ವಿರಾಟ್ ಹಿಂದೂ ಮಹಾಸಾಗರ ಗಣಪತಿ ಉತ್ಸವಕ್ಕೆ ಗೋ ಪೂಜೆಯೊಂದಿಗೆ ಚಾಲನೆ

 

ಹೊಸದುರ್ಗ: ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿರಾಟ್ ಹಿಂದೂ ಮಹಾಸಾಗರ ಗಣಪತಿ ಭಕ್ತ ಮಂಡಳಿ ವತಿಯಿಂದ 10ನೇ ವರ್ಷದ ಗಣೇಶೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಉತ್ಸವದ ಆರಂಭಿಕವಾಗಿ ಶುಕ್ರವಾರ ಬೆಲಗೂರು ಮಾರುತಿ ಗುರುಪೀಠದ ಶ್ರೀ ವಿಜಯ ಮಾರುತಿಶರ್ಮ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಗೋಪೂಜೆ ಮತ್ತು ಧ್ವಜ ಪೂಜೆಯ ಮೂಲಕ ಉತ್ಸವದ ಸಿದ್ಧತೆಗೆ ಚಾಲನೆ ನೀಡಲಾಯಿತು.

ಓದಿ: ಬಸ್ ಹರಿದು ಶಾಲೆ ವಿದ್ಯಾರ್ಥಿ ಸಾವು

  ಕಾರ್ಯಕ್ರಮದ ಕುರಿತು ವಿರಾಟ್ ಹಿಂದೂ ಮಹಾಸಾಗರ ಗಣಪತಿ ಭಕ್ತ ಮಂಡಳಿಯ ಅಧ್ಯಕ್ಷ ಪ್ರದೀಪ್ ಮಾತನಾಡಿ, ಇದೇ ತಿಂಗಳ ಸೆ.18ರ ಸೋಮವಾರದಿಂದ 30ರ ಶನಿವಾರದವರೆಗೆ 13 ದಿನಗಳ ಕಾಲ ಗಣೇಶೋತ್ಸವ ನಡೆಯಲಿದೆ. 18 ರಂದು ಶ್ರೀ ಸ್ವಾಮಿಯವರ ಪ್ರತಿಷ್ಠಾಪನೆ, 29 ರ ಬೆಳಿಗ್ಗೆ ಗಣಹೋಮ, ಪೂಜಾದಿಗಳು, ಪೂರ್ಣಾಹುತಿ, ಅನ್ನ ಸಂತರ್ಪಣೆ ನಡೆಯಲಿದೆ. 30 ರ ಶನಿವಾರದಂದು ವಿವಿಧ ವಾದ್ಯ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ಜರುಗಲಿದ್ದು, ಸಂಜೆ ಮಠದ ಹೊಂಡದಲ್ಲಿ ಶ್ರೀ ಸ್ವಾಮಿಯವರ ಉದ್ವಾಸನಾ ಕಾರ್ಯಕ್ರಮ ನಡೆಯಲಿದೆ. ಭಕ್ತರು ತನು-ಮನ-ಧನ ಸಹಾಯ ನೀಡಿ ಎಂದು ಹೇಳಿದರು.

ಮಾಹಿತಿಗೆ ಓದಿ :ತೋಟಗಾರಿಕೆ ಇಲಾಖೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

  ಈ ವೇಳೆ ಬನಶಂಕರಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ಸದ್ಗುರು ಸಂಸ್ಥೆ ಮಾಲೀಕ ಡಿ.ಏಸ್.ಪ್ರದೀಪ್, ಮುಖಂಡರಾದ ಮಠ ಶಿವು, ಸತೀಶ್, ಸಂತೋಷ್, ಸಿಂಧೂ ಅಶೋಕ್, ಸಮಿತಿ ಸದಸ್ಯರಾದ ಮನೋಜ್, ಅರುಣ್ ರಾಮಗಿರಿ, ಭರತ್ ಮತ್ತು ಶ್ರೇಯಸ್ ಸೇರಿದಂತೆ ಹಲವರಿದ್ದರು.
[t4b-ticker]

You May Also Like

More From Author

+ There are no comments

Add yours