DMF ಹಣ ಗಣಿಭಾದಿತ ಪ್ರದೇಶಗಳಿಗೆ ಉಪಯೋಗವಿಲ್ಲದೇ ದುರ್ಬಳಕೆ: ಬಿ.ಇ. ಜಗದೀಶ್ ಆರೋಪ

 

ಚಿತ್ರದುರ್ಗ:30-40 ವರ್ಷದಲ್ಲಿ ಡಿಎಂಎಫ್ ಫಂಡ್ ನ್ನು ಸರಿಯಾಗಿ ವ್ಯಯ ಮಾಡುತ್ತಿಲ್ಲ ಮತ್ತು ಗಣಿ ಬಾಧಿತ ( DMF) ಪ್ರದೇಶಗಳಲ್ಲಿ ಸರಿಯಾಗಿ ಬಳಕೆ ಮಾಡುತ್ತಿಲ್ಲ ಎಂದು  ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್ ಆರೋಪಿಸಿರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಡಿ.ಎಂ.ಎಫ್ ಅನುದಾನದಲ್ಲಿ ಉತ್ತಮ ಆಸ್ಪತ್ರೆ ಮತ್ತು ಶಾಲೆಗಳು ನಿರ್ಮಾಣ ಮಾಡುವ ಕೆಲಸ ಮಾಡುತ್ತಿಲ್ಲ. ಜೊತೆಗೆ ನೀರಿನ ಮಟ್ಟ ಸಹ ಕುಸಿದಿದೆ ಎಂದರು.
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಸುತ್ತ-ಮುತ್ತಲ ಗ್ರಾಮಗಳಾದ ಭೀಮಸಮುದ್ರ, ಹಿರೇಗುಂಟನೂರು, ಬೊಮ್ಮೇನಹಳ್ಳಿ, ವಿ.ಪಾಳ್ಯ, ಮೇಗಳಹಳ್ಳಿ, ಕಡ್ಲೆಗುದ್ದು ಈ ಗ್ರಾಮಗಳು ಗಣಿ ಬಾಧಿತ ಪ್ರದೇಶಗಳಾಗಿದ್ದು, ಈ ಗ್ರಾಮಗಳು ಸುಮಾರು 35-40 ವರ್ಷಗಳಿಂದ ಹಿಂದುಳಿದ ಗ್ರಾಮಗಳಾಗಿದ್ದು, ಇಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು, ಬಡವರು ಹೆಚ್ಚಾಗಿ ವಾಸವಾಗಿದ್ದು, ಹಲವಾರು ರೋಗಗಳಿಗೆ ತುತ್ತಾಗಿರುತ್ತಾರೆ. ಹಾಗೂ ಈ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಈ ಗ್ರಾಮಗಳಿಗೆ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ, ಹೈಟೆಕ್ ಆಸ್ಪತ್ರೆ, ಹೈಟೆಕ್ ಶಾಲಾ ಕಟ್ಟಡ, ಶಾಲಾ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಡಿ.ಎಂ.ಎಫ್. ಫಂಡ್‌ನ ಹಣವನ್ನು ಈ ಗ್ರಾಮಗಳಿಗೆ ಉಪಯೋಗಿಸಬೇಕು ಎಂದು ಆಗ್ರಹಿಸಿದರು.
ಗಣಿ ಭಾಧಿತ ಪ್ರದೇಶಗಳ ಹಣವನ್ನಯ ಬೇರೆಡೆಗೆ ಉಪಯೋಗ ಮಾಡುತ್ತಿದ್ದಾರೆ. ಬಡ ರೈತರಿಗೆ ಬೊರವೆಲ್ ಕೊರೆಸಿಕೊಡಬಹುದು. ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ತರಬೇತಿ ಮತ್ತು ಶಾಶ್ವತ ಕೆಲಸಗಳಿಗೆ ಒತ್ತು ನೀಡಬೇಕು. ರಾಜಕೀಯ ವ್ಯಕ್ತಿಗಳು ಯಾರು ಇದರ ಬಗ್ಗೆ ಏಕೆ  ಚಕಾರ ಎತ್ತುತ್ತಿಲ್ಲ ಎಂಬುದು ನನಗೆ ತಿಳಿದಿಲ್ಲ. ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದ್ದು ಈ ಎಲ್ಲಾ ಮಾಹಿತಿಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಸಿಇಓ ಅವರಿಗೆ ಮನವಿ ಸಲ್ಲಿಸಲಾಗುತ್ತದೆ. ಡಿಎಂಎಫ್ ಅನುದಾನ ಬಳಸಿಕೊಂಡು ಹಿರೇಗುಂಟನೂರು ಗ್ರಾಮದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮಾಡಿದರೆ ರೈತರ ಮಕ್ಕಳಿಗೆ ಅನುಕೂಲವಾಗುತ್ತದೆ.
ಮಾಜಿ ಸಚಿವ  ಆಂಜನೇಯ ಅವರ ಕಾಲದಲ್ಲಿ ರೈಲ್ವೆ ಸ್ಟೇಷನ್ ಬಳಿ ಸಿ.ಸಿ.ರಸ್ತೆ ಮತ್ತು ಮನೆಗಳ ನಿರ್ಮಾಣ, ವಾಹನ ಸೌಲಭ್ಯಕ್ಕೆ ಬಳಸಲಾಗಿದೆ ಎಂದು ಆರೋಪಿಸಿದರು. ಒಟ್ಟಿನಲ್ಲಿ  ಗಣಿಬಾದಿತ ಪ್ರದೇಶಗಳಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ  ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ  ನಿಸಾರ್ ಅಹಮ್ಮದ್, ಮಹಿಳಾ‌ ಘಟಕದ ಅಧ್ಯಕ್ಷ ಜ್ಯೋತಿ,
ಮತ್ತು ಮುಖಂಡರಾದ  ಸೈಯದ್ ಷಾ ತನ್ವಿರ್ ಇದ್ದರು.
[t4b-ticker]

You May Also Like

More From Author

+ There are no comments

Add yours