ಆಗ್ನೇಯ ಶಿಕ್ಷಕರ ಚುನಾವಣೆ :ಚಳ್ಳಕೆರೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ ಡಿ.ಟಿ ಶ್ರೀನಿವಾಸ್

 

ಪರಶುರಾಂಪುರ: ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇರುವಾಗ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯಲ್ಲಿ ಮಂಗಳವಾರ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ,( D.T.Srinivas )ಪರಶುರಾಂಪುರ ಹೋಬಳಿಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪ್ರಚಾರ ಆರಂಭಿಸಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದರಿಂದ ಈಗಾಗಲೇ ಚುನಾವಣೆ ಪ್ರಚಾರ ಬಿಸಿ ಹೆಚ್ಚಾಗಿದೆ. ಗ್ರಾಮದ ವೇದಾವತಿ , ಸರ್ವೋದಯ , ಸರ್ಕಾರಿ ಪ್ರೌಢಶಾಲೆ , ಪದವಿ ಪೂರ್ವ ಕಾಲೇಜು, ವಿಶ್ವ ಭಾರತಿ , ಪದವಿ ಕಾಲೇಜು ಸೇರಿದಂತೆ ವಿವಿಧ ಶಾಲೆಗಳಿಗೆ ತೆರಳಿ ಮತಯಾಚಿಸಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳು ಬರಲಿವೆ. ಶಿಕ್ಷಣ ಸಂಸ್ಥೆ ನಡೆಸುತ್ತಾ ಬಂದಿದ್ದು, ಶಿಕ್ಷಕರ ಕಷ್ಟ ಸುಖಗಳನ್ನು ಅರಿತಿದ್ದೇನೆ.ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.ಒಂದು ಅವಕಾಶ ಕಲ್ಪಿಸಲು ಮನವಿ ಮಾಡಿದರು .ಆಗೆಯೇ ಶಿಕ್ಷಕರ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

ಇದನ್ನೂ ಓದಿ: ಬೈಕ್ ಅಡ್ಡಗಟ್ಟಿ 1.50 ಕೋಟಿ ಹಣ ದರೋಡೆ ಮಾಡಿದ ಕಳ್ಳರು

ಕಳೆದ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದೇನೆ. ಕ್ಷೇತ್ರ ದೊಡ್ಡದಿದ್ದ ಕಾರಣ ಮತದಾರರನ್ನು ತಲುಪಲು ಸಾಧ್ಯವಾಗಲಿಲ್ಲ. ಈ ಬಾರಿ ಶಿಕ್ಷಕರು ಮತದಾರರಾಗಿದ್ದು, ಸಂಖ್ಯೆ ಕಡಿಮೆ ಇದೆ. ಹಾಗಾಗಿ ಶಿಕ್ಷಕರನ್ನು ನೇರವಾಗಿ ಭೇಟಿಯಾಗಿ ಮತ ಕೇಳುತ್ತೇನೆ. ಈಗಾಗಲೇ ಪ್ರವಾಸ ಆರಂಭಿಸಿರುವುದರಿಂದ ಈ ಬಾರಿ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಸಂದರ್ಭದಲ್ಲಿ ನಗರಸಭೆ ಸದಸ್ಯ ರಮೇಶ ಗೌಡ , ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶಶಿಧರ , ಕಸಾಪ ತಾಲೂಕಾಧ್ಯಕ್ಷ ವೀರಭದ್ರಪ್ಪ , ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ತಾಲೂಕ್ಅಧ್ಯಕ್ಷರು ಮಧು ಕುಮಾರ್ ಎಂ ಎನ್ ಮುಖಂಡರಾದ ಚಿಕ್ಕಣ್ಣ , ಮಂಜುನಾಥ , ಪೋತರಾಜ. ಸೇರಿದಂತೆ ಇನ್ನಿತರರು ಇದ್ದರು.

ಚಳ್ಳಕೆರೆಯಲ್ಲಿ ಪ್ರಚಾರ 

ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಡಿ.ಟಿ.ಶ್ರೀನಿವಾಸ್ ಸ್ಪರ್ಧೆ : ಗೆಲಿಸಿಕೊಡುವಂತೆ ಪಕ್ಷದ ನೇತಾರರಲ್ಲಿ ಮನವಿ : ಪಿ.ತಿಪ್ಪೇಸ್ವಾಮಿ.

ಚಳ್ಳಕೆರೆ-೧೨ ಇನ್ನೂ ಕೆಲವೇ ತಿಂಗಳಲ್ಲಿ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷ ಈಗಾಗಲೇ ಚುನಾವಣಾ ಸಿದ್ದತೆ ಹಾಗೂ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ನಡೆಸುತ್ತಿದೆ. ಈ ಚುನಾವಣೆಂiÀiಲ್ಲೂ ಸಹ ಪಕ್ಷ ನಿರ್ಧರಿಸಿದ ವ್ಯಕ್ತಿಗೆ ಮತ ನೀಡಿ ಜಯಶಾಲಿಯಾಗುವಂತೆ ಮಾಡಬೇಕೆಂದು ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ ತಿಳಿಸಿದರು.
ಅವರು, ಮಂಗಳವಾರ ಶಾಸಕರ ಭವನಕ್ಕೆ ಆಗಮಿಸಿದ್ದ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾರವರ ಪತಿ ಡಿ.ಟಿ.ಶ್ರೀನಿವಾಸ್‌ರವರನ್ನು ಸನ್ಮಾನಿಸಿ ಮಾತನಾಡಿದರು. ಪ್ರಸ್ತುತ ಡಿ.ಟಿ.ಶ್ರೀನಿವಾಸ್ ಈಗಾಗಲೇ ಈ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಗ್ನೇಯ ಪದವಿ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿದ್ದಾರೆ. ಪಕ್ಷದ ವರಿಷ್ಠರ ಮಂಡಳಿಯೂ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡಿದೆ. ಪಕ್ಷ ಶ್ರೀನಿವಾಸ್‌ರವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿಸಿದರೆ ನಾವೆಲ್ಲರೂ ಅವರ ವಿಜಯಕ್ಕಾಗಿ ದುಡಿಯೋಣವೆಂದರು.
ಕಾಂಗ್ರೆಸ್ ಮುಖಂಡ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಕಳೆದ ಬಾರಿ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದು, ಕ್ಷೇತ್ರದ ಪದವೀಧರ ಶಿಕ್ಷಕರ ಮತದಾರರ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಮತ್ತೊಮ್ಮೆ ನಾನು ಸ್ಪರ್ಧಿಸಬೇಕೆಂಬ ಇಂಗಿತವನ್ನು ಮತದಾರರು ವ್ಯಕ್ತಪಡಿಸಿದ್ಧಾರೆ. ನಾನು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿಕೊಂಡಿವೆ. ಪ್ರಸ್ತುತ ಸ್ಥಿತಿಯಲ್ಲಿ ಈ ಕ್ಷೇತ್ರದಿಂದ ಅಂತಿಮವಾಗಿ ನನಗೆ ಪಕ್ಷ ಅವಕಾಶ ಮಾಡಿಕೊಡಲಿದೆ ಎಂಬ ನಂಬಿಕೆ ನನಗಿದೆ. ತಾವೆಲ್ಲರೂ ಸಹಕಾರ ನೀಡಿ ನನ್ನ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಸದಸ್ಯರಾದ ವೈ.ಪ್ರಕಾಶ್, ಬಿ.ಟಿ.ರಮೇಶ್‌ಗೌಡ, ಕುಶಲಕರ್ಮಿ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್.ಎಚ್.ಸೈಯದ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅನ್ವರ್ ಮಾಸ್ಟರ್, ಮಾಜಿ ಪುರಸಭಾ ಸದಸ್ಯ ಗೋವಿಂದರಾಜು, ಕಾಂಗ್ರೆಸ್ ಮುಖಂಡರಾದ ಸಿ.ಟಿ.ಶ್ರೀನಿವಾಸ್, ಕೃಷ್ಣಮೂರ್ತಿ, ಪ್ರಹ್ಲಾದ್, ಜಿ.ಟಿ.ವೀರಭದ್ರಸ್ವಾಮಿ, ಸಿ.ಟಿ.ವೀರೇಶ್, ದಳವಾಯಿಮೂರ್ತಿ, ಟಿ.ಸೂರನಾಯಕ, ಚೇತನ್‌ಕುಮಾರ್, ಬೋರಣ್ಣ, ಭದ್ರಿ, ನಟರಾಜು, ಗುರುಮೂರ್ತಿ, ಅಪ್ಪಣ್ಣ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours