ಉತ್ತಮ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ: ಟಿ.ರಘುಮೂರ್ತಿ

 

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಬೆಳಘಟ್ಟ ಗ್ರಾಮದಲ್ಲಿ ಎತ್ತಿನ ಜಾತ್ರೆಯ ಪ್ರಯುಕ್ತ ಇಂದು ಬೆಳಘಟ್ಟ ಗ್ರಾಮದ ಕೆರೆಯ ಬಳಿಯಲ್ಲಿ ಬುಡಕಟ್ಟು ಆರಾಧ್ಯ ದೇವರುಗಳಾದ  ಸೂರ್ಯ ಎರಘಟ್ಟನಾಯಕ, ಗಾದ್ರಿಪಾಲನಾಯಕ, ಜೋಗ ಮುತ್ತಯ್ಯ, ಮಲ್ಲೆ ಚೌಡಮ್ಮ ದೇವರುಗಳಿಗೆ  ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ
( T. Raghumurthy)ದೇವರುಗಳಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ ಮಾತನಾಡಿ ಜಿಲ್ಲೆಯ ಜನರಿಗೆ ಉತ್ತಮ ಮಳೆ ಬೆಳೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ನಮ್ಮ ಜಿಲ್ಲೆ ಬುಡಕಟ್ಟು ಸಂಪ್ರದಾಯದ ತವರೂರಾಗಿದೆ.ಬುಡಕಟ್ಟು ಆಚರಣೆಯನ್ನು ಮೊದಲಿನಿಂದಲೂ ನಾವು ಆಚರಣೆ ಮಾಡಿಕೊಂಡು ಬರುತ್ತಿದ್ದು  ಪ್ರತಿ ವರ್ಷದಂತೆ ಈ ವರ್ಷ ಸಹ  ಬೆಳಘಟ್ಟ ಗ್ರಾಮದ ಕೆರೆಯ ಬಳಿ ಎಲ್ಲಾ ದೇವರುಗಳಿಗೆ  ಗಂಗಮ್ಮ ಪೂಜೆ ಮಾಡಿ ನಮ್ಮ ಆರಾಧ್ಯ ದೈವ  ಎತ್ತುಗಳಿಗೆ ಪೂಜೆ ಸಲ್ಲಿಸಿ ಹಬ್ಬವನ್ನು ಆಚರಣೆ ಮಾಡುತ್ತೇವೆ.
ದೀಪಾವಳಿ ಅಮಾವಾಸ್ಯೆ ಆದ ನಂತರ ದೊಡ್ಡಗೌರಿ ಹುಣ್ಣಿಮೆ ಬಂದ ಸಂದರ್ಭದಲ್ಲಿ ಈ ಹಬ್ಬ ಮಾಡಲಾಗುತ್ತದೆ. ಎರಡು ದಿನಗಳ‌ ಕಾಲ ನಡೆಯುವ ಜಾತ್ರೆಯಲ್ಲಿ ಎಲ್ಲಾ ಸುತ್ತಮುತ್ತಲಿನ ಗ್ರಾಮದವರು ಬರುತ್ತಾರೆ. ನಾನು ಸಹ ಪ್ರತಿ ವರ್ಷ ಆಗಮಿಸಿ ಪೂಜೆ ಸಲ್ಲಿಸುತ್ತೇನೆ.
ಪ್ರತಿ ಗ್ರಾಮಗಳಲ್ಲಿ ಬುಡಕಟ್ಟು ಆಚರಣೆಯಿಂದ  ಹಳ್ಳಿಗಳಿಗೆ ಒಂದು ರೀತಿಯಲ್ಲಿ ಶಾಂತಿ ನೆಲೆಸುತ್ತದೆ ಎಂಬುದು ಪ್ರತೀತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ.ಜಿ.ಪಂ.ಸದಸ್ಯ ಬಾಬುರೆಡ್ಡಿ, ಬೆಳಘಟ್ಟ  ಗ್ರಾಮ ಪಂಚಾಯತಿ ಅಧ್ಯಕ್ಷೆ ಎಂ.ಆರ್.ಮಂಜಶ್ರೀ ಪಾಲಯ್ಯ, ಉಪಾಧ್ಯಕ್ಷ ಡಿ.ಎ.ರಾಮಚಂದ್ರರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯರಾದ  ಹನುಮಂತರೆಡ್ಡಿ, ಕಮಲಮ್ಮ ಓಬಯ್ಯ, ಕವಿತಾ , ಕೆ.ಹೆಚ್.ನಾಗೇಶ್, ಮುಖಂಡರು ತಿಪ್ಪೇಸ್ವಾಮಿ, ಜಗದೀಶ್, ಎ.ಪಿ.ಸುರೇಶ್, ಬಕ್ಕೇಶ್ ರೆಡ್ಡಿ   ಇದ್ದರು.
[t4b-ticker]

You May Also Like

More From Author

+ There are no comments

Add yours