ಬಿಸಿಯೂಟ ಸೇವಸಿ 38 ಮಕ್ಕಳು ಅಸ್ವಸ್ಥ

 

ಚಿತ್ರದುರ್ಗ:( chitradurga) ಬೀರಾವರ ಗ್ರಾಮದ ಸರ್ಕಾರಿ ಶಾಲೆಯ  ಮಕ್ಕಳು ಬಿಸಿಯೂಟ (heating)ಸೇವಿಸಿದ ಸ್ವಲ್ಪ ಸಮಯದ  ಬಳಿಕ ವಾಂತಿ ಭೇದಿ ಉಂಟಾಗಿ ಪರಿಣಾಮವಾಗಿ  38  ಮಕ್ಕಳು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿರುವ ಘಟನೆ ನಡೆದಿದೆ.

ಇದನ್ನೂ  ಓದಿ:ಚಿತ್ರದುರ್ಗ ಪ್ರವೇಶಿಸಿದ ಮಿಂಚೇರಿ ಯಾತ್ರೆ

ಬುಧವಾರ ಮದ್ಯಾಹ್ನ ಬಿಸಿಯೂಟ ಸೇವಿಸಿ ಮನೆಗೆ ತೆರಳಿದ ಮೂರ್ನಾಲ್ಕು   ಮಕ್ಕಳಿಗೆ ವಾಂತಿಭೇದಿ ಆದ ಪರಿಣಾಮವಾಗಿ  ಅಸ್ವಸ್ಥಗೊಂಡ ಘಟನೆ ನಡೆದಿದೆ. ಬಳಿಕ ಇನ್ನುಳಿದ  ಕೆಲ ಮಕ್ಕಳ ಆರೋಗ್ಯದಲ್ಲಿ ಏಳುಪೇರು ಕಂಡು ಬಂದ ಕಾರಣ ಮೂರು ಆಂಬ್ಯುಲೆನ್ಸ್ ನಲ್ಲಿ 38 ಮಕ್ಕಳನ್ನು  ಸಹ ತಪಾಸಣೆಗಾಗಿ  ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಯುವನಿಧಿ ಯೋಜನೆ : ಅರ್ಜಿ ಆಹ್ವಾನಕ್ಕೆ ಚಾಲನೆ

ಮಕ್ಕಳನ್ನು ಪರೀಕ್ಷಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಅವರು ನ್ಯೂಸ್ 19 ಕನ್ನಡ ಜೊತೆ ಮಾತನಾಡಿ  ‘ಆಸ್ಪತ್ರೆಗೆ ದಾಖಲಾಗಿರುವ  ಎಲ್ಲಾ 38  ಮಕ್ಕಳು ಚೇತರಿಸಿಕೊಂಡಿದ್ದು ಆರೋಗ್ಯ ಸ್ಥಿರವಾಗಿದೆ. ಆಹಾರ ಸೇವನೆಯಿಂದ ವ್ಯತ್ಯಾಸವಾದ ಕಾರಣದಿಂದ  ತೊಂದರೆ ಉಂಟಾಗಿರುವ ಸಾಧ್ಯತೆ ಇದೆ. ಪೋಷಕರು ಯಾರು ಸಹ ಆತಂಕಪಡುವ ಅಗತ್ಯವಿಲ್ಲ. ಪ್ರತ್ಯೇಕ ವಾರ್ಡ್‌ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದರು.

ಡಿಡಿಪಿಐ ಜಿಲ್ಲಾ ಆಸ್ಪತ್ರೆಗೆ ಭೇಟಿ

ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರವಿಶಂಕರ್ ರೆಡ್ಡಿ  ಭೇಟಿ ನೀಡಿ  ಮಕ್ಕಳ ಆರೋಗ್ಯ ವಿಚಾರಿಸಿ  ಪೋಷಕರಿಗೆ ಧೈರ್ಯ ತುಂಬಿದರು.  ಕೇಲವು ಮಕ್ಕಳಲ್ಲಿ ವ್ಯತ್ಯಾಸ ಕಂಡಿದ್ದರಿಂದ ತಪಾಸಣೆ ಮತ್ತು ಮಕ್ಕಳ ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾರನ್ನು ತಪಾಸಣೆ ಮಾಡಿಸಿದ್ದು   ಆರೋಗ್ಯವಾಗಿದ್ದು  ಅಗತ್ಯವಾದ ಎಲ್ಲಾ  ತಪಾಸಣೆ ಮಾಡಿಸಿಲಾಗಿದೆ. ಮತ್ತು  ಗ್ರಾಮಸ್ಥರ ಸಹಾಯದಿಂದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮಾಹಿತಿ‌ ನೀಡಿದ್ದಾರೆ. ,

ಸ್ಥಳಕ್ಕೆ ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ರಕ್ತದಾನ ಶ್ರೇಷ್ಠ: ಕೃತಕವಾಗಿ ರಕ್ತ ಸೃಷ್ಠಿ ಸಾಧ್ಯವಿಲ್ಲ :ಡಾ.ನಾಗರಾಜ್

 

[t4b-ticker]

You May Also Like

More From Author

+ There are no comments

Add yours