ಏನೋ ಮನಸ್ಸಿಗೆ ನೋವಾಗಿತ್ತು ,ಸಿಟ್ಟಲ್ಲಿ ಹೇಳಿದ್ದೆ ಎಂದ ಚಂದ್ರಪ್ಪ,ಕೈ ಹಿಡಿದು ನಾವು ಅಣ್ಣ ತಮ್ಮಂದಿರು ಎಂದ ಕಾರಜೋಳ

 

ಚಿತ್ರದುರ್ಗ : ಅಳಿಯ ಅಲ್ಲ ಮಗಳ ಗಂಡ , ಮೋದಿಗೆ ಪ್ರಚಾರ ಮಾಡಿದರು ಒಂದೇ ಕಾರಜೋಳಗೆ ಪ್ರಚಾರ ಮಾಡಿದರು ಒಂದೇ, ಏನೋ ಸಿಟ್ಟಿನಲ್ಲಿ ಹೇಳಿದ್ದೆ ,ಮನಸ್ಸಿಗೆ ನೋವಾಗಿತ್ತು ಎನ್ನುವ ಮೂಲಕ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪಕ್ಷದ ಪರವಾಗಿ ಕೆಲಸ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇಂದು ಚಿತ್ರದುರ್ಗ ನಗರದ ತಮ್ಮ‌ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ನಾನು ಬಿಜೆಪಿ ಪಕ್ಷದ ಕಟ್ಟಾಳು ಬಿಜೆಪಿ ಗೆಲುವಿಗೆ ದುಡಿಯುತ್ತೇನೆ ಎಂದಿದ್ದಾರೆ. ಪಕ್ಷದ ನಿರ್ಧಾರಕ್ಕೆ ಬದ್ದವಾಗಿದ್ದೇನೆ. ನನ್ನ ಮಗನಿಗೆ ಇನ್ನು ವಯಸ್ಸು ಇರುವುದರಿಂದ ನಾನು ಪಕ್ಷದ ಮಾತಿಗೆ ಒಪ್ಪಿಕೊಂಡಿದ್ದೇನೆ. ನಮಗೆ ಅನ್ಯಾಯವಾಗಿದೆ ಎಂದು ಸಿಟ್ಟಲ್ಲಿ ಮಾತನಾಡಿರುತ್ತೇವೆ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ, 30 ವರ್ಷ ರಾಜಕಾರಣ ಮಾಡಿದ್ದೇವ ಎಂದು ತಿಳಿಸಿದರು.

ಚಂದ್ರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮನುಷ್ಯ ಯಾವಗಲೂ ಆಶಾವಾದಿಯಾಗಿರಬೇಕು. ರಘುಚಂದನ್ ಅವರು ಪಕ್ಷ ಸಂಘಟನೆ ಮತ್ತು ಹೋರಟ ಮಾಡಿಕೊಂಡು ಬಂದಿದ್ದಾರೆ. ಪಕ್ಷ ಯಾವುದೋ ಕಾರಣಕ್ಕಾಗಿ ಇದು ಒಂದು ಬಾರಿ ನೀವೇ ನಿಲ್ಲಬೇಕು ಎಂದ ಕಾರಣಕ್ಕೆ ಕೊನೆ ಕ್ಷಣದಲ್ಲಿ ಅಖಾಡಕ್ಕೆ ಬರಬೇಕಾಯಿತು. ನಾನು ಚಂದ್ರಣ್ಣ ಅಣ್ಣ ತಮ್ಮಂದಿರು ಇದ್ದಂತೆ. ಒಂದೇ ಕುಟುಂಬದವರು ವ್ಯತ್ಯಾಸ ಸಹಜ ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ವರಿಷ್ಠರ ತಿರ್ಮಾನದಂತೆ ನಾನು ಬಂದಿದ್ದು ಎಲ್ಲಾರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

 

ಬಿಜೆಪಿ ಪಕ್ಷದ ವಿರುದ್ಧ ಸಮರ ಸಾರಿದ್ದ ಚಂದ್ರಪ್ಪ ಬಿಎಸ್ವೈ ಮಾತಿಗೆ ಮಣಿದು ಫುಲ್ ಕೂಲ್

ಕಳೆದ ಎರಡು ವಾರಗಳಿಂದಲೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬೆಂಕಿ ಹೊತ್ತಿ ಉರಿದಿತ್ತು. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್ ಅವರಿಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ಸಮರ ಸಾರಿದ್ದ ಚಂದ್ರಪ್ಪ ಕುಟುಂಬ ರಘುಚಂದನ್ ಅವರನ್ನು ಪಕ್ಷೇತರರಾಗಿ ಸ್ವರ್ಧೆ ಮಾಡಿಸಿ ಶಕ್ತಿ ಪ್ರದರ್ಶನಕ್ಕೆ ಸಿದ್ದವಾಗುವುದು ಅಷ್ಟೆ ಅಲ್ಲದೇ ಏಪ್ರಿಲ್ 3 ರಂದು ನಾಮಪತ್ರ ಸಲ್ಲಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದರು.

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತು ಮತ್ತೆ ನಿಜವಾಗಿದೆ. ಈ ಎಲ್ಲಾ ಬೆಳವಣಿಗೆ ಗಮನಿಸಿದ ರಾಜ್ಯ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರನ್ನು ಸಂಧಾನಕ್ಕೆ ಕಳಿಸಿದರು. ಸಹ ವರ್ಕೌಟ್ ಆಗಿರಲಿಲ್ಲ‌.ಇದನ್ನು ಮನಗಂಡ ಮಾಜಿ ಸಿಎಂ ಯಡಿಯೂರಪ್ಪ ಶಾಸಕ ಚಂದ್ರಪ್ಪ ಮತ್ತು ಪುತ್ರ ರಘುಚಂದನ್ ಗೆ ಬುಲಾವ್ ಹೇಳಿ ಸಂಧಾನ ಮಾಡುವ ಮೂಲಕ ಭಿನ್ನಮತಕ್ಕೆ ಫುಲ್ ಸ್ಟಾಪ್ ಹಾಕಿ ಚಂದ್ರಪ್ಪಗೆ ಸಮಾಧಾನ ಮಾಡಿದ್ದು ಈಗ ಕೂಲ್ ಆಗಿರುವ ಚಂದ್ರಪ್ಪ ಮತ್ತು ರಘುಚಂದನ್ ಗೋವಿಂದ್ ಕಾರಜೋಳ ಪರ ಕೆಸಲ ಮಾಡುತ್ತೇನೆ ಎಂದು ತಿಳಿಸಿದ್ದು ಒಂದು ಹಂತಕ್ಕೆ ಗೋವಿಂದ ಕಾರಜೋಳ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರುಳಿ, ಯುವ ಮುಖಂಡ ಚಂದ್ರಪ್ಪ ಪುತ್ರ ರಘುಚಂದನ್ , ಸಿದ್ದೇಶ್ ಯಾದವ್ , ನಾಗರಾಜ್ ಬೇಂದ್ರೆ ಮತ್ತು ಮುಖಂಡರ ಭಾಗವಹಿಸಿದ್ದರು.

 

[t4b-ticker]

You May Also Like

More From Author

+ There are no comments

Add yours