LPG ಗ್ರಾಹಕರೇ ತಿಳಿಯಿರಿ: ನವಂಬರ್ 1 ರಿಂದ ಯಾವ ರೀತಿ ಸಿಲಿಂಡರ್ ಪಡೆಯಬೇಕು ಗೊತ್ತೆ?

 

ನವದೆಹಲಿ: ನವಂಬರ್ ನಿಂದ ಸಿಲಿಂಡರ್ ವಿತರಣೆ ನಿಯಮ ಬದಲಾವಣೆಯಾಗಲಿದೆ. ಗ್ರಾಹಕರ ಸಿಲಿಂಡರ್ ಗಳನ್ನು ಸಮರ್ಪಕವಾಗಿ ತಲುಪಿಸಲು ತೈಲ ಕಂಪನಿಗಳು ನವಂಬರ್ 1 ರಿಂದ ಹೊಸ ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿದೆ.ದೇಶೀಯ ಸಿಲಿಂಡರ್ ಕಳ್ಳತನವನ್ನು ತಡೆಯುವ ಉದ್ದೇಶ ಕೂಡ ಇದೆ ಎನ್ನಲಾಗಿದೆ.

ಈ ಹೊಸ ವ್ಯವಸ್ಥೆಯನ್ನು ಡಿಎಸಿ ಅಂದರೆ ಡೆಲಿವರಿ ದೃಢೀಕರಣ ಕೋಡ್ ಎಂದು ಕರೆಯಲಾಗುತ್ತಿದೆ. ಸಿಲಿಂಡರ್ ಬುಕ್ ಆದ ನಂತರ ನೊಂದಾಯಿತ ಮೊಬೈಲ್ ಸಂಖ್ಯೆಗೆ ಕೋಡ್ ಕಳುಹಿಸಲಾಗುತ್ತದೆ. ಡೆಲಿವರಿ ಬಾಯ್ ಮನೆಗೆ ಬಂದಾಗ ಕೋಡ್ ತೋರಿಸಬೇಕು.ನಂತರದಲ್ಲಿ ಡೆಲಿವರಿ ಬಾಯ್ ಸಿಲಿಂಡರ್ ಮನೆಗೆ ನೀಡಲಿದ್ದಾನೆ.

ಮೊಬೈಲ್ ಸಂಖ್ಯೆ ನವೀಕರಿಸದ ಗ್ರಾಹಕರಿದ್ದರೆ ಡೆಲಿವರಿ ಬಾಯ್ ಬಳಿ ಅಪ್ಲಿಕೇಷನ್ ಇರುತ್ತದೆ. ಅದರಲ್ಲಿ ಅಪ್ಡೇಟ್ ಮಾಡುವ ಮೂಲಕ ಕೋಡ್ ಪಡೆಯಬೇಕಾಗುತ್ತದೆ‌. ವಿಳಾಸ ತಪ್ಪಾಗಿರುವ ಅಥವಾ ಮೊಬೈಲ್ ನಂಬರ್ ತಪ್ಪಾಗಿರುವ ಸಂದರ್ಭದಲ್ಲಿ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. ತೈಲ ಕಂಪನಿಗಳು ಸದ್ಯ 100 ಸ್ಮಾರ್ಟ್ ಸಿಟಿಗಳಲ್ಲಿ ಈ ಯೋಜನೆ ಜಾರಿಗೆ ತರಲಿದೆ.ನಂತರದಲ್ಲಿ ಬೇರೆ ನಗರಗಳಿಗೆ ಇದನ್ನು ವಿತರಿಸುವ ಯೋಜನೆ ಇದೆ.

[t4b-ticker]

You May Also Like

More From Author

+ There are no comments

Add yours