150 ರೂಪಾಯಿ ಸಾಲದ ಜಗಳ ಕೊಲೆಯಲ್ಲಿ ಅಂತ್ಯ

 

ಚಿತ್ರದುರ್ಗ: ಲಕ್ಷ ಲಕ್ಷ ಹಣ ಸಾಲ ಕೊಟ್ಟೋರು ಸಹ ಸಾಲ ವಾಪಸ್ ಪಡೆಯೋದಕ್ಕೆ ಹರಸಾಹಸ ಪಡುತ್ತಾರೆ. ಕೇಲವು ಬಾರಿ ಎ ಸಾಕಪ್ಪ ಕೇಳಿ ಕೇಳಿ ಸಾಕಾಗಿದೆ. ಹಾಳು ಬಡಿಸಿಕೊಂಡು ಹೋಗಲಿ , ದೇವರು ನೋಡಿಕೊಳ್ಳತ್ತಾನೆ ಅಂತ ಕೈಚೆಲ್ಲಿ ಕುಳಿತುಕೊಳ್ಳತ್ತಾರೆ.‌ ಚಿತ್ರದುರ್ಗದಲ್ಲಿ   ಕೇವಲ 150 ರೂಪಾಯಿಗಾಗಿ ಕೊಲೆ ಮಾಡಿರುವ ಘಟನೆ ನಡೆದು ಹೋಗಿದೆ.

ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಅಗಲಿಸುತ್ತದೆ ಎಂಬ ಗಾದೆ ಮಾತು ಇಂದಿಗೂ ಸುಳ್ಳಾಗಿಲ್ಲ. ಅದರಂತೆ ಎಷ್ಟೋ ಸ್ನೇಹಿತರು ಒಂದೇ ತಟ್ಟೆಯಲ್ಲಿ ಊಟ ಮಾಡಿದವರು ಹಣದ ವಿಚಾರಕ್ಕೆ ವೈಮನಸ್ಸು , ವೈಷಮ್ಯ ಬೆಳೆಸಿಕೊಂಡಿದ್ದಾರೆ.

ಕೋಟೆನಾಡು ಚಿತ್ರದುರ್ಗ( chitradurga ) ತಾಲ್ಲೂಕಿನ ಕೊಡಗವಳ್ಳಿ ಗ್ರಾಮದಲ್ಲಿ ಕೇವಲ 150 ರೂ.ಗೆ ಕೊಲೆ ಆಗಿರುವ ಘಟನೆ ಮಂಗಳವಾರ ನಡೆದಿದ್ದು ತಡವಾಗಿ  ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅನ್ನಭಾಗ್ಯದ ಅಕ್ಕಿ ಕಳ್ಳರನ್ನು ಹಿಡಿದ ಪೋಲಿಸರಿಗೆ ಒಪ್ಪಿಸಿದ ಜ‌ನರು

ಒಂದೇ ಊರಿನ  ನಾಗರಾಜ್ (60) ಹಾಗೂ ಶೇಖರಪ್ಪ (65) ಪರಸ್ಪರ ಗೆಳೆಯರಾಗಿದ್ದರು,  ಈ‌ ಹಿಂದೆ ನಾಗರಾಜ್ ಸ್ನೇಹಿತ ಶೇಖರಪ್ಪ ಬಳಿ ಕೇವಲ 150 ರೂ. ಸಾಲವಾಗಿ ಪಡೆದಿರುತ್ತಾನೆ. ನಿತ್ಯ ಕುಡಿದು ಮನೆ ಬಾಗಿಲಿಗೆ ಬಂದು ನಾಗರಾಜ್ ನನ್ನ ಹಣ ವಾಪಾಸ್ ಕೊಡು ಎಂದು ಶೇಖರಪ್ಪ  ಗಲಾಟೆ ಮಾಡತ್ತಿರುತ್ತಾನೆ. ನಿತ್ಯ ಈ ಘಟನೆಯಿಂದ  ಬೇಸರಗೊಂಡ ಮೃತ ವ್ಯಕ್ತಿ ಶೇಖರಪ್ಪನ ಮಗ ಮಾರುತಿ ನಿತ್ಯ ಮನೆ ಮುಂದೆ  ಗಲಾಟೆ ಮಾಡುತ್ತಾನೆ. ಆತನ ಕಿರಿಕ್ ಬೇಡ ಅಂತ  ತಾನೇ 150 ರೂ. ಒಂದು ವಾರದ ಹಿಂದೆ ಕೊಟ್ಟು ಕಳಿಸಿರ್ತಾನೆ. ಆದರೂ ಸುಮ್ಮನಾಗದ ಆರೋಪಿ ಶೇಖರಪ್ಪ‌, ಅದಾಗಿಯೂ ನಿನ್ನೆ ರಾತ್ರಿಯೂ ಮೃತನ ಮನೆ ಬಾಗಿಲಿಗೆ ಬಂದು ಕಿರಿಕ್ ಪ್ರಾರಂಭಿಸುತ್ತಾನೆ..

ಈ ಇಬ್ಬರ ಮಧ್ಯೆ ಪರಸ್ಪರ ಗಲಾಟೆ ಶುರುವಾಗಿದ್ದು ಕೊನೆಯಲ್ಲಿ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ನಡೆದಿದೆ. ನಮ್ಮ ತಂದೆಯ ಸಾವಿಗೆ ನ್ಯಾಯ ಸಿಗುವವರೆಗೂ ನಾವು ಸುಮ್ಮನೆ ಇರಲ್ಲ ಎಂದು ಮೃತ ವ್ಯಕ್ತಿ ಮಗಳು ಮೀನಾಕ್ಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಈ ಘಟನೆಯು ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಪ್ರಕರಣ ದಾಖಲಾಗಿದೆ. ಗಲಾಟೆ ಮಾಹಿತಿ ನೀಡಿದ ಕೂಡಲೇ ಆರೋಪಿ ಶೇಖರಪ್ಪನನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours