10 ಅಡಿ ಕಾಳಿಂಗ ಸರ್ಪದ ಜೊತೆ ಕಾರಿನಲ್ಲಿ ಪ್ರಯಾಣಿಸಿ ನಾಲ್ವರು

 

Karavara: ಒಂದಲ್ಲ  ಎರಡಲ್ಲ  ಹತ್ತು  ಅಡಿ ಉದ್ದದ ಕಾಳಿಂಗ ಸರ್ಪ (Rattlesnake)ದೊಂದಿಗೆ ಕಾರಿನಲ್ಲಿ  ಜರ್ನಿ ಮಾಡಿದ  ನಾಲ್ವರಿದ್ದ ಕುಟುಂಬವೊಂದು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ಕಾರವಾರವಾದಲ್ಲಿ  ಇಂದು  ನಡೆದಿದೆ. ಸಂಬಂಧಿಕರ ಮನೆಯಲ್ಲಿ ವಾಹನ ನಿಲ್ಲಿಸಿದ ನಂತರವಷ್ಟೆ  ಕಾರಿನಲ್ಲಿ  ಹಾವಿರುವುದು ಸತ್ಯ ತಿಳಿದು ಬಂದಿದೆ. ಕಾರವಾರ: 10 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ನಾಲ್ವರಿದ್ದ ಕುಟುಂಬವೊಂದು ದೇವರ ಮರು ಜನ್ಮ ನೀಡಿದ  ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ಕಾರವಾರವಾದಲ್ಲಿ ನಡೆದಿದೆ. ಸಂಬಂಧಿಕರ ಮನೆಯಲ್ಲಿ ವಾಹನ ನಿಲ್ಲಿಸಿದ ಬಳಿಕವಷ್ಟೇ ಕಾರಿನಲ್ಲಿ ಹಾವಿರುವುದು ಗೊತ್ತಾಗಿದೆ.

ರಾಮನಗರದಿಂದ ಕಾರಿನಲ್ಲಿ ಬಂದ ಕುಟುಂಬಸ್ಥರು ಕುಂಬಾರವಾಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದಾರೆ. ಆಗ ಮನೆಯಲ್ಲಿದ್ದ ಬೆಕ್ಕು ವಿಚಿತ್ರವಾಗಿ ಆಡುತ್ತಾ, ಕಾರನ್ನು ಪರಿಶೀಲಿಸಲಾರಂಭಿಸಿದೆ. ಆಗ ಕುಟುಂಬ ಏಕೆ ಬೆಕ್ಕು ವಿಚಿತ್ರವಾಗಿ ಹಾಡುತ್ತಿದೆ ಎಂಬ ಪ್ರಶ್ನೆಯ ಜೊತೆ  ಕಾರನ್ನು ಪರಿಶೀಲಿಸಲು ಮುಂದಾಗಿದೆ. ಈ ವೇಳೆ ಕಾರಿನಿಂದ ದೊಡ್ಡ ಶಬ್ದವೊಂದು ಕೇಳಿಸಿದೆ.

ಆಗ ಕಾರಿನೊಳಗೆ ದೊಡ್ಡ ಕಾಳಿಂಗ ಸರ್ಪವೊಂದು ಇರುವುದು ಕಂಡುಬಂದಿದೆ. ಇದನ್ನು ಕಂಡು ಆಘಾತಕ್ಕೊಳಗಾದ ಕುಟುಂಬದವರು ತಕ್ಷಣವೇ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಹಾವು ರಕ್ಷಕರನ್ನು ಕರೆಸಿದ್ದು, ಸುದೀರ್ಘ ಹೋರಾಟದ ನಂತರ ಹಾವನ್ನು ರಕ್ಷಿಸಿ, ಕಾಡಿಗೆ ಬಿಡಲಾಗಿದೆ. ಕಾಳಿಂಗ ಸರ್ಪವು ವಿಶ್ವದ ಅತಿ ದೊಡ್ಡ ವಿಷಕಾರಿ ಹಾವಾಗಿದೆ.

[t4b-ticker]

You May Also Like

More From Author

+ There are no comments

Add yours