ಎಂಪಿ ಚುನಾವಣೆಗೆ ನಾನು ಆಕಾಂಕ್ಷಿ:ಬಿ.ಎನ್.ಚಂದ್ರಪ್ಪ

 

ಚಿತ್ರದುರ್ಗ, ಅ.05: ಶಿವಮೊಗ್ಗ ಗಲಭೆ ಪ್ರಕರಣ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ನಳೀನ್ ಕುಮಾರ್ ಕಟೀಲ್ ಅವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ನೀಡಿರುವ ಹೇಳಿಕೆ ಬೇಜವಬ್ದಾರಿ ಹಾಗೂ ಭಾಲಿಶಃ ವಾದದ್ದು ಎಂದು(former MP) ಮಾಜಿ ಸಂಸದ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷ ಬಿ.ಎನ್.ಚಂದ್ರಪ್ಪ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಗ್ರಾಮೀಣ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ: ಟಿ.ರಘುಮೂರ್ತಿ

ನಗರದ ಹೋಟೆಲ್ ಐಶ್ವರ್ಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷ ‌ಮೊದಲಿನಿಂದಲೂ ಸರ್ವ ಜನಾಂಗದ ಹಿತ ಕಾಪಾಡಿಕೊಂಡು ಬಂದಿರುವಂತಹದ್ದು, ಯಾವುದೇ ಧರ್ಮ, ಜಾತಿ ವಿಷ ಬೀಜ ಬಿತ್ತುವಂತಹ ಪಕ್ಷವಲ್ಲ. ಈಗಿರುವಾಗ ಶಿವಮೊಗ್ಗದಲ್ಲಿ ನಡೆದಿರುವ ಗಲಭೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೊಮ್ಮಕ್ಕು ಇದೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾದದ್ದು, ರಾಜ್ಯದ ಆಡಳಿತ ಸುಧಾಣೆ ಮಾಡುತ್ತಿರುವ, ಸರ್ವ ಜನಾಂಗದ ಅಭಿವೃದ್ದಿಯ ನೇತಾರ ಎಂದೇ ಖ್ಯಾತಿ ಸಿದ್ದರಾಮಯ್ಯ ಅವರ ಮೇಲೆ ಕೇಂದ್ರದ ಮಂತ್ರಿಯಾಗಿ ಜವಬ್ದಾರಿಯುತ ಸ್ಥಾನದಲ್ಲಿರುವ ಶೋಭಾಕರಂದ್ಲಾಜೆ ಹಾಗೂ ನಳೀನ್ ಕುಮಾರ್ ಕಟೀಲ್ ಅವರು ಶಿವಮೊಗ್ಗ ಗಲಭೆಗೆ ಕೊಮ್ಮಕು ನೀಡಿದ್ದಾರೆ ಎಂದಿರುವುದು ಬೇಜವಬ್ದಾರಿಯುತ ಹೇಳಿಕೆ. ಅಲ್ಲದೆ ಇದು ಜನರಲ್ಲಿ ತಪ್ಪು ಸಂದೇಶ ತಿಳಿಸುವಂತಹದ್ದಾಗಿದೆ. ತಮ್ಮ ಸರ್ಕಾರ ಅಧಿಕಾರಿದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹ ಕೆಲಸ ಮಾಡಲು ಸಾಧ್ಯವೇ ಎಂಬುದನ್ನು ಶೋಭಾ ಹಾಗೂ ಕಟೀಲ್ ಅರಿತುಕೊಂಡು ಹೇಳಿಕೆ ನೀಡಬೇಕು ಎಂದರು.

