ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸುವುದಾಗಿ ನಂಬಿಸಿ ವಂಚನೆ?

 

ನಾಯಕನಹಟ್ಟಿ: ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಹೊಲಿಗೆ ಯಂತ್ರವನ್ನು ಕೊಡುವುದಾಗಿ ನಂಬಿಸಿ ಮೂರು ವರ್ಷಗಳಾದರೂ ಹೊಲಿಗೆ ಯಂತ್ರಗಳನ್ನು ಕೂಡದೆ ವಂಚಿಸಿದ್ದಾರೆ ಎಂದು ಹೊಲಿಗೆ ತರಬೇತಿ ಫಲಾನುಭವಿಗಳು ಆರೋಪಿಸಿದ್ದಾರೆ.
 ನಾಯಕನಹಟ್ಟಿ ಮೈರಾಡ ಸಂಸ್ಥೆ ಕಚೇರಿಯಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರು ಸಭೆ ಸೇರಿ ಮಾತನಾಡಿದರು. ಸನ್ ಫೌಂಡೇಶನ್ ಫೆಡರೇಶನ್ ಆಫ್ ಸ್ಕಿಲ್ ಅಂಡ್ ಎಜುಕೇಶನ್ ಸಂಸ್ಥೆ ಹೈದರಾಬಾದ್. ಈ ಸಂಸ್ಥೆ ವತಿಯಿಂದ ಮೂರು ವರ್ಷಗಳ ಹಿಂದೆ ನಾಯಕನಹಟ್ಟಿಯಲ್ಲಿ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರ (ರಿ ) ನಾಯಕನಹಟ್ಟಿಯಲ್ಲಿ ಸುಮಾರು 60 ಜನ ಮಹಿಳೆಯರಿಂದ 1200 ರೂಪಾಯಿ ಶುಲ್ಕದೊಂದಿಗೆ ಮೂರು ತಿಂಗಳ ಹೊಲಿಗೆ ತರಬೇತಿಯನ್ನು ನೀಡಿ ಹೊಲಿಗೆ ಯಂತ್ರವನ್ನು ಸಹ ನೀಡುತ್ತೇವೆ ಎಂದು ಹೇಳಿ ಯಂತ್ರವನ್ನು ಕೊಡದೆ ಶುಲ್ಕವನ್ನು ಹಿಂದಿರುಗಿಸದೆ ಮಹಿಳೆಯರಿಗೆ ಮೋಸ ಆರೋಪ ಕೇಳೊ ಬಂದಿದೆ.
ಇದರಿಂದ ಮನನೊಂದ ಮಹಿಳೆಯರಿಗೆ ಸನ್ ಫೌಂಡೇಶನ್ ಸಂಸ್ಥೆಯವರ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದರು.
 ಈ ಕೂಡಲೇ ವಿಷಯ ತಿಳಿದ ಪಿಎಸ್ಐ ದೇವರಾಜ್ ರವರು ತಮ್ಮ ಸಿಬ್ಬಂದಿಗಳಾದ ರಮೇಶ್ ಮತ್ತು ಮಂಜುಳಾ ಪೇದೆಗಳನ್ನು ಕಳುಹಿಸಿ ಪ್ರತಿಭಟನೆಯನ್ನು ನಿಲ್ಲಿಸಿ ಕಾನೂನಾತ್ಮಕರವಾಗಿ ಹೋಟರ ಮಾಡಬೇಕು.
 ಪೊಲೀಸ್ ಸಿಬ್ಬಂದಿಯವರು ಆಗಮಿಸಿ ನೀವು ಪ್ರತಿಭಟನೆ ಮಾಡುವುದಾದರೆ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿ ಪ್ರತಿಭಟನೆ ಮಾಡಿ ಎಂದು ಪ್ರತಿಭಟನಕಾರರಿಗೆ ಮಾಹಿತಿ ನೀಡಿ ಸಮಾಧಾನ ಪಡಿಸಿದರು.
 ಈ ಕೂಡಲೇ ಮಹಿಳಾ ಹೊಲಿಗೆ ತರಬೇತಿದಾರರ ಬೇಡಿಕೆ ಈಡೇರಿಸಬೇಕು ಇಲ್ಲವಾದರೆ ಮಹಿಳೆಯರೊಂದಿಗೆ ಸಾರ್ವಜನಿಕ ಹಕ್ಕು ಗಳ ಹೋರಾಟ ಸಮಿತಿ ಯು ಪ್ರತಿಭಟನೆ ಮಾಡಲಾಗುವುದು
  ಕೆ ಎಂ ಪಂಚಾಕ್ಷರಿ ಸ್ವಾಮಿ
 ರಾಜ್ಯ ಅಧ್ಯಕ್ಷರು
 ಸಾರ್ವಜನಿಕ ಹಕ್ಕುಗಳ ಹೋರಾಟ ಸಮಿತಿ.
 ಈ ಸಂದರ್ಭದಲ್ಲಿ ಹೊಲಿಗೆ ತರಬೇತಿ ನೀಡಿದ ಲೀಲಾವತಿ ಯವರು ತರಬೇತಿ ಪಡೆದ ರೇಣುಕಮ್ಮ, ಎಸ ಮಮತಾ, ವಿ ನಾಗವೇಣಿ, ದೇವಿರಮ್ಮ, ಮೈರಾಡ ಸಂಸ್ಥೆಯ ಲಕ್ಷ್ಮೀದೇವಿ, ವಿಜಯ ಕುಮಾರಿ, ರಾಧಾ. ಮತ್ತು ದಲಿತ ಕವಿ ಎಂ ಟಿ ಮಂಜುನಾಥ್, ಸತ್ಯಪ್ಪ,ಮತ್ತಿತರರಿದ್ದರು.
 ಹೊಲಿಗೆ ತರಬೇತಿ ನೀಡಿದವರೆಗೂ ಮತ್ತು ತರಬೇತಿಯನ್ನು ಪಡೆದವರಿಗೂ ಅನ್ಯಾಯವಾಗಿದ್ದರೆ ಕಾನೂನಾತ್ಮಕವಾಗಿ ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಡುತ್ತೇವೆ. ಆದರೆ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗಬಾರದು
 ದೇವರಾಜ್ 
 ಪಿ ಎಸ್ ಐ
 ನಾಯಕನಹಟ್ಟಿ ಪೊಲೀಸ್ ಠಾಣೆ
[t4b-ticker]

You May Also Like

More From Author

+ There are no comments

Add yours