ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬರೆದ “ಪತ್ರದಲ್ಲಿ” ಏನಿದೆ?

 

ಚಿತ್ರದುರ್ಗ: ಕಾಂಗ್ರೆಸ್ ಪಕ್ಷದ ನಿಷ್ಟವಂತರೇ, ಕ್ಷೇತ್ರದ ಪ್ರಬುದ್ಧ ಮತದಾರರೇ ಏಪ್ರಿಲ್‌ 4, ಗುರುವಾರ ಬೆಳಗ್ಗೆ ತಮ್ಮಗಳ ಸಮ್ಮುಖದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ  ಚಿತ್ರದುರ್ಗ ಡಿಸಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಬಿಎನ್.ಚಂದ್ರಪ್ಪ ತಿಳಿಸಿದ್ದಾರೆ.

ಈ ಸಂದರ್ಭ ತಮ್ಮಗಳ ಉಪಸ್ಥಿತಿ ನನಗೆ ಆನೆಬಲ ತಂದುಕೊಡಲಿದೆ ಎಂಬುದು ನನ್ನ ಅಚಲ ನಂಬಿಕೆ. ಆದ್ದರಿಂದ ತಾವುಗಳು ತಮ್ಮ ಸ್ನೇಹಿತರ ಜೊತೆ ಅಂದು ನಾಮಪತ್ರ ಸಲ್ಲಿಕೆ ಸಂದರ್ಭ ನನ್ನೊಂದಿಗೆ ಇರಬೇಕೆಂಬುದು ನನ್ನ ಮಹದಾಸೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪರ ಬಹುದೊಡ್ಡ ಅಲೆ ಬೀಸುತ್ತಿರುವ ಸಂದರ್ಭ ನಿಮ್ಮಗಳ ಪ್ರೀತಿ, ಅಭಿಮಾನದ ಫಲ ನನ್ನನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಣೆ ಮಾಡಿದೆ.‌ ಇದು  ನನ್ನ ಸೌಭಾಗ್ಯ ಎಂದಿದ್ದಾರೆ.

ದೇಶದಲ್ಲಿಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಾದರಿ ಆಗಿವೆ. ಟೀಕೆ ಮಾಡಿದವರೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಉತ್ಸಾಹ ತೋರುತ್ತಿದ್ದಾರೆ. ಅಷ್ಟರಮಟ್ಟಿಗೆ ಬಡವರ ಪರ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ದೇಶದ ಜನರ ಮೆಚ್ಚುಗೆ ಗಳಿಸಿವೆ. ಪ್ರತಿಪಕ್ಷಗಳ ನಿದ್ದೆಗೆಡಿಸಿವೆ ಎಂದು ತಿಳಿಸಿದ್ದಾರೆ

ಗೃಹಲಕ್ಷ್ಮೀ, ಗೃಹಜ್ಯೋತಿ, ಸ್ತ್ರೀಶಕ್ತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳ ಜೊತೆಗೆ ಹಸಿದವರು, ಶ್ರಮಿಕರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಹೀಗೆ ಅನೇಕ ಕಾರ್ಯಕ್ರಮಗಳು ಜನರ ಮನಗೆದ್ದಿವೆ ಎಂದು ತಿಳಿಸಿದ್ದಾರೆ.

ನಾಡಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಆಡಳಿತ ಅಗತ್ಯ ಎಂಬ ವಾತಾವರಣ ನಿರ್ಮಾಣ ಆಗಿದೆ. ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರವನ್ನು ಪ್ರತಿಷ್ಠಾಪಿಸಬೇಕೆಂಬ ಜನರ ಇಚ್ಛೆ ದಟ್ಟವಾಗಿರುವ ಸಂದರ್ಭ ನನ್ನನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಣೆ ಮಾಡಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೇ ನಾನು ನಾಮಪತ್ರ ಸಲ್ಲಿಸುವ ಸಂದರ್ಭ ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಕ್ಕಲಿಗ ಸಮುದಾಯದ ನಾಯಕ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಾಲ್ಮೀಕಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ, ಜಿಲ್ಲೆಯ ಸಚಿವರು, ಹಾಲಿ-ಮಾಜಿ ಶಾಸಕರು, ಹಿರಿಯ ರಾಜಕಾರಣಿಗಳು ಖುದ್ದಾಗಿ ಆಗಮಿಸುತ್ತಿರುವುದು ನನ್ನ ಪಾಲಿಗೆ ಸ್ಮರಣೀಯ ದಿನವಾಗಲಿದೆ ಎಂದಿದ್ದಾರೆ.

ಇಂತಹ ಸಂದರ್ಭ ಕ್ಷೇತ್ರದ ಮತದಾರರಾದ ತಾವು ಹಾಗೂ ಪಕ್ಷದ ನಿಷ್ಟಾವಂತರಾದ ತಮ್ಮಗಳ ಉಪಸ್ಥಿತಿ ನನಗೆ ವೈಯಕ್ತಿಕವಾಗಿ ಹೆಚ್ಚು ಸಂತಸ ತರಲಿದೆ. ಆದ್ದರಿಂದ ಅಂದು ನಿಮ್ಮಗಳ ಆಗಮನ, ಉಪಸ್ಥಿತಿಯತ್ತವೇ ನನ್ನ ಗಮನ ಇರಲಿದೆ. ಅಂದು ನೀವು‌ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನನ್ನು ಹಾರೈಸುತ್ತೀರಾ ಎಂಬ ನಂಬಿಕೆ ನನ್ನಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಿಲ್ಲಾ ಕೇಂದ್ರಕ್ಕೆ 100 ಕಿ.ಮೀ. ಅಭ್ಯರ್ಥಿ ಬೇಕೋ, 500 ಕಿ.ಮೀ ದೂರದ ಅಭ್ಯರ್ಥಿ ಬೇಕೋ? *ಕೈ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪ್ರಶ್ನೆ

ಅಂದಿನ ಮೆರವಣೆಗೆಯಲ್ಲಿ ನನ್ನ ಕೈಜೋಡಿಸಿದ ಕೈಗಳು (ನಮಸ್ಕಾರಗಳು) ನಿಮಗಾಗಿಯೇ ಎದುರು ನೋಡುತ್ತಿರುತ್ತವೆ. ದಯಮಾಡಿ ಏಪ್ರಿಲ್ 4ರಂದು ಚಿತ್ರದುರ್ಗದಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭ ನಿಮ್ಮಗಳ ಉಪಸ್ಥಿತಿ ನನಗೆ ಬಹಳ ಮುಖ್ಯ. ನಿಮ್ಮನ್ನೇ ನಾನು ಎದುರು ನೋಡುತ್ತಿರುತ್ತೇನೆ. ತಪ್ಪದೇ ಬನ್ನಿ. ಇದು ನನ್ನ ಪ್ರೀತಿಯ ಆಹ್ವಾನ ಎಂದು ಬಿ.ಎನ್.ಚಂದ್ರಪ್ಪ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours