ಹೊಳಲ್ಕೆರೆ : ದೇಶದ ಜನರ ಆರೋಗ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಭಾರತ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವಂತೆ ಪ್ರತಿ ಹಳ್ಳಿಗಳಲಿ ಮನೆ ಮನೆಗೆ ಹೋಗಿ ಅರಿವು ಮೂಡಿಸುವಂತೆ ಆಶಾ ಕಾರ್ಯಕರ್ತೆಯರಿಗೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
ಓದಿ: ಬಿಸಿಯೂಟ ಸೇವಿಸಿ 50 ಮಕ್ಕಳು ಅಸ್ವಸ್ಥ
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮುರವರ ಆಯುಷ್ಮಾನ್ ಭವ ಅಭಿಯಾನದ ಕಾರ್ಯಕ್ರಮಮದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭವ ಕಾರ್ಡ್ ವಿತರಿಸಿ ಮಾತನಾಡಿದರು.
ದೇಶದ 140 ಕೋಟಿ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಪತಿಯವರು ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ದೇಶದ ಪ್ರಧಾನಿ ನರೇಂದ್ರಮೋದಿರವರು ತೆರೆದಿರುವ ಜನೌಷಧಿ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಮಾತ್ರೆ ಹಾಗೂ ಔಷಧಿಗಳು ದೊರಕಿದರು ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಮೆಡಿಕಲ್ ಸ್ಟೋರ್‍ನವರ ಜೊತೆ ಶ್ಯಾಮೀಲಾಗಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಹೊರಗಿನಿಂದ ಔಷಧಿಗಳನ್ನು ತರಲು ಚೀಟಿ ಬರೆದುಕೊಡುತ್ತಿರುವುದು ದೊಡ್ಡ ಮೋಸ. ಮಾನವೀಯತೆಯಲ್ಲದ ವ್ಯವಸ್ಥೆ ಸರಿಯಾಗುವುದು ಯಾವಾಗ ಎಂದು ಮರುಕ ಪಟ್ಟರು.
ಓದಿ: ಬೃಹತ್ ಸಾಲ ಮತ್ತು ಎಕ್ಸ್ಚೇಂಜ್ ಮೇಳ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಒಂದು ರೂಪಾಯಿ ಕಟ್ಟಿ ಬೈಕ್ ಖರೀದಿಸಿ
ಗರ್ಭಿಣಿ ಮಹಿಳೆಯರಿಗೆ ಆಪರೇಷನ್ ಮಾಡಲು ಹತ್ತರಿಂದ ಮೂವತ್ತು ಸಾವಿರ ರೂ.ಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರುಗಳು ಕೇಳುತ್ತಿದ್ದಾರೆ. ಹಣ ನೀಡದಿದ್ದರೆ ದಾವಣಗೆರೆ ಇಲ್ಲವೇ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಹೇಳುವುದು ಯಾವ ನ್ಯಾಯ? ಹಾಗಾಗಿ ಬಡವರಿಗೆ ಸುಲಭವಾಗಿ ಚಿಕಿತ್ಸೆ ದೊರಕಬೇಕೆಂಬ ಉದ್ದೇಶದಿಂದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಐದು ಲಕ್ಷ ರೂ.ಗಳ ಉಚಿತ ಚಿಕಿತ್ಸೆ ದೊರಕುವ ವ್ಯವಸ್ಥೆಯನ್ನು ಭಾರತ ಸರ್ಕಾರ ಕಲ್ಪಿಸಿದೆ. ಅದಕ್ಕಾಗಿ ಎಲ್ಲರೂ ಆಯುಷ್ಮಾನ್ ಕಾರ್ಡ್ ಮಾಡಸಿಕೊಳ್ಳುವಂತೆ ಮನವರಿಕೆ ಮಾಡುವಂತೆ ಹೇಳಿದರು.
ಬೇರೆ ಬೇರೆ ರಾಷ್ಟ್ರಗಳನ್ನು ಆಹ್ವಾನಿಸಿ ಜಿ-20 ಸಭೆ ನಡೆಸಿರುವ ನಮ್ಮ ದೇಶದ ಪ್ರಧಾನಿ ಮೋದಿರವರು ದೇಶಕ್ಕೆ ಬೇಕಾದ ಮಹತ್ತರ ಯೋಜನೆಗಳನ್ನು ಘೋಷಿಸಿಕೊಂಡಿದ್ದಾರೆ. ನಮ್ಮ ದೇಶದ ಹಿಂದಿನ ಪ್ರಧಾನಿಗಳು ಹೊರದೇಶಕ್ಕೆ ಹೋಗಿದ್ದಾಗ ಏನೋ ಸಹಾಯ ಕೇಳಲು ಬಂದಿದ್ದಾರೆಂದು ಕೇವಲವಾಗಿ ಕಾಣಗಲಾಗುತ್ತಿತ್ತು. ಅದೇ ಈಗಿನ ಪ್ರಧಾನಿ ಮೋದಿರವರು ಹೊರದೇಶಕ್ಕೆ ಹೋದರೆ ರತ್ನಗಂಬಳಿ ಹಾಸಿ ಸ್ವಾಗತಿಸುವುದನ್ನು ಇಡಿ ವಿಶ್ವವೇ ಮೆಚ್ಚಿಕೊಂಡಿದೆ. 193 ಬಡ ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಅಷ್ಟರ ಮಟ್ಟಿಗೆ ಭಾರತವನ್ನು ಮುನ್ನೆಡೆಸಿದ್ದಾರೆ ನಮ್ಮ ಪ್ರಧಾನಿ ಎಂದು ಗುಣಗಾನ ಮಾಡಿದರು.
ಓದಿ: ಉದ್ಯಮಿಗೆ MLA ಟಿಕೆಟ್ ಕೊಡಸುತ್ತೇನೆ ನಂಬಿಸಿ ಏಳು ಕೋಟಿ ವಂಚನೆ, ಚೈತ್ರಾ ಕುಂದಾಪುರ ಸೇರಿ 3 ಜನ ಬಂಧನ
ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಲಸಿಕೆಯನ್ನು ಪ್ರಧಾನಿ ಮೋದಿರವರು ದೊರಕಿಸಿಕೊಟ್ಟ ಪರಿಣಾಮವಾಗಿ ಸಾವು-ನೋವಿನ ಸಂಖ್ಯೆ ಕಡಿಮೆಯಾಯಿತು. ಅದೇ ಮುಂದುವರೆದ ದೇಶಗಳಲ್ಲಿ ಇನ್ನು ಕೋವಿಡ್ ನಿಯಂತ್ರಣವಾಗಿಲ್ಲ. ಆಶಾ ಕಾರ್ಯಕರ್ತೆಯರು ಕೋವಿಡ್‍ನಂತ ಸಂಕಷ್ಠ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಹೆಣ್ಣಿಗೆ ಸೂಕ್ತ ಸ್ಥಾನಮಾನ ಕೊಡುವ ಸಲುವಾಗಿ ಪ್ರಧಾನಿ ಮೋದಿರವರು ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮುರವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಕೆಲಸ ಮಾಡಬೇಕು. ಯಾರನ್ನೋ ಮೆಚ್ಚಿಸುವ ಕೆಲಸವಾಗಬಾರದು. ಪಟ್ಟಣದಲ್ಲಿ ಅತ್ಯುತ್ತಮ ಗುಣಮಟ್ಟದ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಿಸಿದ್ದೇನೆಂದರು.
ಹೊಳಲ್ಕೆರೆ ತಹಶೀಲ್ದಾರ್ ಶ್ರೀಮತಿ ಬೀಬಿ ಫಾತಿಮ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರೇಖ, ಡಾ.ವಿನಯ್, ಪುರಸಭೆ ಸದಸ್ಯ ಮಲ್ಲಿಕಾರ್ಜುನ್, ಸಮಾಜ ಕಲ್ಯಾಣಾಧಿಕಾರಿ ಕುಮಾರಸ್ವಾಮಿ, ಕಾಂತರಾಜ್, ಶ್ರೀಮತಿ ಗೀತ, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
+ There are no comments
Add yours