ಐದು ವರ್ಷ ಇದ್ದ ಅಧಿಕಾರಿಗಳನ್ನು ಜಾಗ ಖಾಲಿ ಮಾಡಿಸಿ:ಟಿ.ರಘುಮೂರ್ತಿ

 

 

ಚಳ್ಳಕೆರೆ: ಐದು ವರ್ಷ ಮೇಲು  ಚಳ್ಳಕೆರೆ   (challakere) ಯಲ್ಲಿ  ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳ ವಿರುದ್ದ ವರದಿ ಸಿದ್ದ ಪಡಿಸಿ ಸರ್ಕಾರಕ್ಕೆ ಪತ್ರಬರೆಯಿರಿ, ಎಲ್ಲಾ ಅಧಿಕಾರಿಗಳು ಎರಡ್ಮೂರು ವರ್ಷ ಹೊರಗಡೆ ಹೋಗಿ ರಿಲೀಫ್ ಆಗಿ ಬರಲಿ ಎಂದು ಶಾಸಕ ಟಿ.ರಘುಮೂರ್ತಿ ಯೋಜನಾ ನಿರ್ದೇಶಕ ಮಹೇಂದ್ರಕುಮಾರಗೆ ಸೂಚನೆ ನೀಡಿದರು.

ಅವರು, ನಗರದ ನಗರಸಭೆ ಕಾರ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ದೂರುಗಳನ್ನು ಆಲಿಸಿ ಅಧಿಕಾರಿಗಳಿಗೆ ಹೇಳಿದ ಮಾತಿನಪರಿ. ಕಳೆದ ಸಭೆಯಲ್ಲಿ ಸಾರ್ವಜನಿಕರು ಹೇಳಿದ ದೂರಗಳಿಗೆ ನೀವು ಯಾವ ರೀತಿ ಸ್ಪಂದಿಸಿದ್ದೀರ, ಸಭೆಯಲ್ಲಿ ದೂರು ಹೇಳಿದ ವ್ಯಕ್ತಿಗಳನ್ನು ಗುರಿಯಾಗಿಸಿ ಕೆಲಸ ಮಾಡದೆ ಇಲ್ಲಸಲ್ಲದ ಕಾನೂನು ಹೇಳಿ ಅವರನ್ನು ಅಲೆದಾಡುವಂತೆ ಮಾಡುತ್ತಿದ್ದೀರ. ಜನರು ದೂರು ಹೇಳುವುದು ತಪ್ಪೆ ಎಂದು ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದನ್ನೂ ಓದಿ: ಭೀಕರ ಅಪಘಾತ ಏಳು ಜನ ಸಾವು

ನಗರಸಭೆಯ ೧೧ನೇ ವಾರ್ಡ್ನ ಸುಗುಣವೆಂಬ ಗೃಹಿಣಿ ನನ್ನ ಎರಡೂ ಸೈಟುಗಳ ಇ-ಸ್ವತ್ತು ಹಾಗೂ ಇತರೆ ದಾಖಲಾತಿಗಳನ್ನು ಸರಿಪಡಿಸಿಕೊಡಲು ಬಿಲ್‌ಕಲೆಕ್ಟರ್ ಮಂಜುನಾಥ ೭ ಲಕ್ಷ ಹಣ ಕೇಳಿದ್ದು ನಂತರ ಮೂರು ಲಕ್ಷ ಕೊಡಿ ಎಂದು ಒತ್ತಾಯಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಆರ್.ಜಗದೀಶ್ ಮಾತನಾಡಿ, ಇ-ಸ್ವತ್ತು ಪಡೆಯಲು ನಿರಂತರ ಓಡಾಟ ನಡೆಸಬೇಕು, ಅವರು ಕೇಳಿದ ಹಣವನ್ನು ನೀಡಬೇಕು ಇಲ್ಲವಾದರೆ ನಿಮ್ಮ ಪೈಲ್ ಇಲ್ಲವೆಂದು ಸಬೂಬು ಹೇಳುತ್ತಾರೆ.

