ಚಳ್ಳಕೆರೆ ಜಿಟಿಟಿಸಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ( chitradurga) (ಕರ್ನಾಟಕ ವಾರ್ತೆ)ಜ.17:
ಚಳ್ಳಕೆರೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಡಿಪ್ಲೋಮಾ ಇನ್ ಟೂಲ್  ಮತ್ತು ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 24 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಬೋಧನೆಯಲ್ಲಿ ಕನಿಷ್ಟ ಒಂದು ವರ್ಷ ಅನುಭವವುಳ್ಳ ಪ್ರಥಮ ದರ್ಜೆಯಲ್ಲಿ ಬಿ.ಇ ಅಥವಾ ಎಂ.ಟೆಕ್ ಇನ್ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪದವಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಜನವರಿ 24ರೊಳಗಾಗಿ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಮಾಸಿಕ ಗೌರವಧನ ರೂ.18,000/- ದಿಂದ 25,500/- ನೀಡಲಾಗುವುದು

ಇದನ್ನೂ ಓದಿ: ವಿಜಾಪುರ ಬಳಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ|ಸ್ಥಳದಲೇ ವಿದ್ಯಾರ್ಥಿ ಸಾವು
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಮ ಸರ್ವೇ ನಂ.117, ಶಾರದಾ ಗಣಪತಿ ಕೋಲ್ಡ್ ಸ್ಟೋರೇಜ್  ಹತ್ತಿರ, ಬಳ್ಳಾರಿ ರಸ್ತೆ, ಚಳ್ಳಕೆರೆ-577522 ಹಾಗೂ ದೂರವಾಣಿ ಸಂಖ್ಯೆ 7625008641, 7019066755 ಗೆ ಸಂಪರ್ಕಿಸಬಹುದು ಎಂದು ಚಳ್ಳಕೆರೆ ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours