ಒಂದು ಕೋಟಿಗಿಂತ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು..

 

ನವದೆಹಲಿ, ಫೆಬ್ರವರಿ 1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದ ವೇಳೆ ಉದ್ಯೋಗ ಅವಕಾಶ ಸೃಷ್ಟಿ ಬಗ್ಗೆ ಭರ್ಜರಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಸರಿ ಸುಮಾರು 1 ಕೋಟಿ ಮಂದಿಗೆ ಶುಭ ಸುದ್ದಿ ನೀಡಿದ್ದಾರೆ. ಕೊರೊನಾವೈರಸ್ ಸೋಂಕು ಹರಡದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ವಿಧಿಸಿರುವ ಲಾಕ್ಡೌನ್ ನಿಂದಾಗಿ ಅಸಂಘಟಿತ ವಲಯದ ಕಾರ್ಮಿಕರು, ದಿನಗೂಲಿಗಳು ಅಲ್ಲದೆ ಹೆಚ್ಚು ನಷ್ಟ ಅನುಭವಿಸುತ್ತಿರುವುದು ಜವಳಿ ಉದ್ಯಮ. ಗಾರ್ಮೆಂಟ್ ಕೈಗಾರಿಕೆ ಬಂದ್ ಆಗಿದ್ದು, ಸರಿಯಾದ ಸಮಯಕ್ಕೆ ಕೇಂದ್ರ ಸರ್ಕಾರದಿಂದ ಸೂಕ್ತ ಆರ್ಥಿಕ ನೆರವು ಸಿಗದಿದ್ದರೆ, ಸರಿ ಸುಮಾರು 1 ಕೋಟಿ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಜವಳಿ ಸಚಿವಾಲಯದ ಭರವಸೆ: ವಿದೇಶಿ ಕಂಪನಿಗಳು ಈಗಾಗಲೇ ನೀಡಿರುವ ಆರ್ಡರ್ ಗಳನ್ನು ಕ್ಯಾನ್ಸಲ್ ಮಾಡದಿರುವಂತೆ ಜವಳಿ ಸಚಿವಾಲಯವು ಸೂಚಿಸಿದೆ. ಹೀಗಾಗಿ, ಸಣ್ಣ ಗಾರ್ಮೆಂಟ್ ನಿಂದ ಹಿಡಿದು ಬ್ರ್ಯಾಂಡೆಡ್ ಕಂಪನಿ ತನಕ ರಫ್ತು ಅಬಾಧಿತವಾಗಿರುವ ಭರವಸೆಯಲ್ಲಿವೆ. MSMEs ವಲಯದಲ್ಲಿ ದೇಶದಲ್ಲಿ 11 ಕೋಟಿ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಜಿಡಿಪಿಗೆ ಶೇ 30 ರಷ್ಟು ಕೊಡುಗೆ ನೀಡುತ್ತಿದೆ. ರೀಟೈಲ್ ಕ್ಷೇತ್ರದಲ್ಲಿ ಶೇ 50ರಷ್ಟು ಮಂದಿ ಮತ್ತೆ ಅಂಗಡಿ ಓಪನ್ ಮಾಡುವ ಭರವಸೆ ಇಟ್ಟುಕೊಂಡಿಲ್ಲ. ಕೆಲಸಗಾರರನ್ನು ಮತ್ತೆ ಹೊಂದಿಸುವುದು ಭಾರಿ ಕಷ್ಟವಾಗಲಿದೆ ಎಂದು ರೀಟೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ರಾಜಗೋಪಾಲನ್ ಹೇಳಿದ್ದರು.

[t4b-ticker]

You May Also Like

More From Author

+ There are no comments

Add yours