ಅನ್ನಭಾಗ್ಯದ ಅಕ್ಕಿ ಕಳ್ಳರನ್ನು ಹಿಡಿದ ಪೋಲಿಸರಿಗೆ ಒಪ್ಪಿಸಿದ ಜ‌ನರು

 

ಚಿತ್ರದುರ್ಗ :ಕಾಂಗ್ರೆಸ್ ಸರ್ಕಾರದ  ಐದು ಗ್ಯಾರೆಂಟಿ ಯೋಜನೆಗಳಲ್ಲಿ  ಅತ್ಯಂತ  ಜನಪ್ರಿಯ ಯೊಜನೆಯಾಗಿ ಬಡವರಿಗೆ ವರವಾಗಿರುವಂತಹ   ಅನ್ನಭಾಗ್ಯ   (Annabhagya)ಯೋಜನೆ ಮೂಲಕ  ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ, ಈ ಅಕ್ಕಿ  ಕಳ್ಳರ ಮತ್ತು ಕಾಳಸಂತೆಯಲ್ಲಿ ಮಾರಟವಾಗುತ್ತಿದೆ  ಅನೇಕ ಘಟನೆಗಳು ನಾವು ರಾಜ್ಯದಲ್ಲಿ ನೋಡುತ್ತಿದ್ದೇವೆ. 

ಇಂತಹ ಪ್ರಕರಣಗಳು ಹೆಚ್ಚುತ್ತಿರುವ ನಡುವೆ  ಮತ್ತೊದು  ಪ್ರಕರಣ ಚಿತ್ರದುರ್ಗ ನಗರದ  ಕೆಳಗೋಟೆ ವ್ಯಾಪ್ತಿಯಲ್ಲಿ ನಡೆದಿದೆ.  ಸ್ಥಳೀಯರು ಅಕ್ರಮವಾಗಿ ಅಕ್ಕಿಸಾಗಿಸುತ್ತಿದ್ದ ವಾಹನವನ್ನು ಅಕ್ಕಿ ಸಮೇತವಾಗಿ ರೆಡ್ ಹ್ಯಾಂಡ್ ಆಗಿ  ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಅವೈಜ್ಞಾನಿಕ ರಸ್ತೆ ವಿಭಜಕ ಕುರಿತು ಸದನದಲ್ಲಿ ಚರ್ಚೆ : ತೆರವಿಗೆ ಶಾಸಕ ವೀರೇಂದ್ರ ಪಪ್ಪಿ ಒತ್ತಾಯ

ಬೊಲೆರೊ ಪಿಕಪ್ ವಾಹನದಲ್ಲಿ  ಅನ್ನಭಾಗ್ಯದ  ನ್ಯಾಯಬೆಲೆ ಅಂಗಡಿಯಿಂದ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಹತ್ತು ಚೀಲ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಅಕ್ಕಿ ಅನ್ನಭಾಗ್ಯಕ್ಕೆ ಸಂಬಂಧಿಸಿದ್ದು, ಎಂದು ಆಹಾರ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಕ್ರಮವಾಗಿ ಅಕ್ಕಿಮಾರಾಟ ಮಾಡದ ನ್ಯಾಯಬೆಲೆ ಅಂಗಡಿಯವರಿಗೂ ಸ್ಥಳೀಯರು ತರಾಟೆಗೆ ತೆಗೆದುಕೊಂಡಿರುವ ವೀಡಿಯೋ ಹರಿದಾಡುತ್ತಿದೆ.

ಅಕ್ಕಿಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ಕಿಸಾಗಿಸುತ್ತಿದ್ದ ಆರೋಪದಲ್ಲಿ ದಾದಾಪೀರ್ ಹಾಗೂ ಷರೀಫ್ ಎಂಬುವವರ ವಿರುದ್ಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. 

 

[t4b-ticker]

You May Also Like

More From Author

+ There are no comments

Add yours