ಕನ್ನಡ ಕಾರ್ಯಕ್ರಮಗಳು ಕುಟುಂಬದ ಹಬ್ಬಗಳಾಗಬೇಕು : ಶ್ರೀ ಯಾದವಾನಂದ ಶ್ರೀ

 

ಹೊಳಲ್ಕೆರೆ : ಕನ್ನಡ ಭಾಷೆ ಕನ್ನಡಿಗರ ಸಂಸ್ಕೃತಿ ಸದಾಚಾರಗಳ ಅಸ್ಮಿತೆಯಾಗಿದೆ. ಕನ್ನಡ ಕಾರ್ಯಕ್ರಮಗಳು ಪ್ರತಿಯೊಂದು ಕುಟುಂಬಗಳ ಹಬ್ಬ ಉತ್ಸವಗಳಾಗಬೇಕು ಎಂದು ಶ್ರೀ ಯಾದವಾನಂದ(Yadavananda)
ಸ್ವಾಮಿಗಳು ಹೇಳಿದರು.
ಎಮ್ಮೆಹಟ್ಟಿ ಟಿ.ನಾಗಮ್ಮ ಶ್ರೀ ಎನ್.ಶಿವಮೂರ್ತಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಕುಟುಂಬದವರ ಕನ್ನಡದ ಕಂದಮ್ಮನ ನಾಮಕರಣ ಪ್ರಯುಕ್ತ ಕನ್ನಡದ ಮನಸ್ಸುಗಳಿಗೆ ಸಂಸ್ಕಾರ ಸಂಸ್ಕೃತಿ ದಿಬ್ಬಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು, ಎನ್.ಶಿವಮೂರ್ತಿ ಕುಟುಂಬದವರು ನಾಮಕರಣದಂತ ಕಾರ್ಯಕ್ರಮದಲ್ಲಿ ಕನ್ನಡದ ಸಂಸ್ಕೃತಿ ಪಸರಿಸುವ ಉಪನ್ಯಾಸ ಹಾಗು ವಚನಗಳ ಪ್ರಸ್ತುತಿಯ ಕಾರ್ಯಕ್ರಮ ಏರ್ಪಡಿಸಿ ಈ ಮೂಲಕ ನೆರೆದ ಎಲ್ಲ ಬಂಧು ಬಳಗಕ್ಕು ಸದ್ವಿಚಾರಗಳ ಉಣಬಡಿಸಿ ಅರ್ಥಪೂರ್ಣ ಕೌಟುಂಬಿಕ ಕನ್ಬಡತನದ ಹಬ್ಬ ನೆರವೇರಿಸುತ್ತಿದ್ದಾರೆ. ಕನ್ನಡ ಭಾಷೆ ಉಳಿಸಿ ಬೆಳೆಸುವುದು ಕೇವಲ ಸರ್ಕಾರದ ನೀತಿ ನಿಯಮಗಳಾಗಬಾರದು. ಅದು ಪ್ರತಿ ಕನ್ನಡಿಗರ ಸಾರ್ವಜನಿಕರ ಜವಾಬ್ದಾರಿಯಾಗಬೇಕು. ನಮ್ಮ ಮನೆ ಮನಸ್ಸುಗಳು ಕನ್ನಡತನದ ಉಸಿರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾಯಕಯೋಗಿ ಜಗದ್ಗುರು ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ, ಕುಲ ಜಾತಿ ಧರ್ಮದ ಸಂಕೋಲೆಗಳನ್ನು ತ್ಯಜಿಸಿದರೆ ವ್ಯಕ್ತಿ ಮಹಾಮಾನವನಾಗುತ್ತಾನೆ. ಕುಟುಂಬದ ಪ್ರತಿ ಮಗುವ ಸದ್ಗುಣ ಸಂಪನ್ನರಾಗಬೇಕು ಎಂದರೆ ಎಲ್ಲ ಮಹನೀಯರ ಜೀವನ ವಿಚಾರಗಳು ಆದರ್ಶಗಳನ್ನು ತಿಳಿಯಪಡಿಸಿ ಬೆಳೆಸಬೇಕು ಎಂದರು.