ಇದನ್ನೂ ಓದಿ: ಶ್ರೀ ಅಹೋಬಲ ಟಿವಿಎಸ್ ನಲ್ಲಿ ಭರ್ಜರಿ ಉದ್ಯೋಗ
ಸಿದ್ದರಾಮಯ್ಯ ಶಿವಮೊಗ್ಗ ಗಲಭೆಗೆ ಯಾವುದೇ ಜಾತಿಯ ವ್ಯಕ್ತಿ ಕಾರಣನಾದರೂ ಅವರ ಮೇಲೆ ನಿರ್ದಕ್ಷಣ್ಯ ಕ್ರಮ ಕೈಗೊಳ್ಳುವಂತೆ ಸೂಚನರ ನೀಡಿದ್ದು, ಯಾವುದೇ ರಾಜಕೀಯ ಮುಖಂಡರು ಧರ್ಮಗಳನ್ನು ಹೊಡೆಯುವ ಕೆಲಸ ಹಾಗೂ ಜಾತಿ ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದರು.
ಜಿಲ್ಲೆಯ ಜನರ ಬಹುದಿನಗಳ ಕನಸ್ಸಾಗಿರುವ ಅಪ್ಪರ್ ಭದ್ರ ಯೋಜನೆಗೆ ಕೇಂದ್ರ ಸರ್ಕಾರ 5 ಸಾವಿರ ಕೋಟಿ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿರವಂತೆ ನೀಡಬೇಕು.

ಪ್ರಧಾನಿ ಮೋದಿ ಅವರು ಈ ಕೂಡಲೇ ಈ ಬಗ್ಗೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವರಾಗಿರುವ ಎ.ನಾರಾಯಾಣಸ್ವಾಮಿ ಅವರು ಅಪ್ಪರ್ ಭದ್ರ ಯೋಜನೆಗೆ ಒತ್ತು ಕೊಟ್ಟು ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮರ್ ಹಾಗೂ ನೀರಾವರಿ ಸಚಿವರು ಕಾವೇರಿ ಸೇರಿದಂತೆ ಇತರೆ ನೀರಾವರಿ ಯೋಜನೆಗಳಿಗೆ ಒತ್ತುಕೊಟ್ಟಂತೆ ಅಪ್ಪರ್ ಭದ್ರ ಯೋಜನೆಗೂ ಕೂಡ ಒತ್ತುಕೊಟ್ಟು, ಯೋಜನೆಗೆ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮನವಿ ಮಾಡುವುದಾಗಿ ತಿಳಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ‌ ನಾನೂ ಕೂಡ ಒಬ್ಬ ಆಕಾಂಕ್ಷಿಯಾಗಿದ್ದೆನೆ ಎಂದು ಹೇಳಿರುವ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮೊದಲಿನಿಂದಲೂ ನಾನು ಕಾಂಗ್ರೇಸ್ ಪಕ್ಷದ ತಳ ಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆನೆ. ಇದೀಗ ಪಕ್ಷ ನನಗೆ ಜವಬ್ದಾರಿಯನ್ನು ನೀಡಿದೆ. ಅದರಂತೆ ನಾನು ಕೆಲಸ ಮಾಡುತ್ತಿದ್ದು, ಪಕ್ಷದ ಹೈ ಕಮಾಂಡ್ ಯಾರು ಅಭ್ಯರ್ಥಿ ಆಗಬೇಕು ಎಂದು ಸೂಚನೆ ನೀಡುತ್ತದೆಯೋ ಅವರ ಗೆಲುವಿಗೆ ಶ್ರಮಿಸುತ್ತೇನೆ. ರಾಜ್ಯದ 28 ಸ್ಥಾನಗಳನ್ನು ಗೆಲ್ಲಲು ನಾವು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ಶೋ ಗೆ ಸಂಭಾವ್ಯ 10 ಜನರ ಪಟ್ಟಿ 
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಜಯ್ಯಮ್ಮ ಬಾಲರಾಜ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ತಾಜ್ ಪೀರ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾನಂದನಿಗೌಡ, ಬಿ.ಟಿ.ಜಗದೀಶ್, ಹಾಲಸ್ವಾಮಿ,
ಜಿ.ಎಸ್.ಮಂಜುನಾಥ್, ಬಾಲರಾಜ್, ಡಿ.ಎನ್.ಮೈಲಾರಪ್ಪ, ಜಯ್ಯಣ್ಣ, ಲಕ್ಷ್ಮೀಕಾಂತ್, ಪ್ರಕಾಶ್, , ಬಾಲಕೃಷ್ಣಸ್ವಾಮಿ, ಮಲ್ಲೇಶ್ ಸೇರಿದಂತೆ ಇತರರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours