ಬಿಸಿಯೂಟ ಸೇವಿಸಿ 50 ಮಕ್ಕಳು ಅಸ್ವಸ್ಥ

 

ಚಿತ್ರದುರ್ಗ : ಚಿತ್ರದುರ್ಗ  ನಗರದ ಕವಾಡಿಗರಹಟ್ಟಿ ಘಟನೆ ಮಾಸುವ ಮುನ್ನ  ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡ ಘಟನೆಗಳು  ಚಿತ್ರದುರ್ಗದ ಉರ್ದು ಶಾಲೆಯಲ್ಲಿ ನಡೆದಿದ್ದು  ಬಿಸಿಯೂಟ ತಿಂದ ಮಕ್ಕಳಲ್ಲಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಜರುಗಿದ್ದು   ಅಸ್ವಸ್ಥರಾದ ಮಕ್ಕಳನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಮಂಗಳವಾರ  ದಾಖಲು ಮಾಡಲಾಗಿದೆ. ಸದ್ಯಕ್ಕೆ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಊಟ ಸೇವಿಸಿದ ಬಳಿಕ ಮಕ್ಕಳು ವಾಂತಿಯಾಗಿದೆ. ಕಣ್ಣಮ್ಮುಚ್ಚಿ ನೋಡುವಷ್ಟರಲ್ಲಿ  ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ  ಶಿಕ್ಷಕರು ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇನ್ನು  ಆಸ್ಪತ್ರೆಗೆ ಚಿತ್ರದುರ್ಗ ನಗರ ಠಾಣೆಯ ಸಿಪಿಐ ತಿಪ್ಪೆಸ್ವಾಮಿ ಭೇಟಿ ನೀಡಿದ್ದು ಮಕ್ಕಳ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಮಕ್ಕಳು ಬಿಸಿಯೂಟದ ಬಳಿಕ ಶೇಂಗಾ ಚಿಕ್ಕಿ ಸೇವಿಸಿದ್ದರು ಎಂಬ ಮಾಹಿತಿ ಇದೆ. ಆದರೆ  ಇದರಿಂದ  ವಾಂತಿ ಭೇದಿ  ಆಗಿದೆ ಎಂಬ ಮಾಹಿತಿ  ದೃಡಪಟ್ಟಿಲ್ಲ. ಇದರ ತನಿಖೆಯ ನಂತರ ಸತ್ಯಾಂಶ ಹೊರ ಬೀಳಲಿದೆ.

ಸ್ಥಳಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಮಕ್ಕಳ ಆರೋಗ್ಯ  ವಿಚಾರಿಸಿದ್ದಾರೆ.  ಅಧಿಕಾರಿಗಳು ಸಹ  ಭೇಟಿ ನೀಡಿ ನಿರಂತರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

[t4b-ticker]

You May Also Like

More From Author

+ There are no comments

Add yours