ಮ.ನಿ.ಪ್ರ.ಶ್ರೀ ಶ್ರೀ ಡಾ.ಗುರುಬಸವ ಮಹಾಸ್ವಾಮಿಗಳು ಮತ್ತು ಬ್ರಹ್ಮಕುಮಾರಿ ಸುಮಿತ್ರಕ್ಕನವರು ಆಶಿರ್ವಚನ ನೀಡಿದರು.
ವೇದಿಕೆಯಲ್ಲಿ ಹೊಳಲ್ಕೆರೆ ಶಾಸಕರಾದ ಡಾ.ಎಂ.ಚಂದ್ರಪ್ಪ, ಕರ್ನಾಟಕ ರಾಜ್ಯ ಯಾದವ ಸಂಘದ ಅಧ್ಯಕ್ಷರಾದ ಜಿ.ಟಿ.ಶ್ರೀನಿವಾಸ, ಮಾಜಿ ನಗರಸಭೆ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಆನಂದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಇಂದಿರಾ ಕಿರಣಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶಿವಕುಮಾರ್ ಶಿವಪುರ, ಪಟ್ಟಣ ಪಂಚಾಯಿತಿ ಹೊಳಲ್ಕೆರೆ ಉಪಾಧ್ಯಕ್ಷರಾದ ಕೆ.ಸಿ.ರಮೇಶ, ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮೋಹನ ನಾಗರಾಜ, ನಿವೃತ್ತ ಇಂಜಿನಿಯರ್ ಗೌಡಿಹಳ್ಳಿ ಷಣ್ಮುಖಪ್ಪ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಹಾಲೇಶ್, ಕರ್ನಾಟಕ ಸರ್ಕಾರಿ ನೌಕರರ ಸಂಘ ಹೊಳಲ್ಕೆರೆ ಅಧ್ಯಕ್ಷರಾದ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಅಧ್ಯಕ್ಷರಾದ ಎನ್.ಶಿವಮೂರ್ತಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಬಸವರಾಜ್, ಎ.ಬಂಗಾರಪ್ಪ, ಹಿಂದುಳಿದ ವರ್ಗಗಳ ಯುವ ಮೋರ್ಚಾ ಹೊಳಲ್ಕೆರೆ ಅಧ್ಯಕ್ಷರಾದ ಯುವರಾಜ, ನಾಗೇಂದ್ರಪ್ಪ, ಜಗದೀಶ್, ಪ್ರಚಾರ್ಯರಾದ ಎನ್.ಧನಂಜಯ್, ಹೊಸದುರ್ಗ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಲಕ್ಷ್ಮಣಪ್ಪ, ಮೊಳಕಾಲ್ಮೂರು ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ, ಜ್ಞಾನ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಕೆ.ಬಸವರಾಜ, ರಂಗನಾಥ ವಿದ್ಯಾಸಂಸ್ಥೆ ಅಧ್ಯಕ್ಷರಾದ ವೀರಕರಿಯಪ್ಪ, ಯಾದವ ನೌಕರ ಸಂಘದ ಅಧ್ಯಕ್ಷರಾದ ಆರ್.ಕೃಷ್ಣಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್, ನಾಗರಾಜ ಕಾಕನೂರ, ರಾಷ್ಟ್ರ ಯುವ ಪ್ರಶಸ್ತಿ ವಿಜೇತರಾದ ಚಿತ್ತಪ್ಪ ಯಾದವ್, ಡಿಸಿ ಮೋಹನ್, ಹೊಳಲ್ಕೆರೆ ತಾಲ್ಲೋಕು ಭೂ ದಾಖಲೆಗಳ ಇಲಾಖೆಯ ನೌಕರರು, ಶಿರಸ್ತೆದಾರ ವಿಭಾಗದ ಮಂಜುನಾಥ್ ಮತ್ತು ಬಂಧು ಬಳಗದವರು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours