ಭಾರತೀಯ ಕ್ರಿಕೆಟ್‌ಗೆ ವಿಶ್ವಮಟ್ಟದಲ್ಲಿ ಆಗ್ರಸ್ಥಾನ : ಪಿಎಸ್‌ಐ ಕೆ.ಸತೀಶ್‌ನಾಯ್ಕ.

 

ಯುವ ಜನಾಂಗವನ್ನು ಹೆಚ್ಚು ಆಕರ್ಷಿಸಿರುವುದು ಕ್ರಿಕೆಟ್ : ಭಾರತೀಯ ಕ್ರಿಕೆಟ್‌ಗೆ ವಿಶ್ವಮಟ್ಟದಲ್ಲಿ ಆಗ್ರಸ್ಥಾನ : ಪಿಎಸ್‌ಐ ಕೆ.ಸತೀಶ್‌ನಾಯ್ಕ.

ಚಳ್ಳಕೆರೆ-೧೭ ವಿಶ್ವಮಟ್ಟದಲ್ಲಿ ಭಾರತೀಯ ಕ್ರಿಕೆಟ್ ಆಟಕ್ಕೆ ತನ್ನದೇಯಾದ ಮಾನ್ಯತೆ ಇದೆ. ಇಂದು ಕ್ರಿಕೆಟ್ ಆಟವನ್ನು ಹಳ್ಳಿಯಿಂದ ದಿಲ್ಲಿಯ ತನಕ ನೋಡಬಹುದಾಗಿದೆ. ಯುವ ಜನಾಂಗ ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಉತ್ತಮ ಆಟ ಪ್ರದರ್ಶನದ ಮೂಲಕ ಕ್ರಿಕೆಟನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕೆಂದು ಪಿಎಸ್‌ಐ ಕೆ.ಸತೀಶ್‌ನಾಯ್ಕ ತಿಳಿಸಿದರು.

ಅವರು, ಬುಧವಾರ ನಗರದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಚಳ್ಳಕೆರೆಯ ಕ್ರಿಕೆಟ್ ಲರ‍್ಸ್ ತಂಡ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂಬಾರಿ ಆನೆ ಅರ್ಜುನ ಕಫ್ ಟೂರ್ನಿಮೆಂಟ್‌ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕ್ರಿಕೆಟ್ ಜನಪ್ರಿಯತೆ ಬಗ್ಗೆ ನಾವೆಲ್ಲರೂ ಹೆಚ್ಚು ಸಂತೋಷ ಪಡಬೇಕಿದೆ. ಕ್ರಿಕೆಟ್ ಆಟದಿಂದ ಮನಸಿಗೆ ನೆಮ್ಮೆದಿಯ ಜೊತೆಗೆ ಉತ್ತಮ ಆರೋಗ್ಯವಂತರಾಗಿಯೂ ಸಹ ಇರುವ ಅವಕಾಶಗಳಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಳ್ಳಕೆರೆಯ ಕ್ರಿಕೆಟ್ ಲರ‍್ಸ್ ತಂಡ ವ್ಯವಸ್ಥಾಪಕ ಡಿ.ಎಸ್.ಆದರ್ಶ ಮಾತನಾಡಿ, ಜಿಲ್ಲಾ ಮಟ್ಟದ ಈ ಪಂದ್ಯಾವಳಿಯಲ್ಲಿ ಒಟ್ಟು ೩೨ ತಂಡಗಳು ಭಾಗವಹಿಸಿದ್ದು, ಮೂರು ದಿನಗಳ ಕಾಲ ಪ್ರದರ್ಶನ ನಡೆದಿದ್ದು, ಅಂತಿಮವಾಗಿ ಚಳ್ಳಕೆರೆಯ ಫೈರ್‌ಬಾಯ್ಸ್ ಪ್ರಥಮ ಸ್ಥಾನ, ಭರತ್ ಕ್ರಿಕೆರ‍್ಸ್ ದ್ವಿತೀಯ ಸ್ಥಾನ, ಗ್ರೇಟ್‌ವಾರಿರ‍್ಸ್ ತೃತೀಯ ಸ್ಥಾನ ಪಡೆದವು ಎಂದರು.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸುವುದಾಗಿ ನಂಬಿಸಿ ವಂಚನೆ?
ಕಾರ್ಯಕ್ರಮದಲ್ಲಿ ಪತ್ರಕರ್ತ ಅಪ್ಪುವೀರೇಶ್, ಅರಣ್ಯ ಇಲಾಖೆ ಅಧಿಕಾರಿ ರಾಜೇಶ್, ಡಾ.ಅನಿಲ್, ಅಂಜಲಿರಾಜು, ತಿಪ್ಪೇಸ್ವಾಮಿ(ಕಾಳಿಂಗ), ಪ್ರಶಾಂತ್, ಸಿಂಗ್, ಮಂಜುನಾಥ, ಲೋಕೇಶ್, ರಾಜೇಶ್, ಅತ್ರೀಶ್, ಲಿಂಗರಾಜು, ರಾಜು ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ; ಚಳ್ಳಕೆರೆ ಜಿಟಿಟಿಸಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

[t4b-ticker]

You May Also Like

More From Author

+ There are no comments

Add yours