ಮಾರ್ಚ್ 9 ರ ನಂತರ ಲೋಕಸಭೆ ಚುನಾವಣೆ ಘೋಷಣೆ ಸಾಧ್ಯತೆ

 

ನವದೆಹಲಿ: ಲೋಕಸಭಾ ಚುನಾವಣೆಗೆ ದೇಶವೇ ಸಿದ್ಧವಾಗುತ್ತಿದ್ದು, ರಾಜಕೀಯ ಪಕ್ಷಗಳು ಈಗಾಗಲೇ ಸೋಲು- ಗೆಲುವಿನ ಲೇಕ್ಕಾಚಾರಸಲ್ಲಿ ತೊಡಗಿಕೊಂಡಿವೆ. ಬಹುತೇಕ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಈಗಾಗಲೇ ಫೈನಲ್ ಮಾಡಿಕೊಂಡಿದ್ದಾರೆ. ಆದರೆ, ಅಧಿಕೃತವಾಗಿ ಘೋಷಣೆ ಮಾಡುವುದು ಬಾಕಿಯಿದೆ.

ಇನ್ನು, ಮಾರ್ಚ್ ೯ ರ ನಂತರ ಲೋಕಸಭಾ ಚುನಾವಣೆಯ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನಮ್ಮ ಜನ ಪತ್ರಿಕೆ ವರದಿ ಮಾಡಿದೆ. ಚುನಾವಣಾ ಸಮಿತಿಯು ಅಂತಿಮ ಪರಿಶೀಲನೆಗಾಗಿ ರಾಜ್ಯಗಳಿಗೆ ತೆರಳುತ್ತಿದೆ ಎಂದು ವರದಿಯಾಗಿದೆ.

೨೦೨೪ ರ ಲೋಕಸಭಾ ಚುನಾವಣಾ ದಿನಾಂಕಗಳು ಕೂಡ ೨೦೧೯ರ ಚುನಾವಣೆಯಂತೇಯೇ ಇರಬಹುದು ಎಂದು ವರದಿಯು ಸೇರಿಸಿದೆ. ಹಿಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ, ದಿನಾಂಕಗಳನ್ನು ಮಾರ್ಚ್ ೧೦, ೨೦೧೯ ರಂದು ಘೋಷಿಸಲಾಗಿತ್ತು. ಏಪ್ರಿಲ್ ೧೧ ರಿಂದ ಮೇ ೧೯ರ ನಡುವೆ ಏಳು ಹಂತಗಳಲ್ಲಿ ಮತದಾನ ನಡೆಸಲಾಗಿತ್ತು.

ದೇಶವು ಲೋಕಸಭೆ ಚುನಾವಣೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವಾಗ, ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಈ ದಿನಗಳಲ್ಲಿ ರಾಜ್ಯಗಳಿಗೆ ಬ್ಯಾಕ್ ಟು ಬ್ಯಾಕ್ ಭೇಟಿ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರ ಭದ್ರತಾ ಪರಿಸ್ಥಿತಿ ಮತ್ತು ಪಡೆಗಳ ಲಭ್ಯತೆಯ ಬಗ್ಗೆ ಪರಿಶೀಲಿಸಲು ಆಯೋಗದ ಪ್ರತಿನಿಧಿಗಳು ಮಾರ್ಚ್ ೮ ಮತ್ತು ೯ ರಂದು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಮಾರ್ಚ್ ೧೨ ಮತ್ತು ೧೩ ರಂದು ಅವರು ಮತ್ತೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಲೋಕಸಭೆ ಚುನಾವಣೆಯೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯನ್ನು ನಡೆಸಬಹುದೇ ಎಂಬುದನ್ನು ಪರೀಕ್ಷಿಸಲಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ವಿಶ್ಲೇಷಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಯುಪಿಯಲ್ಲಿ ಬಿಜೆಪಿ ಚುನಾವಣಾ ತಂತ್ರ
ಇನ್ನು, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವ ಮೊದಲು ಉತ್ತರ ಪ್ರದೇಶದ ಬಿಜೆಪಿಯ ಚುನಾವಣಾ ತಂತ್ರ ರಚಿಸುತ್ತಿದೆ. ಫೆಬ್ರವರಿ ೨೦ ರಂದು ದೊಡ್ಡ ಸಭೆ ನಡೆದಿದ್ದು, ಮುಖ್ಯಮಂತ್ರಿ ಯೋಗಿ, ಬೈಜಯಂತ್ ಪಾಂಡಾ, ಭೂಪೇಂದ್ರ ಚೌಧರಿ, ಧರಂಪಾಲ್ ಸಿಂಗ್, ಎರಡೂ ಉಪ ಮುಖ್ಯಮಂತ್ರಿಗಳು, ಎಲ್ಲಾ ಮೋರ್ಚಾಗಳ ಅಧ್ಯಕ್ಷರು, ಪ್ರಾದೇಶಿಕ ಅಧ್ಯಕ್ಷರು ಮತ್ತು ರಾಜ್ಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.

ಲೋಕಸಭಾ ಚುನಾವಣೆಯ ರ್ಯಾಲಿಗಳ ಬಗ್ಗೆ ಕಾರ್ಯತಂತ್ರವನ್ನು ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಯುಪಿಯ ಪ್ರತಿ ಲೋಕಸಭೆಯನ್ನು ಕವರ್ ಮಾಡುವಂತೆ ಫ್ಲ್ಯಾನ್ ಮಾಡಲಾಗುತ್ತಿದೆ.

 

[t4b-ticker]

You May Also Like

More From Author

+ There are no comments

Add yours