ಮಾನವ ಜನ್ಮದಲ್ಲಿ ಧನಾತ್ಮಕ ಚಿಂತನೆ ಬೆಳೆಸಿಕೊಂಡು ಸಾಧನೆ ಮಾಡಿ:ಕೆ.ರವಿಶಂಕರ್ ರೆಡ್ಡಿ

 

ಚಿತ್ರದುರ್ಗ : ಅತ್ಯಂತ ಶ್ರೇಷ್ಟವಾದ ಮಾನವ ಜನ್ಮದಲ್ಲಿ ಧನಾತ್ಮಕ ಚಿಂತನೆ ಬೆಳೆಸಿಕೊಂಡು ಏನಾದರೂ ಸಾಧನೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್  ರೆಡ್ಡಿ  (DDPI) ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೆಳಗಟ್ಟ ಗ್ರಾಮದಲ್ಲಿ ಮಾರುತಿ ಗ್ರಾಮಾಂತರ ಪ್ರೌಢಶಾಲೆಯ 1991-92 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಮೂರು ಋಣಗಳಿರುತ್ತವೆ. ತಂದೆ-ತಾಯಿ ಋಣ, ಗುರುಗಳ ಋಣ, ಸಮಾಜದ ಋಣ. ಎಂದು ಹೇಳಿದ ಕೆ.ರವಿಶಂಕರ್‍ರೆಡ್ಡಿ ಗುರುನಮನ ಸಲ್ಲಿಸುವುದು ಸಮಾಜದ ಜವಾಬ್ದಾರಿ ಎಂದು ತಿಳಿಸಿದರು.
ಇಂದು ಮೌಲ್ಯಗಳು ಮರೆಯಾಗುತ್ತಿರುವುದು ಸರಿಯಲ್ಲ. ಭಾವನೆಗಳು ಬದಲಾವಣೆಯಾಗಬೇಕು. ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ತಂದೆ-ತಾಯಂದಿರು ಮನೆಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಮಂಜುನಾಥ್ ಇವರುಗಳು ಮಾತನಾಡಿದರು.
ನಿವೃತ್ತ ಶಿಕ್ಷಕರಾದ ಎ.ಎನ್.ರಾಜಗೋಪಾಲರೆಡ್ಡಿ, ಡಿ.ಎಲ್.ತಿಮ್ಮಾರೆಡ್ಡಿ, ಜಿ.ರಾಮರೆಡ್ಡಿ, ಜಿ.ತಿಪ್ಪೇಸ್ವಾಮಿ, ಬಿ.ಜಿ.ಯಂಗಮ್ಮ, ಉಮಾದೇವಿ, ಅನುಸೂಯಮ್ಮ, ಹೆಚ್.ಖಾಸಿಂಸಾಬ್, ಎಂ.ಆರ್.ತಿಮ್ಮಾರಡ್ಡಿ, ಟಿ.ಕೆ.ಕಾಟಮಲಿಂಗಯ್ಯ, ಎನ್.ತಿಪ್ಪೇಸ್ವಾಮಿ ಇವರುಗಳಿಗೆ ಗುರುನಮನ ಸಲ್ಲಿಸಲಾಯಿತು.
ದಿವಂಗತ ಶಿಕ್ಷಕರ ಪರವಾಗಿ ಕೆ.ಟಿ.ಪೋಲಣ್ಣರೆಡ್ಡಿ, ಪಿ.ಭೀಮಾರೆಡ್ಡಿ, ಎನ್.ಚನ್ನಕೇಶವರೆಡ್ಡಿ, ಎಲ್.ಉಗ್ರಪ್ಪ, ಎಂ.ಪದ್ಮನಾಭರೆಡ್ಡಿ, ಕೆ.ಟಿ.ಜಗನ್ನಾಥರೆಡ್ಡಿ ಅವರುಗಳನ್ನು ಗೌರವಿಸಲಾಯಿತು.
ಬೆಳಗಟ್ಟ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಮಾರುತಿ ಗ್ರಾಮಾಂತರ ಪ್ರೌಢಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ವಿ.ಎಂ.ನಿರಂಜನಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ನೇಹಿತರ ಬಳಗದ ಕೆ.ಎಸ್.ಗಿರೀಶ್‍ರೆಡ್ಡಿ, ಕೆ.ಎಲ್.ಕೇಶವರೆಡ್ಡಿ, ಲೋಕೇಶ್‍ರೆಡ್ಡಿ, ಮಾಂತೇಶ್, ಕುಬೇಂದ್ರ, ಸಣ್ಣಪ್ಪ, ಜಿ.ಆರ್.ಗೋವಿಂದರೆಡ್ಡಿ, ಕೆ.ಶ್ರೀನಿವಾಸ್‍ರೆಡ್ಡಿ, ಬಟಪಟಿ ಶ್ರೀನಿವಾಸ್‍ರೆಡ್ಡಿ, ಕೆ.ಸಿ.ತಿಪ್ಪಮ್ಮ, ಕೆ.ಮಂಜುಳ, ಪಿ.ಎಸ್.ಸುನೀತ, ಬಿ.ಎ.ರಾಜಲಕ್ಷ್ಮಿ, ಬಿ.ಐ.ರಾಜಲಕ್ಷ್ಮಿ, ರೇಣುಕಮ್ಮ ಇನ್ನು ಮುಂತಾದವರು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಎಂ.ಪಿ.ನಾಗೇಶ್ ಸ್ವಾಗತಿಸಿದರು. ಎಂ.ಪಿ.ಶ್ರೀನಿವಾಸ್‍ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.
[t4b-ticker]

You May Also Like

More From Author

+ There are no comments

Add yours