾರಿಕೆ ಇಲಾಖೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

 

ಚಿತ್ರದುರ್ಗ:
2023-24ನೇ ಸಾಲಿನಲ್ಲಿ ಚಿತ್ರದುರ್ಗ ತಾಲ್ಲೂಕು ತೋಟಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳಲಿರುವ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಿಗೆ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 16  ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ದಾಳಿಂಬೆ, ಅಂಗಾಂಶ ಬಾಳೆ, ಹೈಬ್ರೆಡ್ ತರಕಾರಿ, ಸುಗಂಧರಾಜ ಹೂವುಗಳು, ಬಿಡಿ ಹೂವುಗಳ (ಸೇವಂತಿಗೆ, ಚೆಂಡು ಹೂ) ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಮತ್ತು ಸಮುದಾಯ ನೀರು ಸಂಗ್ರಹಣಾ ಘಟಕ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಪ್ಲಾಸ್ಟಿಕ್ ಮಲ್ಚಿಂಗ್, ನೆರಳುಪರದೆ, ಪ್ಯಾಕ್ ಹೌಸ್ ಹಾಗೂ ಈರುಳ್ಳಿ ಶೇಖರಣ ಘಟಕಗಳಿಗೆ ಸಹಾಯಧನ ಪಡೆಯಲು ಆಸಕ್ತ ರೈತ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 16 ಕೊನೆ ದಿನಾಂಕ ಆಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ, ಅರ್ಜಿಗಳನ್ನು ಗುರಿ, ಅನುದಾನ ಲಭ್ಯತೆಗೆ ಹಾಗೂ ಜೇಷ್ಠತೆಲಭ್ಯತೆಗೆ ಹಾಗೂ ಜೇಷ್ಠತೆಲಭ್ಯತೆಗೆ ಹಾಗೂ ಜೇಷ್ಠತೆ ಆಧಾರದ ಮೇಲೆ ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹೋಬಳಿ ಅಧಿಕಾರಿಗಳಾದ ಕಸಬಾ-1 ಎನ್.ಎಂ. ಮೇಘನ ದೂರವಾಣಿ ಸಂಖ್ಯೆ 8296763058, ಕಸಬಾ-2 ಎಸ್.ಎಂ.ಹರೀಶ ದೂರವಾಣಿ ಸಂಖ್ಯೆ 7065079256, ಭರಮಸಾಗರ ಹೋಬಳಿಯ ಎಂ.ಎಸ್. ಪೂಜಾ ದೂರವಾಣಿ ಸಂಖ್ಯೆ 8105891565,

ಓದಿ: ಶಾಲೆಯ ಕೊಠಡಿ ದಿಢೀರ್ ಕುಸಿದ,ಮಕ್ಕಳಿಗೇನಾಯ್ತು?

ಹಿರೇಗುಂಟನೂರು ಹೋಬಳಿಯ ಹೆಚ್.ತಿಪ್ಪೇಸ್ವಾಮಿ ದೂರವಾಣಿ ಸಂಖ್ಯೆ 9902227011, ತುರುವನೂರು ಹೋಬಳಿಯ ಜೀತೇಂದ್ರ ಚೌವ್ಹಣ್ ದೂರವಾಣಿ ಸಂಖ್ಯೆ 6362645646 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours