ಮಲ್ಲಿಕಾರ್ಜುನಪ್ಪ ಎಲ್ಲರ ಮನದಲ್ಲಿ ಉಳಿದಿದ್ದಾರೆ: ಶಿವಲಿಂಗಾನಂದ ಶ್ರೀ

 

ಚಿತ್ರದುರ್ಗ : ಪತಂಜಲಿ ಯೋಗ ಸಮಿತಿ ಮೂಲಕ ಎಲ್ಲರಿಗೂ ಯೋಗ ಅಭ್ಯಾಸ ಮಾಡಿಸುತ್ತಿದ್ದ ಮಲ್ಲಿಕಾರ್ಜುನಪ್ಪ ಎಲ್ಲರ ಮನದಲ್ಲಿ ಉಳಿದ್ದಾರೆಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಸ್ಮರಿಸಿದರು.

 

ಓದಿ: ತೋಟಗಾರಿಕೆ ಇಲಾಖೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಕಳೆದ ತಿಂಗಳು 29 ರಂದು ನಿಧನರಾದ ಮಲ್ಲಿಕಾರ್ಜುನಪ್ಪನವರ ಆತ್ಮ ಶಾಂತಿಗಾಗಿ ಚಳ್ಳಕೆರೆ ಗೇಟ್‍ನಲ್ಲಿರುವ ಎಸ್.ಎಸ್.ಕೆ.ಎಸ್.ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ನುಡಿನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಓದಿ:ವಿಕಲಚೇತನರಿಗೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ಮಲ್ಲಿಕಾರ್ಜುನಪ್ಪನವರು ಅಂಚೆ ಇಲಾಖೆಯಲ್ಲಿ ಹೆಡ್ ಪೋಸ್ಟ್ ಮಾಸ್ಟರ್ ಆಗಿದ್ದುಕೊಂಡು ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಪ್ರತಿಯೊಬ್ಬರು ಯೋಗ ಮಾಡಿ ಆರೋಗ್ಯವಂತರಾಗಿರಬೇಕೆಂಬ ಸಂದೇಶವನ್ನು ನೀಡುವ ಮೂಲಕ ಮನೆ ಮಾತಾಗಿದ್ದಾರೆ. ಹುಟ್ಟುವುದು ಗೊತ್ತಾಗುತ್ತದೆ. ಆದರೆ ಮರಣ ಯಾರಿಗೂ ಗೊತ್ತಾಗುವುದಿಲ್ಲ. ಮಲ್ಲಿಕಾರ್ಜುನಪ್ಪನವರು ಇದ್ದಕ್ಕಿಂದಂತೆ ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ಆದರೆ ಅವರ ಚಿಂತನೆಗಳು ಮಾತ್ರ ಜೀವಂತವಾಗಿದೆ. ಮನುಷ್ಯ ಎಷ್ಟು ವರ್ಷ ಬದುಕಿದ್ದ ಎನ್ನುವುದು ಮುಖ್ಯವಲ್ಲ. ಜೀವಿತಾವಧಿಯಲ್ಲಿ ನಾಲ್ಕಾರು ಜನಕ್ಕೆ ಪ್ರಯೋಜನವಾಗುವ ಯಾವ ಕೆಲಸ ಮಾಡಿದ್ದ ಎನ್ನುವುದು ನೆನಪಿನಲ್ಲಿ ಉಳಿಯುತ್ತದೆ. ಜೀವನ ಅಶಾಶ್ವತ ಎಂದು ಹೇಳಿದರು.

ಓದಿ: ಹೊಸ ನ್ಯಾಯಬೆಲೆ ಅಂಗಡಿಗೆ ಅರ್ಜಿ ಆಹ್ವಾನ

ಮಾಜಿ ಸಂಸದ ಜನಾರ್ಧನಸ್ವಾಮಿ ಮಾತನಾಡಿ ಅಂಚೆ ಇಲಾಖೆಯ ನೌಕರಿ ಜೊತೆಯಲ್ಲಿಯೇ ಯೋಗಾಭ್ಯಾಸ ಮಾಡಿಸುತ್ತಿದ್ದ ಮಲ್ಲಿಕಾರ್ಜುನಪ್ಪನವರಿಂದ ಸಾವಿರಾರು ಜನ ಒಂದಲ್ಲ ಒಂದು ರೀತಿಯ ಅನುಕೂಲ ಪಡೆದುಕೊಂಡಿದ್ದಾರೆ. ಸರಳತನವನ್ನು ಮೈಗೂಡಿಸಿಕೊಂಡಿದ್ದ ಅವರಿಗೆ ಶಿಕ್ಷಣವೊಂದೆ ಜೀವನಕ್ಕೆ ಆಧಾರ ಎನ್ನುವುದು ಚನ್ನಾಗಿ ಗೊತ್ತಿದ್ದರಿಂದಲೇ ಇಬ್ಬರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ್ದಾರೆ. ರಸ್ತೆ, ನೀರು, ಚರಂಡಿ, ದೀಪ ಹೀಗೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಯಾವಾಗಲೂ ನನ್ನ ಜೊತೆ ಚರ್ಚಿಸುತ್ತಿದ್ದರು. ವೈಯಕ್ತಿಕವಾಗಿ ನನ್ನ ಬಳಿ ಏನನ್ನು ಅವರು ಕೇಳಲಿಲ್ಲ. ಎಲ್ಲರೂ ಒತ್ತಡದ ನಡುವೆ ಜೀವಿಸುತ್ತಿರುವ ಇಂದಿನ ಕಾಲದಲ್ಲಿ ಯೋಗಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದ ಮಲ್ಲಿಕಾರ್ಜುನಪ್ಪನವರು ಎಲ್ಲರಿಗೂ ಯೋಗ ಹೇಳಿಕೊಡುತ್ತ ಸಾರ್ಥಕ ಜೀವನ ನಡೆಸಿದ್ದಾರೆಂದು ನೆನಪಿಸಿಕೊಂಡರು.
ಚಳ್ಳಕೆರೆಯ ಕುದಾಪುರ ಸಮೀಪ ಡಿ.ಆರ್.ಡಿ.ಓ. ಆರಂಭಗೊಂಡಿರುವುದರ ಹಿಂದೆ ಮಲ್ಲಿಕಾರ್ಜುನಪ್ಪನವರ ಕಾಳಜಿಯಿದೆ. ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆ ಜಾರಿಗಾಗಿಯೂ ಸಾಕಷ್ಟು ಸಲ ಪ್ರಸ್ತಾಪಿಸಿದ್ದರು. ಮಲ್ಲಿಕಾರ್ಜುನಪ್ಪನವರು ನಮ್ಮನ್ನೆಲ್ಲಾ ಅಗಲಿರಬಹುದು. ಆದರೆ ಅವರ ತತ್ವ ಚಿಂತನೆ, ವಿಚಾರಧಾರೆಗಳು ಇನ್ನು ಜೀವಂತವಾಗಿದೆ ಎಂದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ವೇದಿಕೆಯಲ್ಲಿದ್ದರು.
ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಅನೇಕ ಯೋಗಪಟುಗಳು, ಅಂಚೆ ಇಲಾಖೆ ನೌಕರರು, ಮಲ್ಲಿಕಾರ್ಜುನಪ್ಪನವರ ಅಭಿಮಾನಿಗಳು, ಬಂಧು ಬಳಗದವರು ನುಡಿ ನಮನದಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours