ವೈದ್ಯರ ನಿರ್ಲಕ್ಷ್ಯಕ್ಕೆ ಬಾರದ ಲೋಕಕ್ಕೆ ಪಯಣಿಸಿದ ತಾಯಿ ಮಗು

 

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ವೈದ್ಯರ ವಿರುದ್ಧ ಆಕ್ರೋಶ

ಮೊಳಕಾಲ್ಮುರು: (Molakalmur) ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ಮಗು ಇಬ್ಬರೂ ಮೃತಪಟ್ಟಿರುವ ಘಟನೆಯು ರಾಂಪುರ ಗ್ರಾಮದ ಲೋಟಸ್ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿಯಂದು ನಡೆದಿದೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ 30 ವರ್ಷದ ಪವಿತ್ರ ವೈದ್ಯರ ನಿರ್ಲಕ್ಷದಿಂದ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಕ್ಷಣ ಸಚಿವ ಮಧುಬಂಗಾರಪ್ಪ ಕಾರಿಗೆ ಲಾರಿ ಡಿಕ್ಕಿ

ಮೃತ ತಾಯಿ ಆರು ತಿಂಗಳ ಗರ್ಭಿಣಿಯಾಗಿದ್ದು, ರಾಂಪುರ ಗ್ರಾಮದಲ್ಲಿರುವ ಲೋಟಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತಪಾಸಣೆಗೆಂದು ಕರೆದುಕೊಂಡು ಹೋದಾಗ ಲೋಟಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಲಾಗಿತ್ತು. ಸ್ಕ್ಯಾನಿಂಗ್ ವರದಿಯಲ್ಲಿ ಮಗುವಿನ ಹೃದಯ ಬಡಿತ ನಿಂತಿದೆ. ಈ ಬಗ್ಗೆ ಇನ್ನೂ ಹೆಚ್ಚು ಸ್ಪಷ್ಟಿಕರಣ ಪಡೆಯಲು ಬಳ್ಳಾರಿಯ ಕ್ಲಾರಿಟಿ ಡಯಾಗೋಸ್ಟಿಕ್ ಮಾಡಿಸಿಕೊಂಡು ಬರಲು ವೈದ್ಯರು ತಿಳಿಸಿದ್ದರು.

 

ಸ್ಕ್ಯಾನಿಂಗ್ ಮಾಡಿಸಿಕೊಂಡು ಪುನಃ ರಾಂಪುರ ಲೋಟಸ್ ಆಸ್ಪತ್ರೆಗೆ ಮಂಗಳವಾರ ರಾತ್ರಿ 7ಗಂಟೆಗೆ ಕರೆದುಕೊಂಡು ಬಂದಾಗ ಮಗು ತಾಯಿ ಹೊಟ್ಟೆಯಲ್ಲಿ ಸಾವನ್ನಪ್ಪಿದೆ. ಹಾಗಾಗಿ ಶಸ್ತ್ರ ಚಿಕಿತ್ಸೆ ಮಾಡಿ ಮಗುವನ್ನು ಹೊರ ತೆಗೆಯುತ್ತೇವೆ. ಇದಕ್ಕೆ 28ಸಾವಿರ ರೂಪಾಯಿ ಭರಿಸಬೇಕಾಗುತ್ತದೆ ఎంದು ತಿಳಿಸಿದ್ದರು.

ಆಸ್ಪತ್ರೆಗೆ ದಾಖಲಿಸಿಕೊಂಡ 6 ಗಂಟೆಗಳ ನಂತರ 12:40ಕ್ಕೆ ಮಹಿಳೆಯನ್ನು ಶಸ್ತ್ರ ಚಿಕಿತ್ಸೆಗೆಂದು ಕರೆದುಕೊಂಡು ಹೋದಾಗ ಪವಿತ್ರಳಿಗೆ ಹೈಬಿಪಿ ಹಾಗೂ ಹೃದಯಘಾತ ಉಂಟಾಗಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:ಬಿಸಿಯೂಟ ಸೇವಸಿ 38 ಮಕ್ಕಳು ಅಸ್ವಸ್ಥ

ಶಸ್ತ್ರಚಿಕಿತ್ಸೆಯಿಂದ ಮಗುವನ್ನು ಹೊರ ತೆಗೆದಿದ್ದು ಮಗುವಿನ ಜೊತೆ ತಾಯಿ ಕೂಡ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸುತ್ತಿದ್ದಂತೆ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

ತುರ್ತು ಸಮಯದಲ್ಲಿ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಪವಿತ್ರಾಳ ಗಂಡ ಶಶಿಧ‌ರ್ ಆಸ್ಪತ್ರೆಯ ವೈದ್ಯರಾದ ಡಾ. ಶಬ್ಬರ್ ಮತ್ತು ಡಾ. ಶ್ರೀದೇವಿ ಸೇರಿದಂತೆ ಲೋಟಸ್ ಆಸ್ಪತ್ರೆಯ ಹಲವು ಸಿಬ್ಬಂದಿಗಳ ವಿರುದ್ಧ ರಾಂಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲು ಮಾಡಿದ್ದಾರೆ‌.

ಇತ್ತ ಇರುವ ಒಬ್ಬ ಮಗಳನ್ನು ಕಳೆದುಕೊಂಡ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೊಂದೆಡೆ ನಮಗೆ ನಮ್ಮ ಸ್ಕೂಲ್ ಟೀಚರ್ ನಮಗೆ ಬೇಕೇ ಬೇಕು ವಾಪಸ್ ಕೊಡಿ ಎಂದು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಕಂಡ ನೆರೆದಿದ್ದವರಲ್ಲಿ ಕಣ್ಣು ಒದ್ದೆಯಾದವು. ಏನೇ ಆಗಲಿ ಸಕಾಲಕ್ಕೆ ಚಿಕಿತ್ಸೆ ನೀಡದೆ ವಿಳಂಬ ಮಾಡಿ ತಾಯಿ ಮತ್ತು ಮಗುವಿನ ಸಾವಿಗೆ ಕಾರಣರಾದ ವೈದ್ಯರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ. ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಆಸ್ಪತ್ರೆ ಮುಚ್ಚುವಂತೆ ವಿವಿಧ ಸಂಘಟನೆಗಳ ಮುಖಂಡರು ಆಸ್ಪತ್ರೆಯ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗ ಪ್ರವೇಶಿಸಿದ ಮಿಂಚೇರಿ ಯಾತ್ರೆ

[t4b-ticker]

You May Also Like

More From Author

+ There are no comments

Add yours