ರಾಜಸ್ಥಾನ ಸರ್ಕಾರದ ಉಳಿವಿಗಾಗಿ ರಣತಂತ್ರ ಗೆಟನ್ ಆಗತ್ತಾರ ಗೆಹ್ಲೋಟ್ ?

 

ಜೈಪುರ, ಜುಲೈ 29: ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ನಡುವೆ ಪ್ರತಿಪಕ್ಷ ಬಿಜೆಪಿಗೆ ಬಿಎಸ್‌ಪಿ ವಿಲೀನ ಸಂಕಷ್ಟ ತಂದಿದೆ. ಒಂದು ವೇಳೆ ಬಿಎಸ್‌ಪಿಯ 6 ಶಾಸಕರು ಅಶೋಕ್ ಗೆಹ್ಲೋಟ್ ಸರ್ಕಾರದ ಪರವಾಗಿ ನಿಂತರೆ ಬಹುಮತದ ಲೆಕ್ಕಾಚಾರಗಳು ಉಲ್ಟಾ ಆಗಲಿವೆ. 
ಕಾಂಗ್ರೆಸ್‌ನೊಂದಿಗೆ ಬಿಎಸ್‌ಪಿ ಶಾಸಕರು ವಿಲೀನಗೊಳ್ಳುವುದನ್ನು ವಿರೋಧಿಸಿ ಮದನ್ ದಿಲ್ವಾರ್ ಎಂಬ ಬಿಜೆಪಿ ಶಾಸಕರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇನ್ನೊಬ್ಬ ಬಿಜೆಪಿ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಸೋಮವಾರ ವಜಾಗೊಳಿಸಿತ್ತು.

ಮತ್ತೊಂದು ಕಡೆ ಬಿಎಸ್‌ಪಿ ಆರು ಶಾಸಕರು ಕಾಂಗ್ರೆಸ್ ಜೊತೆ ವಿಲೀನಗೊಳ್ಳುವುದನ್ನು ವಿರೋಧಿಸಿ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಲಿದೆ. ಶಾಸಕರಿಗೆ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮತ ಚಲಾವಣೆ ಮಾಡುವಂತೆ ಬಿಎಸ್‌ಪಿ ಈಗಾಗಲೇ ಸೂಚನೆ ನೀಡಿದೆ.

ಕಾಂಗ್ರೆಸ್ ಜೊತೆ ವಿಲೀನ

ಬಿಎಸ್‌ಪಿ ವಿವಾದವೇನು?

2019ರ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ ಮುಗಿದ ಬಳಿಕ 6 ಬಿಎಸ್‌ಪಿ ಶಾಸಕರು ನಾವು ಕಾಂಗ್ರೆಸ್ ಪಕ್ಷದ ಜೊತೆ ವಿಲೀನವಾಗಿದ್ದೇವೆ ಎಂದು ಘೋಷಣೆ ಮಾಡಿದರು. ಸ್ಪೀಕರ್ ಸಹ ಇದಕ್ಕೆ ಒಪ್ಪಿಗೆ ನೀಡಿದರು. ಆದರೆ, ಬಿಎಸ್‌ಪಿ ಇದನ್ನು ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡಿದೆ ಅದರ ತೀರ್ಪು ಇನ್ನೂ ಬರಬೇಕಿದೆ. ಈಗ ಗೆಹ್ಲೋಟ್ ವಿರುದ್ಧ ಮತ ಚಲಾವಣೆ ಮಾಡಲು 6 ಶಾಸಕರು ಒಪ್ಪುತ್ತಿಲ್ಲ.

ನ್ಯಾಯಾಲಯದಲ್ಲಿ ಹೋರಾಟ

ಮಾಯಾವತಿ ಹೇಳುವುದೇನು?

ಮಂಗಳವಾರ ಬಿಎಸ್‌ಪಿ ವರಿಷ್ಠೆ ಮಾಯಾವತಿ ರಾಜಸ್ಥಾನ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ‘ಕಾಂಗ್ರೆಸ್ ವಿರುದ್ಧ ಮತದಾನ ಮಾಡುವಂತೆ 6 ಶಾಸಕರಿಗೆ ನಾವು ಸೂಚನೆ ನೀಡಿದ್ದೇವೆ. ಅವರು ಹಾಗೆ ಮಾಡದಿದ್ದಲ್ಲಿ ಅವರ ಪಕ್ಷದ ಸದಸ್ಯತ್ವ ರದ್ದಾಗಲಿದೆ. ಬಿಎಸ್‌ಪಿ ಹಿಂದೆ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿರಲಿಲ್ಲ. ಈಗ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಹೇಳಿದ್ದಾರೆ.

ವಿಲೀನ ಸಾಧ್ಯವಿಲ್ಲ

ಬಿಜೆಪಿ ವಾದವೇನು?

ರಾಜಸ್ಥಾನದ ಪ್ರತಿಪಕ್ಷ ಬಿಜೆಪಿ ಬಿಎಸ್‌ಪಿ ಮತ್ತು ಕಾಂಗ್ರೆಸ್ ವಿಲೀನ ರಾಜ್ಯ ಮಟ್ಟದಲ್ಲಿ ಆಗಲು ಸಾಧ್ಯವಿಲ್ಲ. ಎರಡೂ ರಾಷ್ಟ್ರೀಯ ಪಕ್ಷವಾದ ಕಾರಣ ರಾಷ್ಟ್ರೀಯ ಮಟ್ಟದಲ್ಲೂ ವಿಲೀನವಾಗಬೇಕು. ರಾಜಸ್ಥಾನದ ಬಿಜೆಪಿ ಶಾಸಕರು ಅಶೋಕ್ ಗೆಹ್ಲೋಟ್‌ಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ವಾದ ಮಾಡುತ್ತಿದೆ. ಈ ವಿವಾದವನ್ನು ಹೈಕೋರ್ಟ್‌ಗೆ ತೆಗೆದುಕೊಂಡು ಹೋಗಿದೆ.

ಸಂವಿಧಾನದ ಪ್ರಕಾರ

ಕಾಂಗ್ರೆಸ್‌ನ ವಕೀಲರ ಪ್ರಕಾರ ಯಾವುದೇ ಒಂದು ಪಕ್ಷದಲ್ಲಿ 3/1 ಭಾಗದಷ್ಟು ಶಾಸಕರು ಸಮ್ಮತಿ ನೀಡಿದರೆ ಅವರು ಬೇರೆ ಪಕ್ಷದ ಜೊತೆ ವಿಲೀನಗೊಳ್ಳಬಹುದು. ಆಗ ಅವರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಸಂವಿಧಾನದಲ್ಲಿಯೂ ಇದಕ್ಕೆ ಅವಕಾಶವಿದೆ

[t4b-ticker]

You May Also Like

More From Author

+ There are no comments

Add yours