ಫೆಬ್ರವರಿಯಲ್ಲಿ ಬಾಗಲಕೋಟೆಯಲ್ಲಿ ನೇಕಾರರ ಸಮಾವೇಶ

 

ಚಿತ್ರದುರ್ಗ 🙁chitradurga) ನೇಕಾರರ ಅಭಿವೃದ್ದಿ ನಿಗಮ ಕಾರ್ಯಾರಂಭಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಫೆಬ್ರವರಿಯಲ್ಲಿ ಬಾಗಲಕೋಟೆಯಲ್ಲಿ ನೇಕಾರರ ಸಮಾವೇಶ ನಡೆಸಲಾಗುವುದೆಂದು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಗೋವಿಂದಪ್ಪ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದಿನ ಬಿಜೆಪಿ.ಸರ್ಕಾರದ ಅವಧಿಯಲ್ಲಿ ನೇಕಾರರ ಅಭಿವೃದ್ದಿ ನಿಗಮ ಸ್ಥಾಪಿಸಲಾಗಿದ್ದರೂ ಇನ್ನು ಕಾರ್ಯಾರಂಭಗೊಂಡಿಲ್ಲ. ರಾಜ್ಯದಲ್ಲಿ 60 ಲಕ್ಷದಷ್ಟು ನೇಕಾರ ಜನಾಂಗದವರಿದ್ದು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರವೇ ನೇಕಾರರ ಅಭಿವೃದ್ದಿ ನಿಗಮವನ್ನು ಕಾರ್ಯರೂಪಕ್ಕೆ ತರಬೇಕೆಂದು ಎಂ.ಗೋವಿಂದಪ್ಪ ಒತ್ತಾಯಿಸಿದರು.

 

ಇದನ್ನೂ ಓದಿ :ವೈದ್ಯರ ನಿರ್ಲಕ್ಷ್ಯಕ್ಕೆ ಬಾರದ ಲೋಕಕ್ಕೆ ಪಯಣಿಸಿದ ತಾಯಿ ಮಗು

ಜಾತಿಗಣತಿ ಪೂರ್ಣಗೊಂಡಿದ್ದು, ಹಿಂದುಳಿದವರು, ಶೋಷಿತರಿಗೆ ನ್ಯಾಯ ಸಿಗಬೇಕಾದರೆ ವರದಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಬೇಕು. ನೇಕಾರರಲ್ಲಿ ದೇವಾಂಗ, ಕುರುಹಿನಶೆಟ್ಟಿ, ತೊಗಟವೀರ, ಪದ್ಮಸಾಲಿ, ಪಟ್ಟಸಾಲಿ ಹೀಗೆ ಏಳು ಪಂಗಡಗಳಿದ್ದು, ಬಾಗಲಕೋಟೆಯಲ್ಲಿ ನಡೆಸಲು ಉದ್ದೇಶಿಸಿರುವ ಸಮಾವೇಶಕ್ಕೆ ಮುಖ್ಯಮಂತ್ರಿಯನ್ನು ಆಹ್ವಾನಿಸಲಾಗುವುದು. ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸಬೇಕಿದೆ ಎಂದು ವಿನಂತಿಸಿದರು.

ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್, ಸದಸ್ಯರುಗಳಾದ ಹೆಚ್.ಮಮತ, ಹೊಂಬಕ್ಕ, ಎಸ್.ಟಿ.ರಘು, ರಾಘವೇಂದ್ರ, ಶಿವರುದ್ರಪ್ಪ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಇದನ್ನೂ ಓದಿ:ಶಿಕ್ಷಣ ಸಚಿವ ಮಧುಬಂಗಾರಪ್ಪ ಕಾರಿಗೆ ಲಾರಿ ಡಿಕ್ಕಿ

[t4b-ticker]

You May Also Like

More From Author

+ There are no comments

Add yours