challakere: ಚಳ್ಳಕೆರೆ (challakere) ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆತ್ತಮ್ಮರಹಟ್ಟಿಯಲ್ಲಿ ಚಿನ್ನಮ್ಮ ಕೋ ದುರ್ಗದಪಾಪಯ್ಯ ಎಂಬುವವರಿಗೆ ಸೇರಿದ ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮವಾಗಿ ಗುಡಿಸಲು ಪೂರ್ಣಪ್ರಮಾಣದಲ್ಲಿ ಸುಟ್ಟುಹೋಗಿದೆ.
ಇದನ್ನೂ ಓದಿ: ಟಿವಿ ರಿಮೋಟ್ ವಿಚಾರಕ್ಕೆ ಕಿತ್ತಾಟ ಸ್ವಂತ ಮಗನನ್ನೇ ಕೊಂದ ತಂದೆ
ಎಂದಿನಂತೆ ಮನೆಯಲ್ಲಿ ಮಧ್ಯಾಹ್ನ ವೇಳೆಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ದಿಢೀರ್ ಕಾಣಿಸಿಕೊಂಡ ಬೆಂಕಿ ಕೆಲವೇ ನಿಮಿಷಗಳಲ್ಲಿ ಇಡೀ ಮನೆಯಲ್ಲಿ ವ್ಯಾಪಿಸಿದೆ. ಕೂಡಲೇ ನೆರೆಹೊರೆಯವರು ದಾವಿಸಿ ಬಂದು ಮನೆಯಲ್ಲಿದ್ದ ವಸ್ತುಗಳನ್ನು ಹೊರಹಾಕುವ ಮುನ್ನವೆ ಬೆಂಕಿ ಇಡೀ ಗುಡಿಸಲನ್ನು ವ್ಯಾಪಿಸಿದ್ದು, ಗುಡಿಸಿನಲ್ಲಿದ್ದ ಆಹಾರ ಪದಾರ್ಥ, ಬಟ್ಟೆ, ದಾಖಲೆ ಹಾಗೂ ಇನ್ನಿತರ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಮನೆ ಕಳೆದುಕೊಂಡ ಕುಟುಂಬ ಅಸಹಾಯಕರಾಗಿ ಮನೆಯ ಮುಂದಿನ ಬೀದಿಯಲ್ಲಿ ನಿಂತ ದೃಶ್ಯ ಸಾರ್ವಜನಿಕರ ಮನಕಲಕುವಂತಿತ್ತು. ಚಳ್ಳಕೆರೆ ಪೊಲೀಸರು ಅಗ್ನಿ ಆಕಸ್ಮಿಕ ಪ್ರಕರಣದ ವಿಚಾರಣೆ ನಡೆಸಿದ್ದಾರೆ.
[t4b-ticker]
+ There are no comments
Add yours