ಕೈ ಕೊಟ್ಟ ಮಳೆ 6 ಎಕರೆ ತೊಗರಿ ಬೆಳೆ ಟ್ರಾಕ್ಟರ್ ಹೊಡೆಸಿದ ರೈತ

 

ನಾಯಕನಹಟ್ಟಿ: ತುರುವನೂರು (Turuvanur)ಹೋಬಳಿಯ ಬೆಳಗಟ್ಟ ಗ್ರಾಮ ಪಂಚಾಯಿತಿಯ ಹಾಯ್ಕಲ್ ಗ್ರಾಮದ ಸುಬಾಷ್‌ರೆಡ್ಡಿ ಎಂಬುವರು ೬ ಎಕರೆ ತೊಗರಿ ಬಿತ್ತನೆ ಮಾಡಿದ್ದರು.

ಇದನ್ನೂ ಓದಿ: ಎಂಪಿ ಚುನಾವಣೆಗೆ ನಾನು ಆಕಾಂಕ್ಷಿ:ಬಿ.ಎನ್.ಚಂದ್ರಪ್ಪ

ಮಳೆ ಬಾರದ ಕಾರಣ ಹೊಲದಲ್ಲಿ ಟ್ರಿಲ್ಲರ್ ಹೊಡಿಸಿದ್ದಾರೆ ಈ ಬಾರಿ ಮಳೆ ಬರುತ್ತೆ ಎಂಬ ನಂಬಿಕೆಯಿAದ ತೊಗರಿ ಬಿತ್ತನೆ ಮಾಡಿದ್ದೆ. ಆದರು ಮತ್ತೆ ಮಳೆ ಮುನಿಸಿಕೊಂಡಿದೆ ಸಾಲ-ಸೂಲ ಮಾಡಿ ಬಿತ್ತನೆ ಮಾಡಿದ್ದರು ಸ್ನಹಿತರಲ್ಲಿ ಫೈನಾನ್ಸ್ನಲ್ಲಿ ೫೦ ಸಾವಿರ ಹಣವನ್ನು ತಂದು ಹಾಕಿದ್ದೆ ಹೇಗೆ ಸಾಲ ತಿರಿಸುವುದು ಎನ್ನುವ ಆತಂಕದಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಆಕಾಶದ ಕಡೆ ಮುಖಮಾಡಿದ್ದಾರೆ ಮಳೆ ಬಂದರೆ ಉತ್ತಮ ಫಸಲು ಸಿಗುತ್ತೆ ಎಂಬ ನಂಬಿಕೆ ಇಟ್ಟಿದ್ದರು. ಮಳೆರಾಯ ಕೈಕೊಟ್ಟಿದ್ದರಿಂದ ನಮಗೆ ಎಲ್ಲಾ ಭಯ ಮೂಡಿಸಿದೆ. ಚಿತ್ರದುರ್ಗ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹ ಹರಿಸಿ ಮತ್ತು ನಮಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಎಂದು ಆಗ್ರಹಿಸಿದರು. ಮಳೆಯ ಕೊರತೆ ಹೀಗೆ ಮುಂದುವರೆದರೆ ಎಲ್ಲಾ ಬೆಳೆಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ರೈತರು ತೊಗರಿ ಬಿತ್ತನೆ ಮಾಡಿದ್ದು ತೊಗರಿ ಗಿಡಗಳನ್ನೆಲ್ಲಾ ಕೆಡಿಸುವ ಮೂಲಕ ಮುಂದಾಗುವ ನಷ್ಟವನ್ನು ತಪ್ಪಿಸಿಕೊಂಡರು ಆದರು ಈಗಾಗಲೇ ೬ ಎಕರೆಯಲ್ಲಿ ೧ ಎಕರೆಗೆ ಸಾವಿರಾರು ರೂಪಾಯಿಗಳು ಖರ್ಚು ಆಗಿದೆ ಎನ್ನುತ್ತಾರೆ ರೈತರು. ಬಿತ್ತನೆ ಮಾಡಿದ ಇತ್ತ ಕಡೆ ಬೆಳೆಯು ಇಲ್ಲ ಮಳೆ ಬಾರದ ಕಾರಣ ಒಣಗಿ ಹೊಯಿತು ಹಾಗೇ ಬಿಟ್ಟರೆ ನಮಗೆ ಏನು ಸಿಗುವುದಿಲ್ಲ ಖರ್ಚು ಬಹಳ ಹೆಚ್ಚಾಗಿದೆ ರೈತರೇ ಬೆಳೆಗಳನ್ನು ಕೆಡಿಸಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬಿತ್ತಿದ ಬೆಳೆಗಳು ಒಣಗಿ ಹೋಗಿತ್ತಿದ್ದು, ಇದನ್ನು ನೋಡಲಾಗದೆ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಬಹಳ ಕಷ್ಟ ಪಡುತ್ತಿದ್ದಾರೆ. ಮತ್ತೊಂದು ಕಡೆ ರೈತರೇ ಕೈಯಾರೆ ಬೆಳೆಗಳನ್ನು ನಾಶಪಡಿಸಿದರು. ಉತ್ತಮ ಮಳೆ ಬಂದರೆ ಸಾಕು ಬೆಳೆ ಬರುತ್ತದೆ ಎಂಬ ಆಷಾಭಾವ ರೈತರಲ್ಲಿ ಇದೆ ಮುಂಗಾರು ಮಳೆ ಸಮಯದಲ್ಲಿ ಅಲ್ಪ-ಸ್ವಲ್ಪ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ ಮಳೆ ಬಾರದ ಕಾರಣ ಗಿಡಗಳು ಒಣಗಿ ಹೋಯಿತು. ಈ ಬಾರಿ ರೈತರಿಗೆ ಆರಂಭದಲ್ಲಿಯೇ ನಷ್ಟವಾಗಿದೆ ದೊಡ್ಡ ಮಳೆ ಬಾರದ ಕಾರಣ ಪುನಃ ರೈತರು ಹಣವನ್ನು ಖರ್ಚು ಮಾಡಿ ಬೆಳೆಗಳನ್ನು ಎಲ್ಲಾ ನಾಶ ಮಾಡುತ್ತಿದ್ದಾರೆ.

[t4b-ticker]

You May Also Like

More From Author

+ There are no comments

Add yours