ಜೀವ ವಿಮೆ ಅಭಿವೃದ್ದಿ ಅಧಿಕಾರಿ ಬಿ.ತಿಪ್ಪೇಸ್ವಾಮಿ, ಸೋಮಗುದ್ದು ರಸ್ತೆಯ ನಮ್ಮ ಕಾಂಪ್ಲೆಕ್ಟ್ ಇ-ಖಾತೆಯ ಬಗ್ಗೆ ಮೂರು ತಿಂಗಳಿನಿಂದ ಓಡಾಡುತ್ತಿದ್ದೇನೆ, ನನ್ನ ಪೈಲ್ ಕಳೆದಿದೆ ಎಂದಿದ್ದಕ್ಕೆ ಹುಡುಕಿಕೊಟ್ಟರೂ ಕೆಲಸ ಮಾತ್ರವಾಗಿಲಿಲ್ಲ. ನಗರಸಭೆಯ ಸಿಬ್ಬಂದಿ ನಿರ್ಲಕ್ಷ್ಯತನ  ಲಂಚಪಡೆಯುವಿಕೆ ಹಾಗೂ ಉದಾಸೀನದಿಂದ ಮಾತನಾಡುವ ಪ್ರವೃತ್ತಿಯ ಬಗ್ಗೆ ನಗರಸಭೆ ಸದಸ್ಯೆ ಎಂ.ನಾಗವೇಣಿ, ಎಚ್.ಪ್ರಶಾಂತ್‌ಕುಮಾರ್, ಶಿವಕುಮಾರ್, ಜಯಣ್ಣ, ವೀರಭದ್ರಪ್ಪ, ಸುಮಭರಮಣ್ಣ ಮುಂತಾದರು ನಗರಸಭೆ ಸಿಬ್ಬಂದಿ ವರ್ಗದ ಬಗ್ಗೆ ಸಾರ್ವಜನಿಕರು ಮಾಡಿದ ಆರೋಪದ ಬಗ್ಗೆ ತಿಳಿಸಿದರು.

ಇದನ್ನೂ ಓದಿ:ವಿವಿಧ ನಿಗಮಗಳಲ್ಲಿ ಸಾಲ‌ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೆ.ಕೆ.ಹೊನ್ನಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಸದಸ್ಯರಾದ ಟಿ.ಮಲ್ಲಿಕಾರ್ಜುನ್, ಸಿ.ಕವಿತಾ, ಸುಮಾ, ಜೈತುಂಬಿ, ಕೆ.ವೀರಭದ್ರಯ್ಯ, ವ್ಯವಸ್ಥಾಪಕ ಲಿಂಗರಾಜು, ಕಂದಾಯಾಧಿಕಾರಿ ಸತೀಶ್, ಕಂದಾಯ ನಿರೀಕ್ಷಕ ವಿಶ್ವನಾಥ, ಇ.ತಿಪ್ಪೇಸ್ವಾಮಿ, ಓಬಣ್ಣ, ನಾಗರಾಜ, ಎಇಇ ಕೆ.ವಿನಯ್, ಜೆ.ಇ.ಲೋಕೇಶ್, ಹಿರಿಯ ಆರೋಗ್ಯ ನಿರೀಕ್ಷಕರಾದ ಮಹಲಿಂಗಪ್ಪ, ದಾದಾಪೀರ್, ಗಣೇಶ್, ಗೀತಾಕುಮಾರಿ, ಬಾಸ್ಕರ್, ಹರೀಶ್, ಎಸ್.ಎಲ್.ಮಂಜಣ್ಣ, ಚೇತನ್, ಪಿಎಸ್‌ಐ ಕೆ.ಸತೀಶ್‌ನಾಯ್ಕ, ಎಇಇ ಎನ್.ಕಾವ್ಯ, ಬೆಸ್ಕಾಂ ಎಇಇ ರಾಜು ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours