ಜನವರಿಯಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ.

 

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, 2021ರ ಜನವರಿ 1ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆ 1981ರ ತಿದ್ದುಪಡಿಯಂತೆ 2017ರ ಡಿಸೆಂಬರ್ 1ಕ್ಕೆ ಮುನ್ನ ಮಾರಾಟವಾಗಿರುವ ಎಲ್ಲಾ ‘ಎಂ’ ಮತ್ತು ‘ಎನ್’ ವರ್ಗದ ಹಳೆಯ ಮೋಟಾರು ವಾಹನಗಳಿಗೂ(ದ್ವಿಚಕ್ರ ವಾಹನಗಳಿಗೆ) ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ.

ಸಚಿವಾಲಯ 2020ರ ನವೆಂಬರ್ 6ರಂದು ಜಿಎಸ್‌ಆರ್ 690(ಇ) ಅಧಿಸೂಚನೆಯನ್ನು ಹೊರಡಿದ್ದು, ಕೇಂದ್ರೀಯ ಮೋಟಾರು ವಾಹನ ನಿಯಮ 1989ರ ಅನ್ವಯ 2017ರ ಡಿಸೆಂಬರ್ 1 ರ ನಂತರ ನೋಂದಾಯಿಸಲ್ಪಟ್ಟಿರುವ ಎಲ್ಲಾ ಹೊಸ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಗೊಳಿಸಲಾಗಿದೆ. ಜೊತೆಗೆ ಕ್ಷಮತಾ ಪ್ರಮಾಣಪತ್ರ(ಫಿಟ್ ನೆಸ್ ಸರ್ಟಿಫಿಕೇಟ್) ಅನ್ನು ನವೀಕರಣ ಮಾಡಿಕೊಡಬೇಕು ಎಂದು ಕಡ್ಡಾಯ ಗೊಳಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours