ಕಾಂತಾರ ಸಿನಿಮಾ ವೇಷ ಹಾಕಿದ ತಾನ್ವಿಗೆ ಪ್ರಥಮ ಸ್ಥಾನ

 

ಹೊಸದುರ್ಗ: ತಾಲೂಕಿನ ಕೆಲ್ಲೋಡು ಕ್ಲಸ್ಟರ್ ಮಟ್ಟದ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಏರ್ಪಡಿಸಿದ್ದ ವೇಷ ಭೂಷಣ ಸ್ಪರ್ಧೆಯಲ್ಲಿ ಎ ವಿ ಎಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಏಸ್.ತಾನ್ವಿ( Kantara movie)
ಕಾಂತರಾ ಸಿನಿಮಾ ದಲ್ಲಿ ಬರುವ ದೈವದ ವೇಷವನ್ನು ಹಾಕುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಿದ್ಯಾರ್ಥಿನಿ ಗುರು ಮ್ಯೂಸಿಕ್ ಸಂಗೀತ ಮತ್ತು ನೃತ್ಯ ಶಾಲೆಗೆ ತೆರುಳುತ್ತಿರುವ ಸಂದರ್ಭದಲ್ಲಿ  ಬಹುದಿನಗಳಿಂದ ಕಾಂತಾರ ಸಿನಿಮಾದಲ್ಲಿ ಬರುವ ದೈವದ ವೇಷವನ್ನು ಹಾಕಬೇಕೆಂಬ ಬಯಕೆ ಇದ್ದುದ್ದರಿಂದ ಪೋಷಕರು ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿನಿ ತಾನ್ವಿ ದೈವದ ವೇಷ ಹಾಕಿ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆಗೆ ವಸ್ತ್ರ ಅಲಂಕಾರವನ್ನು ಪದ್ಮ ಮಾಡಿದ್ದಾರೆ.
[t4b-ticker]

You May Also Like

More From Author

+ There are no comments

Add yours