ಇಷ್ಟಾರ್ಥ ಸಿದ್ಧಿಗಾಗಿ ಕುಂಚಿಟಿಗರ ಅಷ್ಟ ದೈವಯಾತ್ರೆಗೆ ಹೆಸರನ್ನ ನೋಂದಾಯಿಸಲು ಹುಲಿರಂಗನಾಥ್ ಮನವಿ

 

ಹಿರಿಯೂರು :ಇದೇ ಡಿಸೆಂಬರ್ ೨೪ ರಂದು ಬೆಳಿಗ್ಗೆ ೪-೩೦ ರಿಂದ ಸಂಜೆ ೧೧-೦೦ ಗಂಟೆ ತನಕ “ಇಷ್ಟಾರ್ಥ ಸಿದ್ಧಿಗಾಗಿ ಕುಂಚಿಟಿಗರ ( Kunchitiga)ಅಷ್ಟದೈವ ಯಾತ್ರೆ” ಒಂದು ದಿನದ ಭಾವೈಕ್ಯತಾ ಪ್ರವಾಸ ಏರ್ಪಡಿಸಲಾಗಿದೆ ಎಂಬುದಾಗಿ ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹುಲಿರಂಗನಾಥ್ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ವತಿಯಿಂದ ಆಂಧ್ರಪ್ರದೇಶದ ಗಡಿನಾಡು ಕುಂಚಿಟಿಗರ ಮನೆದೇವರುಗಳ ದರ್ಶನಪ್ರವಾಸದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಪ್ರವಾಸ ಸಂದರ್ಭದಲ್ಲಿ ಮರಡಿಗುಡ್ಡ ರಂಗನಾಥಸ್ವಾಮಿ. ಮೂಗನಹಳ್ಳಿ ಅಮ್ಮಾಜಿ ಕಾವಲೇಶ್ವರಿ ಮತ್ತು ಮಾಗೋಡು ಕಂಬದರಂಗನಾಥಸ್ವಾಮಿ, ಶಿವನಗೆರೆ ಹೊನ್ನೇಶ್ವರಸ್ವಾಮಿ. ವಿರಾಪುರಕರಿಯಮ್ಮ, ಏಳುಮಂದಕ್ಕ, ತಾಡಿನಾಗಮ್ಮ, ಕೊಂಡವಾಡಿ ಚೌಡೇಶ್ವರಿ, ವಡ್ಡಗೆರೆ ವೀರನಾಗಮ್ಮ, ಎಲೆರಾಂಪುರ ನರಸಿಂಹಸ್ವಾಮಿ, ದೇವರುಗಳ ದೇವಸ್ಥಾನ ದರ್ಶನ ಮಾಡಿಸಲಾಗುವುದು.

ಇದನ್ನೂ ಓದಿ: ಚಿತ್ರದುರ್ಗ ದಾವಣಗೆರೆ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ

ಈ ಪ್ರವಾಸಕ್ಕೆ ಬರುವ ಆಸಕ್ತ ಕುಂಚಿಟಿಗ ಕುಲಬಾಂಧವರು ಡಿಸೆಂಬರ್ ೧೦ ರೊಳಗೆ ರೂ ೬೦೦ ಪಾವತಿಸಿ, ನಮ್ಮ ಕಸವನಹಳ್ಳಿ ರಮೇಶ್ :೯೯೪೫೯೪೧೮೮೦, ಕ್ಯಾದಿಗುಂಟೆ ಜಯರಾಮಯ್ಯ :೭೪೦೬೬೬೧೭೧೦, ವಿ.ಕುಬೇರಪ್ಪ :೯೯೭೨೧೯೯೪೫೮, ಕಾತ್ರಿಕೇನಹಳ್ಳಿ ಮಂಜುನಾಥ್ :೯೯೮೦೮೩೫೭೦೪ ಕುಂಚಿಟಿಗ ಮುಖಂಡರನ್ನು ಸಂಪರ್ಕಿಸಿ ಹೆಸರು ನೋಂದಾಯಿಸುವಂತೆ ಅವರು ಮನವಿ ಮಾಡಿದರು.
ಈ ಸಭೆಯಲ್ಲಿ ಕುಂಚಿಟಿಗ ಕುಲಶಾಸ್ತç ಅಧ್ಯಯನಕಾರ ಎಸ್.ವಿ.ರಂಗನಾಥ್, ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಜೋಗೇಶ್, ದೇವರಕೊಟ್ಟ ರಂಗಸ್ವಾಮಿ, ಹುಚ್ಚವನಹಳ್ಳಿ ಅವಿನಾಶ್, ಪೆಪ್ಸಿಹನುಮಂತರಾಯ, ದಿಂಡಾವರ ಚಂದ್ರಗಿರಿ, ಹುಲುಗಲಕುಂಟೆ ಶಶಿಕಲಾ, ಕೆ.ಕೆ.ಹಟ್ಟಿ ಜಯಪ್ರಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours